ಸುರಪುರ: ಬೆಂಗಳೂರು ಮೂದ ಕಿಸಾನ್ ಆಗ್ರೊ ಟೆಕ್ ಎಂಬ ಹೆಸರಿನ ಕಂಪನಿಯ ಮೂಲಕ ತಾಲ್ಲೂಕಿನಲ್ಲಿ ಕಿಸಾನ್ ಸುರಕ್ಷಾ ಕಾರ್ಡ ವಿತರಿಸಲಾಗುತ್ತಿದೆ.ಇದನ್ನು ಕೂಡಲೆ ತಡೆಯುವಂತೆ ಜಯ ಕರ್ನಾಟಕ ಸಂಘಟನೆ ತಾಲ್ಲೂಕಾಧ್ಯಕ್ಷ ರವಿಕುಮಾರ ನಾಯಕ ಆಗ್ರಹಿಸಿದದರು.
ಶನಿವಾರ ತಹಸೀಲ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿ,ಬೆಂಗಳೂರಿನ ಕಿಸಾನ್ ಆಗ್ರೊ ಟೆಕ್ ಎಂಬ ಕಂಪನಿಯ ಹೆಸರಲ್ಲಿ ತಾಲ್ಲೂಕಿನ ರೈತರಿಂದ ಮೂರು ನೂರ ಐವತ್ತು ರೂಪಾಯಿ ಪಡೆದು ರೈತರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಲಾಗುತ್ತಿದೆ.ಇದನ್ನು ತಿಳಿಯಲು ನಗರದ ನಗರಸಭೆ ಬಳಿಯಿರುವ ಕಚೇರಿಯಲ್ಲಿ ಹೋಗಿ ನೋಡಿದರೆ ಸರಕಾರ ಈ ಕಂಪನಿಗೆ ಕಿಸಾನ್ ಸುರಕ್ಷಾ ಕಾರ್ಡ ವಿತರಿಸಲು ಯಾವುದೆ ಪರವಾನಿಗೆ ನೀಡಿದ ಆದೇಶ ಪತ್ರವಿಲ್ಲದೆ, ಸುಳ್ಳು ನೆಪ ಹೇಳುವ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ.ಆದ್ದರಿಂದ ಈ ಕಿಸಾನ್ ಆಗ್ರೊ ಟೆಕ್ ಕಂಪನಿ ಹೆಸರಲ್ಲಿ ರೈತರಿಗೆ ನೀಡಲಾಗುತ್ತಿರುವ ಕಿಸಾನ್ ಸುರಕ್ಷಾ ಕಾರ್ಡುಗಳು ನಕಲಿ ಎಂಬ ಅನುಮಾನ ಮೂಡಲಾರಂಭಿಸಿದೆ.
ಆದ್ದರಿಂದ ಕೂಡಲೆ ತಾಲ್ಲುಕಿನಲ್ಲಿ ಕಿಸಾನ್ ಸುರಕ್ಷಾ ಕಾರ್ಡ ವಿತರಣೆ ತಡೆಯುವಂತೆ ಅವರು ಯಾದಗಿರಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿ ಅಶೋಕ ಸುರಪುರಕರ್ ಮೂಲಕ ಸಲ್ಲಿಸಿ ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ,ಹಣಮಂತ್ರಾಯ ಮೇಟಿಗೌಡ,ಮೌನೇಶ ದಳಪತಿ,ಸೋಮು ದೊರೆ,ಗ್ಯಾನಯ್ಯ ವಾಗಣಗೇರಾ,ಧರ್ಮಣ್ಣ ಸುರಪುರ,ಹಣಮಗೌಡ ಶಖಾಪುರ,ಬಸವರಾಜ ಸುಗೂರ ಸೇರಿದಂತೆ ಅನೇಕರಿದ್ದರು.