ಆಧ್ಯಾತ್ಮಿಕ ಪ್ರವಚನ ಭಾಗ

0
13
ಆವ ವಿದ್ಯೆಯ ಕಲಿತಡೆಯೇನು
ಸಾವ ವಿದ್ಯೆಯ ಬೆನ್ನಬಿಡದು
ಅಶನವ ತೊರೆದಡೇನು ವ್ಯಸನವ ಮೆರೆದಡೇನು
ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು
ಚೆನ್ನಮಲ್ಲಿಕಾರ್ಜುನ ದೇವಯ್ಯಾ ನೆಲ ತಳವಾರನಾದಡೆ
ಕಳ್ಳನೆಲ್ಲಿಗೆ ಹೋಹನು
****

ಸಮಪರ್ಕವಾಗಿ ಮನುಷ್ಯನಿಗೆ ಹಸಿವು, ನೀರಡಿಕೆ, ನಿದ್ರೆ, ವಿಸರ್ಜನೆ, ಕ್ರಿಯೆಗಳು ನಡೆದರೆ ಅದು ಪೂರ್ಣ ಆರೋಗ್ಯದ ಗುಣಲಕ್ಷಣಗಳು ಎನಿಸುತ್ತವೆ. ಹಸಿದು ಇರಬೇಡ, ಹಸಿಯದೇ ಉಣಬೇಡ ಎಂಬ ಸರ್ವಜ್ಞನ ತ್ರಿಪದಿಯಂತೆ ನಿತ್ಯ ಜೀವನ ರೂಢಿಸಿಕೊಂಡರೆ ಯಾರೂ ವೈದ್ಯರ ಕಡೆಗೆ ಹೋಗುವ ಪ್ರಸಂಗ ಬರುವುದಿಲ್ಲ. ಹಾಗೆ ಒಳ್ಳೆಯ ಆರೋಗ್ಯ ನಮ್ಮದಾಗಿರಲು ಕೆಲವು ಸಾಮಾನ್ಯ ಸಂಗತಿಗಳು ಗೊತ್ತುಮಾಡಿಕೊಳ್ಳುವುದು ಬಹಳ ಅವಶ್ಯವಾಗಿದೆ.

ಇಂದಿನ ದಿನಮಾನಗಳಲ್ಲಿ ಆರೋಗ್ಯ ತಪಾಸಣೆಗೆ ವೈದ್ಯರಲ್ಲಿಗೆ ಹೋಗುವುದು ಸಾಮಾನ್ಯವಾಗಿದೆ. ೩೦-೪೦ ವರ್ಷ ಬದುಕಿದ ಎಲ್ಲರಿಗೂ ತಮ್ಮ ಶರೀರದ ಗುಣ ಗೊತ್ತಾಗುವುದು ಆದರೆ ಮನುಷ್ಯ ಆ ಕಡೆ ಗಮನ ಕೊಡುವುದಿಲ್ಲ. ಒಂದು ಕಾಲದಲ್ಲಿ ವೈದ್ಯಕೀಯ ವಿಜ್ಞಾನ ಇರಲಾರದ ಸಮಯದಲ್ಲಿ ತಮ್ಮನ್ನು ತಾವೇ ಪರೀಕ್ಷಿಸಿಕೊಳ್ಳುವುದು ರೂಢಿಯಲ್ಲಿತ್ತು.

Contact Your\'s Advertisement; 9902492681

ನಮ್ಮ ಪಾದ ಬಿಸಿ ಇರಬೇಕು. ನಾಭಿ-ಜಠರ ಮೆತ್ತಗೀರಬೇಕು. ತಲೆ ತಣ್ಣಗಿರಬೇಕು. ಇದು ಆರೋಗ್ಯದ ಸಾಮಾನ್ಯ ಸೂತ್ರವಾಗಿದೆ. ನಮ್ಮ ಭಾರತ ನಕಾಶೆ ಅವಲೋಕಿಸಿದಾಗ ಮಧ್ಯದಲ್ಲಿ ಮಧ್ಯಪ್ರದೇಶ, ಮೇಲೆ ಕಾಶ್ಮೀರ, ಕೆಳಗೆ ಕನ್ಯಾಕುಮಾರಿ ಇರುವಂತೆ ನಮ್ಮ ಶರೀರದಲ್ಲಿ ಜಠರವು ಮಧ್ಯಪ್ರದೇಶವಿದ್ದಂತೆ, ತಲೆ ಕಾಶ್ಮೀರ ಇದ್ದತೆ, ಪಾದ ಕನ್ಯಾಕುಮಾರಿ ಇದ್ದಂತೆ ಒಂದು ಹೊಲಿಕೆ ಮಾಡಿಕೊಂಡು ಇವೆಲ್ಲವೂ ಸಮಪರ್ಕವಾಗಿರುವಂತೆ ನೋಡಿಕೊಳ್ಳಬೇಕು.

