ನಿಮ್ಮ ಜಾಣತನ ನಿಮ್ಮ ಕೈ ಹಿಡಿಯುತ್ತದೆ : ಡಾ. ಸುರೇಶ ಜಂಗೆ

0
155

ಕಲಬುರಗಿ: ಕಲ್ಯಾಣ ಕರ್ನಾಟಕ ಒಂದು ಫಲವತ್ತಾದ ಭೂಮಿ ಇಲ್ಲಿ ಜನಗಳ ಮನಸ್ಸು ಕೂಡ ಬಹಳ ವಿಶಾಲವಾದದ್ದು. ಈ ನಾಡಿನಲ್ಲಿ ನಾವು ಇರೋದೇ ಪುಣ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮುಖ್ಯ ಗ್ರಂಥಪಾಲಕ ಡಾ. ಸುರೇಶ್ ಜಂಗೆ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಂಥಪಾಲಕರಿಗೆ ಗ್ರಂಥಾಲಯ ಪಿತಾಮಹ ಆದರೆ ವಿದ್ಯಾರ್ಥಿಗಳಿಗೆ ಗುರುಗಳೆ ಗ್ರಂಥಾಲಯ ಪಿತಾಮಹ ಇದ್ದಂತೆ.

Contact Your\'s Advertisement; 9902492681

ಈ ವಿಭಾಗದಲ್ಲಿ ಓದಿರುವ ಸಾವಿರಾರು ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಂಥಪಾಲಕರಾಗಿದ್ದು ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನಿಮ್ಮ ಜಾಣತನ ಯಾವತ್ತೂ ನಿಮಗೆ ಕೈಹಿಡಿಯುತ್ತದೆ. ವೃತ್ತಿಯಲ್ಲಿ ಬಂದಾಗ ನಮ್ಮ ಮೂಲ ಮರೆಯಬಾರದು ಜೊತೆಗೆ ನಿಯತ್ತು ಅನ್ನೋದು ಇರಬೇಕು ಇಂದು ಸಹಾಯ ಪಡೆದು ನಾಳೆ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕೀವಿ ಮಾತು ಹೇಳಿದರು.

ಗುರುಗಳ ಆಶೀರ್ವಾದ ಮತ್ತು ಸತತ ಪ್ರಯತ್ನದಿಂದ ನಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಈ ಗ್ರಂಥಾಲಯ ವಿಭಾಗ ಕಳ್ಳುಬಳ್ಳಿ ಸಂಬಂಧ ಇದೆ ಈ ಸಂಬಂಧಕ್ಕೆ ನಮಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಿದ್ದು ನೀವು ದಿನಾಲು ಗ್ರಂಥಾಲಯದಲ್ಲಿ ಇಂಗ್ಲಿಷ್ ದಿನ ಪತ್ರಿಕೆ ಓದುದರಿಂದ ಭಾಷೆ ಬಂಡವಾಳವಾಗುತ್ತದೆ ಈ ಹವ್ಯಾಸ ನಿವೆಲ್ಲರೂ ಬೆಳಸಿಕೊಳ್ಳಬೇಕು ಇರುವ ಸಮಯವನ್ನು ಸದುಪಯೋಗ ಪಡೆದುಕೊಂಡು ನಿಮ್ಮ ಉನ್ನತ ಶಿಕ್ಷಣದ ಗುರಿ ಮುಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಅತಿಥಿ ಆಗಿ ಆಗಮಿಸಿದ ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಡಾ. ಡಿ.ಬಿ. ಪಾಟೀಲ ಮಾತನಾಡಿ ಕರೋನ ಸಂದರ್ಭದಲ್ಲಿ ಸಾಮಾನ್ಯವಾಗಿ ಭೌತಿಕ ತರಗತಿಗಳು ನಡೆದಿಲ್ಲ ಆದರೂ ವಿದ್ಯಾರ್ಥಿಗಳು ತಮ್ಮ ಪರಿಶ್ರಮದಿಂದ ಓದಿ ಪರೀಕ್ಷೆ ಬರೆದಿದ್ದಾರೆ ಹೀಗಾಗಿ ನಮಗೆ ನೋವು ಇದೆ ಎಂದು ವಿದ್ಯಾರ್ಥಿಗಳ ಪರವಾಗಿ ಕಳವಳ ವ್ಯಕ್ತಪಡಿಸಿದರು. ಗ್ರಂಥಾಲಯ ವಿಜ್ಞಾನ ವಿಷಯ ವೃತ್ತಿಪರ ಕೋರ್ಸ್ ಇರೋದರಿಂದ ನೀವು ಸತತವಾಗಿ ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.

ಸಮಾಜ ವಿಜ್ಞಾನ ನಿಕಾಯದ ಡೀನ ಮತ್ತು ಗ್ರಂಥಾಲಯ ವಿಭಾಗದ ಮುಖ್ಯಸ್ಥ ಪ್ರೊ. ವಿ. ಟಿ. ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂತಿಮ ವರ್ಷದ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಪರಿಶ್ರಮದಿಂದ ಅಧ್ಯಯನ ಮಾಡಿದಿರಿ ನಿಮ್ಮ ಭವಿಷ್ಯ ಉಜ್ವಲವಾಗಲಿ ನನ್ನ ವಿದ್ಯಾರ್ಥಿಗಳು ನನಗಿಂತ ಉನ್ನತ ಮಟ್ಟದಲ್ಲಿ ಹೆಸರು ಮಾಡಿದರೆ ಅದಕ್ಕಿಂತ ದೊಡ್ಡ ಸಂತೋಷ ಎಲ್ಲಿದೇ ಮಕ್ಕಳು ಸಹಜವಾಗಿ ತಪ್ಪು ಮಾಡುತ್ತಾರೆ ಅದನ್ನು ಕ್ಷಮಿಸಿಬಿಡುವ ಗುಣ ಪ್ರಾಧ್ಯಾಪಕ ಮಿತ್ರರಲ್ಲಿ ಬರಬೇಕು ಎಂದು ಅವರು ಹೇಳಿದರು.

ಡಾ. ರಾಜಕುಮಾರ ಎಂ. ದಣ್ಣೂರ, ಡಾ. ರಾಜೇಶ್ವರಿ ಇದ್ದರು. ಲೋಕೇಶ ಅತಿಥಿ ಪರಿಚಯ ಮಾಡಿದರು. ಸುಮಲತಾ ಪ್ರಾರ್ಥನೆ ಗೀತೆ ಹಾಡಿದರು ಸಾಯಿಲಕುಮಾರ ಸ್ವಾಗತಿಸಿದರು ಆಕಾಶ ರಾಠೋಡ ನಿರೂಪಿಸಿದರು, ಜಗದೇವಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here