ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕ ಉರ್ಸ್

0
29
ಆಳಂದ: ಪಟ್ಟಣದ ಐತಿಹಾಸಿಕ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕರ ಉರ್ಸ್ ಅಂಗವಾಗಿ ದರ್ಗಾಕ್ಕೆ ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿವೆ.

ಆಳಂದ: ಈ ಭಾಗದ ಪ್ರಸಿದ್ಧ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕರ  ನ. ೧೫ರಿಂದ ಎರಡಿ ದಿನಗಳ ಕಾಲ ನಡೆಯಲಿರುವ ೬೬೬ನೇ ಉರ್ಸ್‌ನ ಭರದ ಸಿದ್ಧತೆ ನಡೆದಿದೆ ಎಂದು ದರ್ಗಾ ಕಮೀಟಿಯ ಅಧ್ಯಕ್ಷರುಗಳಾದ ಆಸೀಫ್ ಅನ್ಸಾರಿ ಕಾರಬಾರಿ, ಮೋಹಿಜ್ ಕಾರಬಾರಿ ಅವರು ಜಂಟಿಯಾಗಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರ್ಸ್ ನಿಮಿತ್ತ ಈಗಾಗಲೇ ದರ್ಗಾ ಮತ್ತು ಆವರಣ ಗೋಡೆ ಸುಣ್ಣ, ಬಣ್ಣದಿಂದ ಕಂಗೊಳಸುತ್ತಿದ್ದು ಹಾಗೂ ಚಾರಮಿನಾರಗೆ ಅಲಂಕೃತ ವಿದ್ಯುತ್ ದೀಪಾಲಂಕರ ಕೈಗೊಂಡಿದ್ದು ನೋಡುಗರನ್ನು ಆಕರ್ಶಿಸುತ್ತಿದೆ.

Contact Your\'s Advertisement; 9902492681

ಬರುವ ನ. ೧೫ರಂದು ಗಂಧೋತ್ಸವ ಪಟ್ಟಣದ ತಹಸೀಲ್ದಾರ ಕಚೇರಿಯಿಂದ ಹೊರಟು ಪ್ರಮುಖ ರಸ್ತೆಗಳ ಮೂಲಕ ಬೆಳಗಿನ ಜಾವ ಲಾಡ್ಲೆ ಮಶಾಕರ ದರ್ಗಾಕ್ಕೆ ತಲುಪಲಿದೆ. ನ. ೧೬ರಂದು ದೀಪೋತ್ಸವ ಮಧ್ಯಾಹ್ನ ಖವಾಲಿ ಕಾರ್ಯಕ್ರಮ ಜರುಗಲಿದೆ. ಉರ್ಸ್ ನಿಮಿತ್ತ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ದೂರದಿಂದ ಬರುವ ಭಕ್ತಾದಿಗಳಿಗೆ ವಸತಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಉರ್ಸ್ ಅಂಗವಾಗಿ ಈಗಾಗಲೇ ಅಂಗಡಿ, ಮುಗ್ಗಟುಗಳು ತೆರೆದುಕೊಂಡಿವೆ ದರ್ಗಾಕ್ಕೆ ಬರುವ ಭಕ್ತಾದಿಗಳು ಶಾಂತತೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಉರ್ಸ್‌ನಲ್ಲಿ ಹೈದರಾಬಾದ, ಮುಂಬೈ, ದೆಹಲಿ, ಪುಣೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ದರ್ಗಾದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಗಳಲ್ಲಿ ಸಾಹಿತಿಗಳು ಮತ್ತು ಧಾರ್ಮಿಕ ಮುಖಂಡರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಸಂದರ್ಭದಲ್ಲಿ ಕಮೀಟಿ ಕಾರ್ಯದರ್ಶಿ ಕಲೀಲ ಅನ್ಸಾರಿ, ಸೈಫಾನ್ ಮೂಲಕ ಅನ್ಸಾರಿ, ರಮ್ಮು ಅನ್ಸಾರಿ, ಆರೀಫ್ ಅನ್ಸಾರಿ, ಮುಕ್ಸುದ್ ಅನ್ಸಾರಿ, ಮುಕದುಮ ಅನ್ಸಾರಿ, ಇಪ್ತೆಕಾರ ಅನ್ಸಾರಿ, ಇಸೂಫ್ ಕಾರಬಾರಿ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here