ನಿನ್ನನು ನೀನು ಮರೆತರೆ ವೈದ್ಯರ ಬಳಿ ಹೋಗಲೇಬೇಕಾಗುತ್ತದೆ ಎಂಬ ಮಾತು ಅನಾರೋಗ್ಯವಿದ್ದಾಗ ನೆನಪಿಗೆ ಬರುತ್ತದೆ. ಕಾಯಿಲೆ ಮತ್ತು ಮಾತ್ರೆ ಇವುಗಳಿಗೆ ಅವಿನಾಭಾವ ಸಂಬಂಧವಿದೆ. ಇದನ್ನು ತಪ್ಪಿಸಲು ಯೋಗ ಅವಶ್ಯವಾಗಿದೆ. ಪ್ರತಿನಿತ್ಯ ನಡೆಯುವುದು ಓಡುವುದು ಸಾಮಾನ್ಯ ವ್ಯಾಯಾಮ ಅನುಸರಿಸಿಕೊಂಡವರ ಆರೋಗ್ಯ ಕೆಡುವುದಿಲ್ಲ. ಅಕ್ಕಮಹಾದೇವಿ ಒಂದು ಕಡೆ ನೊಂದವರ ನೋವ ನೋಯದವರೆತ್ತ ಬಲ್ಲರು ಎನ್ನುತ್ತಾರೆ.

ಮನೆಯ ಯಜಮಾನ ಆರೋಗ್ಯವಾಗಿದ್ದರೆ ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿರುತ್ತಾರೆ. ಏಕೆಂದರೆ ಎಲ್ಲರೂ ಯಜಮಾನನ್ನು ಅನುಕರಿಸುತ್ತಾರೆ. ತನ್ನ ತಾನಾರೆಂದು ತಿಳಿದರೆ ತಾನೇ ದೇವರು ಎಂದು ಬಸವಣ್ಣನವರು ಹೇಳುವಂತೆ ನಾವೆಲ್ಲ ನಮ್ಮನ್ನು ನಾವು ತಿಳಿದುಕೊಳ್ಳುವುದು ಬಹಳ ಅವಶ್ಯವಾಗಿದೆ. ಅದಕ್ಕಾಗಿ ಮುಂಜಾನೆ ಮತ್ತು ಸಾಯಂಕಾಲ ಒಂದಿಷ್ಟು ಸಮಯ ಯೋಗ ಮತ್ತು ವ್ಯಾಯಾಮಕ್ಕೆ ಮೀಸಲಿಡಬೇಕು. ನಮ್ಮ ಉಸಿರಾಟ ಗಮನಿಸಬೇಕು. ಉಸಿರಾಟ ಚೆನ್ನಾಗಿರಲು ವಿಶೇಷ ಗಮನ ಹರಿಸಬೇಕು. ಪ್ರತಿ ತೊಂಭತ್ತು ನಿಮಿಷಗಳಿಗೊಮ್ಮೆ ಉಸಿರಾಟ ಕ್ರಿಯೆ ಬದಲಾಗುತ್ತದೆ.

ಶ್ವಾಸ ಅಂದರೆ ಪ್ರಾಣ ಇದ್ದಾಗ ಶಿವ ಎಲ್ಲದಾಗ ಶವ ಎಂಬ ಮಾತು ಇದೆ. ನಮ್ಮ ಜೀವನ ದೈವೀಮಯವಾಗಲು ಇಂತಹ ವ್ಯಾಯಾಮ ಯೋಗ ನಿತ್ಯವು ರೂಢಿಸಿಕೊಳ್ಳಬೇಕು. ಮೂಗು ಒಂದೇ ಇದ್ದರೂ ಹೊಳ್ಳೆ ಎರಡು ಇವೆ. ಬಲಭಾಗದ ಹೊಳ್ಳೆ ಸೂರ್ಯನಾಡಿ ಎಂತಲೂ ಮತ್ತು ಎಡಭಾಗದ ಹೊಳ್ಳೆ ಚಂದ್ರನಾಡಿಎಂತಲೂ ಕರೆಯುವರು ಬಲಭಾಗದಲ್ಲಿ ಉಸಿರಾಟ ವೇಗವಾಗಿ ನಡೆದರೆ ಎಡಭಾಗದಲ್ಲಿ ನಿಧಾನವಾಗಿ ನಡೆಯುತ್ತದೆ. ಇವೆರಡರ ಮಧ್ಯದಲ್ಲಿ ಇರುವುದೇ ಶುಷುಮ್ನನಾಡಿ ಕೊನೆಯಲ್ಲಿ ಇರುವುದೇ ಭ್ರೂಮಧ್ಯೆ ಇದುವೇ ಸಂಗಮ. ಇದೊಂದು ಸಾಮಾನ್ಯ ಶರೀರ ಕ್ರಿಯೆಯಾಗಿದೆ. ಇದರಲ್ಲಿ ವ್ಯತ್ಯಾಸ ಆದಾಗ ಮನುಷ್ಯನಿಗೆ ತಲೆನೋವು, ಕೀಲುನೋವುಗಳಂತಹ ಕಾಯಿಲೆಗಳು ಬರುತ್ತವೆ. ಈ ಕ್ರಿಯೆ ಸರಿಯಾಗಿ ನಡೆಸಿಕೊಂಡು ಹೋಗುವುದಕ್ಕೆ ಹಠಯೋಗ ಎನ್ನುವರು.

