ಆಳಂದ: ಈ ಭಾಗದ ಪ್ರಸಿದ್ಧ ಸೂಫಿ-ಸಂತರಾಗಿದ್ದ ಹಜರತ್ ಲಾಡ್ಲೆ ಮಶಾಸಕರ ೬೬೬ನೇ ವರ್ಷದ ಉರ್ಸ್‌ಗೆ ಸೋಮವಾರ ಪಟ್ಟಣದ ತಹಸೀಲ್ದಾರ ಕಚೇರಿಯಿಂದ ಸಂದಲ್ ಮೆರವಣಿಗೆ ಆರಂಭಿಸುವ ಮೂಲಕ ಉರ್ಸ್ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸಾಂಪ್ರದಾಯಿಕವಾಗಿ ಪಟ್ಟಣದ ತಹಸೀಲ್ದಾರ ಕಚೇರಿಯಿಂದ ಆರಂಭಗೊಂಡ ಸಂದಲ್ ಮೆರವಣಿಗೆಗೆ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಪೂಜೆ ನೆರವೇರಿಸಿ ಚಾಲನೆ ನೀಡಿ ಸಂದಲವನ್ನು ಭಕ್ತಾದಿಗಳಿಗೆ ಹಸ್ತಾಂತರಿಸಿ ಮೆರವಣಿಗೆ ಅವಕಾಶ ಮಾಡಿಕೊಟ್ಟರು. ಪ್ರಮುಖ ರಸ್ತೆಗಳಲ್ಲಿ ಹೊರಟ ಸಂದಲ್‌ಗೆ ಮುಸ್ಲಿಂ ಬಾಂಧವರು ಸೇರಿದಂತೆ ಅನ್ಯಧರ್ಮೀಯರು ದರ್ಶನ ಪಡೆದರು.
ವಿಶೇಷವಾಗಿ ಸಂದಲ್ ವಾದ್ಯ ವೈಭವಗಳೊಂದಿಗೆ ರಾತ್ರಿಯಿಡಿ ಮೆರವಣಿಗೆ ಕೈಗೊಂಡು ಹಜತರ್ ಲಾಡ್ಲೆ ಮಶಾಸಕ ದರ್ಗಾಕ್ಕೆ ಬೆಳಗಿನ ಜಾವ ಸಂದಲ ತಲುಪಿಸಲಾಯಿತು.
ಈ ಮೊದಲು ಕಚೇರಿಯಲ್ಲಿ ಸಂಗೀತ ಕಲಾವಿದರಿಂದ ಖವಾಲಿ ಜರುಗಿದವು. ಗ್ರೇಡ್-೨ ತಹಸೀಲ್ದಾರ ಬಸವರಾಜ ರಕ್ಕಸಗಿ, ದರ್ಗಾ ಕಮೀಟಿ ಅಧ್ಯಕ್ಷ ಆಸೀಫ್ ಅನ್ಸಾರಿ, ಮೋಹಿಜ್ ಅನ್ಸಾರಿ ಕಾಬಾರಿ, ಕಾರ್ಯದರ್ಶಿ ಖಲಿಲ ಅಹ್ಮೆದ್ ಅನ್ಸಾರಿ, ಉಪಾಧ್ಯಕ್ಷ ರಮ್ಮು ಅನ್ಸಾರಿ, ಆರೀಫ ಅನ್ಸಾರಿ, ಮಕ್ಸುದ್ ಅನ್ಸಾರಿ, ಸೈಫಾನ್ ಮೂಲಕ ಅನ್ಸಾರಿ, ಮೊಕದೊಮ್ಮ ಅನ್ಸಾರಿ, ಇಫ್ತೆಕಾರ ಅನ್ಸಾರಿ, ಇಸೂಫ್ ಅನ್ಸಾರಿ ಕಾರಬಾರಿ, ದೆಹಲಿಯ ಫ್ಯಾಕ್ಟ್ ಇಂಡಿಯಾ ಪತ್ರಿಕೆ ಸಂಪಾದ ಸಾಧಿಕ ಅಅನ್ಸಾರಿ, ಫಿರದೋಸ್ ಅನ್ಸಾರಿ, ಮುಖಂಡ ಸುಲೆಮಾನ ಮುಕುಟ್, ಸೇರಿದಂತೆ, ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಸಾವಿರಾರು ಭಕ್ತಾದಿಗಳ ಪಾಲ್ಗೊಂಡಿದ್ದರು.
ನ. ೧೬ರಂದು ದೀಪೋತ್ಸವ ಮಧ್ಯಾಹ್ನ ಹೆಸರಾಂತ ಕಲಾವಿದರಿಂದ ಖವಾಲಿ ಕಾರ್ಯಕ್ರಮ ಜರುಗಲಿದೆ. ಉರ್ಸ್ ನಿಮಿತ್ತ ಈಗಾಗಲೇ ಈಗಾಗಲೇ ಅಂಗಡಿ, ಮುಗ್ಗಟುಗಳು ತೆರೆದುಕೊಂಡಿವೆ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ.
ಉರ್ಸ್‌ನಲ್ಲಿ ಹೈದರಾಬಾದ, ಮುಂಬೈ, ದೆಹಲಿ, ಪುಣೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿದ್ದಾರೆ. ಉರ್ಸ್ ಅಂಗವಾಗಿ ದರ್ಗಾದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಗಳಲ್ಲಿ ಸಾಹಿತಿಗಳು ಮತ್ತು ಧಾರ್ಮಿಕ ಮುಖಂಡರು ಗಣ್ಯರು ಪಾಲ್ಗೊಳ್ಳಲಿದ್ದಾರೆ.