ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಒಡೆದ ಟೆಂಗು ಗುತ್ತಿಗೆ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹ

0
96

ಕಲಬುರಗಿ: ಕಾಳಗಿ ತಾಲೂಕಿನ ರೇವಣ್ಣ (ರಟಕಲ್) ಗ್ರಾಮದಲ್ಲಿರುವ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಒಡೆದ ಟೆಂಗು (ಹಸಿ ಟೆಂಗು) ಗುತ್ತಿಗೆ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹಿಂದಿನ ಪದ್ಧತಿಯಂತೆ ಅರ್ಚಕರಿಗೆ ನೀಡುವಂತೆ ವಿರಶೈವ ಸಮಾಜದ ಚಿಂಚೋಳಿ ತಾಲ್ಲೂಕು ಅಧ್ಯಕ್ಷರಾದ ಸಂಜೀವ್ ಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

15 ರಂದು 1 ವರ್ಷದ ಅವಧಿಗೆ ಗುತ್ತಿಗೆ ನೀಡಲು ಬಹಿರಂಗವಾಗಿ ಹರಾಜು ಮಾಡಲು ಪ್ರಕಟಣೆ ಹೊರಡಿಸಿದ್ದು, ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅರ್ಚಕರು ಸುಮಾರು 200 ವರ್ಷಗಳಿಂದ ದೇವರ ಪೂಜೆ ಮಾಡುತ್ತಾ ಬರುತ್ತಿದ್ದು ಹಾಗೂ ಅವರ ಉಪ ಜೀವನವನ್ನು ದೇವಸ್ಥಾನಕ್ಕೆ ಬರುವ ಭಕ್ತರು ಒಡೆದ ಟೆಂಗಿನಿಂದ ಬರುವ ಅಲ್ಪ ಸ್ವಲ್ಪ ಆದಾಯದಿಂದಲೇ 5 ಕುಟುಂಬಗಳು ಉಪ ಜೀವನವನ್ನು ಮಾಡುತ್ತಾ ತಲೆತಲಾಂತರದಿಂದ ಬರುತ್ತಿದ್ದಾರೆ ಹಾಗೂ ಅವರು ಸರ್ಕಾರದಿಂದ ಯಾವುದೇ ವೇತನವನ್ನು ಪಡೆಯದೇ ದೇವರ ಪೂಜೆಯನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ.

Contact Your\'s Advertisement; 9902492681

ಸದರಿ ದೇವಸ್ಥಾನದ ಹಳಯೆ ಪದ್ದತಿಯಂತೆ ಅರ್ಚಕರ ಉಪ ಜೀವನಕ್ಕಾಗಿ ಅನುಕೂಲವಾಗುವಂತೆ ದೇವಸ್ಥಾನದಲ್ಲಿ ಭಕ್ತಾರು ಒಡೆಯುವ ಟೆಂಗು (ಹಸಿ ಟೆಂಗು) ಹರಾಜು ಪ್ರಕ್ರಿಯೆಯನ್ನು ಕೈಬಿಟ್ಟು ಹಳೆಯ ಪದ್ಧತಿಯನ್ನು ಅರ್ಚಕರಿಗೆ ನೀಡಬೇಕೆಂದು ವೀರಶೈವ ಸಮಾಜ ವತಿಯಿಂದ ವಿನಂತಿಸಿದ್ದು, ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದರೆ ರೇವಣ್ಣ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆಂದು ಎಂದು ಸಮಾಜ ತಾಲೂಕ ಯುವ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ, ತಾಲೂಕ ವೀರಶೈವ ಸಮಾಜದ ಮುಖಂಡರಾದ ಆನಂದ್ ಹಿತ್ತಲ್, ಶಂಕರ ಶಿವಪುರಿ, ನಾಗರಾಜ್ ಮಲಕೂಡ್, ನಾಗರಾಜ ಸೀಳಿನ್, ನಾಗೇಶ್ ಸುಂಕದ, ಸುನಿಲಕುಮಾರ ಮನ್ನಳ್ಳಿ, ಹಣಮಂತ ಕೋರೆ, ವಿಶ್ವನಾಥರೆಡ್ಡಿ ಚಿಮ್ಮಂಚೋಡ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here