ಪ್ರಾಣಾಯಾಮ ಮತ್ತು ಆಸನಗಳಿಂದ ಉಸಿರಾಟ ಕ್ರಿಯೆ ಸರಾಗ ಆಗುತ್ತದೆ. ಭಸ್ತ್ರಿಕಾ ಆಸನದಿಂದ ಉಸಿರಾಟ ಚೆನ್ನಾಗಿ ನಡೆದು ಅಗ್ನಿ ಉತ್ಪತ್ತಿ ಆಗುತ್ತದೆ. ಇದು ಸಾಮಾನ್ಯವಾಗಿ ಕಮ್ಮಾರನ ತಿಧಿಯಂತೆ ನಡೆಯುತ್ತದೆ. ಇದರಲ್ಲಿ ವ್ಯತ್ಯಾಸ ಆದಾಗ ಹೃದಯ ಕಾಯಿಲೆ ಬರಬಹುದು. ಕಪಲಭಾತಿ ಎಂದರೆ ನೇರ ಕುಳಿತುಕೊಂಡು ಜೋರಾಗಿ ಉಸಿರು ಎಳೆದು ಬಿಡುವ ಸರಳ ಆಸನವಾಗಿದೆ. ಎದೆಯ ಬಲಗೈ ಇಟ್ಟು ನಾಭಿಮೇಲೆ ಎಡಗೈ ಇಟ್ಟು ಆಳವಾಗಿ ಉಸಿರು ತೆಗೆದುಕೊಳ್ಳುವುದು ಮತ್ತು ನಿಧಾನವಾಗಿ ಬಿಡುವುದು ಮಾಡಬೇಕು. ಈ ಶಾಸನದಿಂದ ಪ್ಯಾಕ್ರಿಯಾ, ಲೀವರ, ಕಿಡ್ನಿ ಮತ್ತು ಜಠರ ಇವುಗಳ ಕ್ರಿಯೆ ಚೆನ್ನಾಗಿ ನಡೆದು ಶರೀರದಲ್ಲಿ ಆಮ್ಲ ಉತ್ಪತ್ತಿ ರಕ್ತ ಉತ್ಪತ್ತಿ ಮತ್ತು ಶರೀರ ಶುದ್ಧೀಕರಣ ಕ್ರಿಯೆ ಸರಾಗವಾಗಿ ನಡೆಯುತ್ತವೆ. ಇವುಗಳ ಸಂಬಂಧ ಚೆನ್ನಾಗಿ ಇರಬೇಕು. ಇಲ್ಲವಾದರೆ ಶರೀರದಲ್ಲಿ ಕೊಬ್ಬು ಚೆನ್ನಾಗಿ ಸಕ್ಕರೆ ಕಾಯಿಲೆ ಬರಬಹುದು.

ಬೆನ್ನುಹುರಿ ಅಸಂಖ್ಯಾತ ನರಗಳ ಸಮೂಹ ಹಾದುಹೋಗುವ ಮುಖ್ಯದ್ವಾರವಾಗಿದೆ. ಇಲ್ಲಿ ವಿವಿಧ ತರಂಗಗಳ ಹಾದುಹೋಗುತ್ತವೆ. ಆ ತರಂಗಗಳು ಹೆಚ್ಚಾದಾಗ ಆ ವೇಗಕ್ಕೆ ಹೃದಯಘಾತ ಆಗಬಹುದು. ಕಡಿಮೆ ಆದಾಗ ಇನ್ನಿತರ ಸಮಸ್ಯೆಗಳು ಉಂಟಾಗಬಹುದು. ಈ ವಿಷಯ ಗಮನದಲ್ಲಿಟ್ಟುಕೊಂಡು ನಾವು ಪ್ರತಿನಿತ್ಯ ಇಂತಹ ಸರಳ ಯೋಗ, ಆಸನಗಳು, ವ್ಯಾಯಾಮ ಮಾಡಿಕೊಂಡಿದ್ದರೆ ನಮ್ಮೆಲ್ಲರ ಆರೋಗ್ಯ ಉತ್ತಮವಾಗಿರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here