ಬೆಳಗೆರೆ ಪ್ರಬುದ್ಧ ಬರಹಗಾರ: ಮುನ್ನೂರ್

1
151

ಕಲಬುರಗಿ: ಪತ್ರಕರ್ತ, ಸಾಹಿತ್ಯ ಲೋಕದ ಧೃವತಾರೆ ಒಬ್ಬ ಪ್ರಬುದ್ಧ ಬರಹಗಾರರಾಗಿದ್ದರು. ಅವರು ಇನ್ನಷ್ಟು ದಿನ ಬದುಕಬೇಕಿತ್ತು. ಮೊನ್ನೆ ಮೊನ್ನೆಯೆ ಅಗಲಿದಂತಾಗಿದ್ದ ರವಿ ಬೆಳಗೆರೆ ತೀರಿ ಹೋಗಿ ವರ್ಷ ಕಳೆದಿರುವುದು ಅರಿವಿಗೆ ಬರದಂತಾಗಿದೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಭಾವುಕರಾಗಿ ನುಡಿದರು.

ನಗರದ ಪತ್ರಿಕಾ ಭವನದಲ್ಲಿ ಹೆಚ್. ಶಿವರಾಮೇಗೌಡರ ಕರವೇ ಹಮ್ಮಿಕೊಂಡಿದ್ದ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಅವರ ಪ್ರಥಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ರವಿ ಬೆಳಗೆರೆ ಎಂದರೆ ಪತ್ರಕರ್ತರಿಗೆ ಸ್ಪೂರ್ತಿ ಇದ್ದಂತೆ. ಅವರು ಬದುಕಿದ್ದರೆ ಇನ್ನಷ್ಟು ಪುಸ್ತಕಗಳು, ಆಡಿಯೋ ರೆಕಾರ್ಡಿಂಗ್ ಹೊರ ಬರುತ್ತಿದ್ದವು. ಇಂದಿಗೂ ಅವರು ಬರೆದಿಟ್ಟ ಕಾದಂಬರಿ ಪುಸ್ತಕಗಳು ಮುದ್ರಣಗೊಳ್ಳುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಡಾ. ನಾಗೇಂದ್ರ ಮಸೂತಿ, ಜಿ.ಎಸ್. ಮಾಲಿಪಾಟೀಲ್, ಬರಹಗಾರರಾದ ಮಂಗಲಾ ಕಪರೆ, ಚಾಮರಾಜ ದೊಡ್ಡಮನಿ, ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ, ಹೆಚ್. ಶೇಷಗಿರಿ, ಸಂತೋಷ ನಾಡಗಿರಿ ಅವರನ್ನು ಗೌರವ ಸತ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ವ.ಚ. ಚನ್ನೇಗೌಡ, ಸುರೇಶ ಬಡಿಗೇರ, ರಹೆಮಾನ ಮಸ್ಕಿ, ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್, ಪ್ರಲ್ಹಾದ ಹಡಗಿಲಕರ್, ಚರಣರಾಜ ರಾಠೋಡ, ನಾಗರಾಜ ಮಡಿವಾಳ, ರಾಹುಲ್ ಉಪಾಧ್ಯಾಯ, ಯಲ್ಲಯ್ಯ ಗುತ್ತೇದಾರ ಇನ್ನಿತರರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here