ಸುರಪುರ: ನಗರದ ಬುದ್ಧನ ವಿಹಾರದಲ್ಲಿನ ಬುದ್ಧನ ಮೂರ್ತಿ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಘಟನೆಯಲ್ಲಿನ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ಮುಖಂಡರು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಿಗ್ಗೆ ನಗರದ ಬುದ್ಧನ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಬುದ್ಧ ವಿಹಾರದಲ್ಲಿನ ಬುದ್ಧನ ಮೂರ್ತಿ ಭಗ್ನಗೊಳಿಸಿದ ಪ್ರಕರಣದಲ್ಲಿ ಪೊಲೀಸರು ಕೇವಲ ಇಬ್ಬರನ್ನು ಮಾತ್ರ ಬಂಧಿಸಿ ಕೈತೊಳೆದುಕೊಳ್ಳುತ್ತಿರುವುದು ನೋವಿನಸಂಗತಿಯಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಕ್ಕೆ ಪೊಲೀಸರಿಗೆ ಬಹುಮಾನ ಘೋಷಿಸಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಇನ್ನೂ ಅನೇಕರು ಇರುವ ಸಾಧ್ಯತೆಯಿದ್ದು ಪ್ರಕರಣದ ಕುರಿತು ಸರಿಯಾದ ತನಿಖೆ ನಡೆಸಿ ಇನ್ನುಳಿದ ಆರೋಪಿಗಳನ್ನು ಬಂಧಿಸಬೇಕು ಮತ್ತು ಬುದ್ಧ ವಿಹಾರದ ಅಭೀವೃಧ್ಧಿಗೆ ಆದ್ಯತೆ ನೀಡಬೇಕು ಹಾಗು ೧೦ ಎಕರೆ ಬುದ್ಧ ವಿಹಾರದ ಸ್ಥಳ ಮಂಜೂರು ಮಾಡಿ ದಾಖಲಾತಿಗಳನ್ನು ನೀಡಬೇಕು.ಈ ನಮ್ಮ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಿ ತಾಲೂಕಿನ ಎಲ್ಲಾ ೫ ಹೋಬಳಿಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ,ಮಾನಪ್ಪ ಕಟ್ಟಿಮನಿ,ಮಲ್ಲಿಕಾರ್ಜು ಸತ್ಯಂಪೇಟೆ,ವೆಂಕಟೇಶ ಬೇಟೆಗಾರ,ರಮೇಶ ದೊರೆ ಆಲ್ದಾಳ,ನಿಂಗಣ್ಣ ಗೋನಾಲ,ಮಾನಪ್ಪ ಬಿಜಾಸಪುರ,ಚಂದ್ರಶೇಖರ ಹಸನಾಪುರ,ಮಾನಪ್ಪ ಕರಡಕಲ್,ರಾಜು ದೊಡ್ಮನಿ,ಪಿಡ್ಡಪ್ಪ ಜಾಲಗಾರ,ವೀರಭದ್ರಪ್ಪ ತಳವಾರಗೇರಾ,ಜೆಟ್ಟೆಪ್ಪ ನಾಗರಾಳ,ಮಹಾದೇವಪ್ಪ ಬಿಜಾಸಪುರ,ಹಣಮಂತ ಬಾಂಬೆ,ಖಾಜಾಹುಸೇನ ಗುಡಗುಂಟಿ,ಭಾಗಪ್ಪ ದೇವಿಕೇರಿ,ಮರಿಲಿಂಗಪ್ಪ ಹುಣಸಗಿ,ಮಹೇಶ ಯಾದಗಿರಿ,ಮಲ್ಲೇಶ ಬಡಿಗೇರ ಸೇರಿದಂತೆ ಅನೇಕರಿದ್ದರು.