ಕಲಬುರಗಿ: ಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ 2021-22 ಸಾಲಿಗಾಗಿ ದಿನಾಂಕ 13-11-2021 ರಂದು ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು.
ಬೆಳಗಿನ 10 ಗಂಟೆಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭಗೊಂಡಿತು ಮೊದಲ ಬಿ.ಎ,ಬಿ.ಎಸ್ಸಿ,ಬಿ.ಕಾಂ, ಬಿ.ಬಿ.ಎ ಪ್ರಥಮ,ದ್ವಿತೀಯ ಹಾಗೂ ಅಂತಿಮ ವರ್ಗಗಳ ಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡಿದರು. ಪ್ರಾರಂಭದಲ್ಲಿ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯಕೈಕೊಂಡರು. ಎರಡನೇ ಅವಧಿಗೆ ಮತ ಚಲಾಯಿಸಿದರು. ಎಲ್ಲ ವರ್ಗಗಳ ಪ್ರತಿನಿಧಿ ಹುದ್ದೆಗೂ ತುರುಸಿನ ಪೈಪೋಟಿ ನಡೆದದ್ದು ಗಮನ ಸೆಳೆಯಿತು.
ನಂತರ ಮಧ್ಯಾಹ್ನಕ್ಕೆ ಉಪಾಧ್ಯಕ್ಷ ,ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಕ್ರೀಡಾ ಕಾರ್ಯದರ್ಶಿ ಹುದ್ದೆಗಳಿಗಾಗಿ ಚುನಾವಣೆ ನಡೆಯಿತು. ಪ್ರತಿ ಹುದ್ದೆಗೂ ತುರುಸಿನ ಪೈಪೋಟಿ ನಡೆದು ಮೂವರಿಗಿಂತಲೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಒಂದು ವರ್ಗ ಪ್ರತಿನಿಧಿ ಹುದ್ದೆಗೆ ಸಮಾನ ಮತಗಳು ಬಂದು ಸದರಿ ಹುದ್ದೆ ಪುನಃ ಚುನಾವಣೆ ನಡೆಸಲಾಯಿತು. ಒಟ್ಟಾರೆ ವಿದ್ಯಾರ್ಥಿನಿಯರು ನಾಮ ಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ, ಠೇವಣಿ ಇಡುವುದು. ಪ್ರಚಾರ, ಮತದಾನ ನಂತರ ಮತ ಎಣಿಕೆ, ಫಲಿತಾಂಶ ಪ್ರಕಟನೆ, ವಿಜೇತ ಸಂಭ್ರಮ ಇತ್ಯಾದಿ ಎಲ್ಲ ಚಟುವಟಿಕೆಗಳನ್ನು ಅರ್ಥಪೂರ್ಣ ವಾಗಿ ಆಚರಿಸಿದರು.
ಆರತಿ ಜೋಷಿ ಬಿಬಿಎಂ ಅಂತಿಮ ವರ್ಷ ಉಪಾಧ್ಯಕ್ಷೆಯಾಗಿ, ಕು,ಭವಾನಿ ಎಂ. ಬಿಎಸ್ಸಿ ಅಂತಿಮ ಪ್ರಧಾನ ಕಾರ್ಯದರ್ಶಿ ಯಾಗಿ, ಜಸ್ಮೀತಾ ಡಬ್ಲ್ಯೂ, ಬಿ ಎಸ್ಸಿ ದ್ವಿತೀಯ ಸಹ ಕಾರ್ಯದರ್ಶಿ ಯಾಗಿ, ನಿಖಿತಾ ಬಿ.ಎಸ್ಸಿ ಅಂತಿಮ ಕ್ರೀಡಾ ಕಾರ್ಯದರ್ಶಿ ಯಾಗಿ, ಸಿದ್ದಿ ಎಸ್ ಬಿ ಎಸ್ಸಿ ಪ್ರಥಮ ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಆಯ್ಕೆಗೊಂಡರು. ಒಟ್ಟು ಇಪ್ಪತೈದು ವರ್ಗ ಪ್ರತಿನಿಧಿಗಳ ಗಜಗಾತ್ರದ ವಿದ್ಯಾರ್ಥಿ ಸಂಘವು ಅಸ್ತಿತ್ವಕ್ಕೆ ಬಂದಿತು. ಈ ಸಂದರ್ಭದಲ್ಲಿ ಮಾನ್ಯ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಅವರು ಅಯ್ಕೆಯಾದ ಸದಸ್ಯರಿಗೆ ಘೋಷಣಾ ಪತ್ರ ನೀಡಿ ವರ್ಷದುದ್ದಕ್ಕೂ ಸಂಘವನ್ನು ಕ್ರಿಯಾಶೀಲ ವಾಗಿಡುವಂತೆ ಹುರಿದುಂಬಿಸಿದರು.
ಚುನಾವಣಾ ಅಧಿಕಾರಿಯಾಗಿ ಡಾ ಮೀನಾಕ್ಷಿ ಬಾಳಿಯವರು ಸೂಸೂತ್ರವಾಗಿ ಕಾರ್ಯ ನಿರ್ವಹಿಸಿದರು. ಡಾ ರೇಣುಕಾ ಪಾಟೀಲ ಡಾ. ನಾಗರತ್ನ ಎಸ್, ರೀಟಾ ಕುಲಕರ್ಣಿ ಇವರುಗಳು ಚುನಾವಣಾ ಕಮಿಟಿ ಯ ಸದಸ್ಯರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. ಇಡೀ ದಿನ ಮಹಾವಿದ್ಯಾಲಯವು ಮತದಾನದ ಕಾವು ಮತ್ತು ಸಂಭ್ರಮದಿಂದ ಲೋಲಾಡಿತು.