ಕಲಬುರಗಿ: ವಿಶೇಷ ರೀತಿಯಲ್ಲಿ ಸಮಾಜಕ್ಕೆ ತನದ ಕುಡುಗೆ ನೀಡುತ್ತಿರುವ ದರ್ಗಾದ ಪೀಠಾಧಿಪತಿಗಳ ವಿರುದ್ಧ ಸರಕಾರ ಮತ್ತು ವಕ್ಫ ಬೋರ್ಡ್ ಹೊಸ ಹೊಸ ಕಾನೂನುಗಳು ಜಾರಿಗೆ ತಂದು ಈಕಟ್ಟಿಗೆ ಸಿಲುಕಿಸುವ ಸಂಚು ನಡೆಸುತ್ತಿದೆ ಎಂದು ಖಾಜಾ ಗರೀಬ್ ನವಾಜ್ (ರ.ಅ) ಅಜಮೀರ್ ಶರೀಫ ದರ್ಗಾದ ಪೀಠಾಧಿಪತಿ ದೇವನ್ ಜೈನುಲ್ ಆಬಿದಿನ್ ಅಲಿ ಖಾನ್ ಹೇಳಿದರು.
ಅವರು ಇಂದು ನಗರದ ಕೆಬಿಎನ್ ವಿಶ್ವ ವಿಶ್ವ ವಿದ್ಯಾಲಯದ ಖಾಜಾ ಬಂದಾ ನವಾಜ್ ಸಭಾಂಗಣದಲ್ಲಿ ಆಲ್ ಇಂಡಿಯಾ ಸೂಫಿ ಸಜ್ಜಾದಾ ನಶೀನ್ ಕೌನ್ಸಿಲ್ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಆಲ್ ಇಂಡಿಯಾ ಸೂಫಿ ಸಜ್ಜಾದಾ ನಶೀನ್ ಕೌನ್ಸಿಲ್ ದೇಶದ ಎಲ್ಲಾ ದರ್ಗಾಗಳ ಪೀಠಾಧಿಪತಿ ಹಾಗೂ ಮುತ್ತೂವಲ್ಲಿಗಳ ಹಿತ ಕಾಪಾಡುವ ಹಿತದೃಷ್ಟಿಯಿಂದ ಈ ಕೌನ್ಸಿಲ್ ಮಾಡಲಾಗಿದ್ದು, ಯಾವುದೇ ರಾಜಕೀಯ ಪ್ರೇರಿತವಾಗಿರುವುದಿಲ್ಲ. ರಾಜಕೀಯಕ್ಕೆ ಮತ್ತು ಕೌನ್ಸಿಲ್ ಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾನೂನು ಮೂಲಕ ಪೀಠಾಧಿಪತಿಗಳ ಸಮಾಜಿಕ ಕಾರ್ಯಾವನ್ನು ತಡೆಯುವ ಕೆಲಸಗಳು ಜಾರಿಯಾಗುತ್ತಿರುವ ನೂತನ ಕಾನೂನುಗಳ ಮಾಡುತ್ತಿವೆ ಅದರ ವಿರುದ್ಧವಾಗಿ ಈ ಕೌನ್ಸಿಲ್ ತನ್ನ ಧ್ವನಿ ಎತ್ತಲಿದೆ. ವಕ್ಫ ಅಕ್ಟ್ ನಲ್ಲಿ ಬದಲಾವಣೆಗಳು ದರ್ಗಾಗಳ ಧಕ್ಕೆ ತರುವ ಕೆಲಸವಾಗಿದೆ ಎಂದು ತಿಳಿಸಿದರು.
