ಕೋಲಾರ: ಕಾನೂನು ಸೇವಾ ಪ್ರಾಧಿಕಾರ ಕೋಲಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ವಡಗೂರು ಗ್ರಾ.ಪಂ. ಕೋಲಾರ ತಾಲ್ಲೂಕು ಇಲ್ಲಿ ನಡೆಸಲಾಯಿತು.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಬಹುಮುಖ್ಯವಾಗಿ ಬೇಕಾಗಿದೆ. ಅದರಲ್ಲು ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಜೀವನದ ಮಹತ್ತರ ಘಟ್ಟವನ್ನು ತಲುಪಲು ಮೊದಲು ನಕಾರಾತ್ಮಕ ಭಾವನೆಯನ್ನು ತೊಲಗಿಸಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಮುನಿರಾಜಪ್ಪ.ಬಿ.ಎಂ.ರವರು ತಿಳಿಸಿದರು.
ಜೊತೆಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಯೋಜನೆಗಳ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.