ದೇಶದ ಕೆಲವು ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಕೌನ್ಸಿಲ್ ಇದನ್ನು ಖಂಡಿಸುತದೆ. ಇದರ ನೆರಳಲ್ಲಿ ಕೆಲವು ಮೂಲಭೂತವಾದಿಗಳು ಪವಿತ್ರ ಖುರಾನ್ ಸುಡುವ ಘಟನೆಗಳ ಕೌನ್ಸಿಲ್ ಸಹಿಸುವುದಿಲ್ಲ. ದೇಶದಲ್ಲಿ ಜಾರಿಯಾಗುತ್ತಿರುವ ಅವೈಜ್ಞಾನಿಕ ಕಾನೂನುಗಳ ದೇಶದ ಶಾಂತಿ ಮತ್ತು ಸೌಹಾರ್ದತೆಯ ಧಕ್ಕೆತರುವಂತಾಗಿದೆ. ದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಕೆಬಿಎನ್ ದರ್ಗಾದ ಪೀಠಾಧಿಪತಿ ಹಾಗೂ ಕೆಬಿಎನ್ ವಿಶ್ವ ವಿದ್ಯಾಲಯದ ಕುಲಪತಿ ಡಾ. ಸಯದ್ ಶಾ ಗೇಸುದರಾಜ್ ಖೂಸ್ರೊ ಹುಸೈನಿ ಮಾತನಾಡಿ, ವಕ್ಫ ಸಂಸ್ಥೆ ಕೇವಲ ವಕ್ಫ ಆಸ್ತಿಗಳ ಮೇಲೆ ನಿಗಾವಹಿಸುವ ಕೆಲಸ ಮಾಡುತ್ತಿದೆ. ದರ್ಗಾದ ಮತ್ತು ಪೀಠಾಧಿಪತ್ಯದ ಕುರಿತು ನಿಲುವ ತೆಗೆದುಕೊಳ್ಳುವ ಯಾವುದೇ ರೀತಿಯ ಅಧಿಕಾರ ಸಂಸ್ಥೆಗೆ ಇಲ್ಲ. ವಕ್ಫ ಆಸ್ತಿಯ ಹನಿಯಾಗದಂತೆ ಮತ್ತು ದುರ್ಬಳಕೆಯಾಗದಂತೆ ತಡೆಯುವುದು ಅದರ ಕೆಲಸವಾಗಿದೆ.
ಸಜ್ಜಾದಾ ನಶೀನ್ ಹಕ್ಕುಗಳಿಗೆ ಚುತಿರುವಂತೆ ವಕ್ಫ ಆಕ್ಟ್ ಹೇಳುವುದಿಲ್ಲ. ಮುತೂವಲ್ಲಿ ಕುರಿತು ಆಕ್ಟ್ ನಲ್ಲಿ ಕೆಲವು ಕಾನೂನುಗಳು ಇವೆ. ಕೆಲವು ಅಕ್ಟ್ ಗಳು ಮುತ್ತೂವಲ್ಲಿ ವಿರುದ್ಧವಾಗಿದ್ದು, ನಾವು ಅವರೊಂದಿಗೆ ಇದ್ದೇವೆ. ದರ್ಗಾಗಳ ಆಸ್ತಿಗಳು ಮತ್ತು ಸಂಸ್ಥೆಗಳು ರಕ್ಷಿಸಿ ಅದರ ಪೋಷಿಸುವ ಜವಾಬಾದಾರಿ ನಮ್ಮದಾಗಿದೆ ಎಂದರು.
ಸಭೆಯಲ್ಲಿ ಕಲಬುರಗಿ ಸೇರಿದಂತೆ ರಾಜ್ಯದ ಎಲ್ಲಾ ಪ್ರತಿಷ್ಠಿತ ದರ್ಗಾಗಳ ಪೀಠಾಧಿಪತಿಗಳು ಸಭೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕೌನ್ಸಿಲ್ ನ ರಾಜ್ಯ ಸಂಚಾಲಕರಾಗಿ ಅಲಿ ಜಕ್ಕಿ ಹುಸೈನಿಗೆ ಅವರಿಗೆ ನೇಮಕ ಮಾಡಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಪೀಠಾಧಿಪತಿಗಳ ಸಮಸ್ಯೆಗಳನ್ನು ಆಲಿಸಿದರು.