ಆಧ್ಯಾತ್ಮಿಕ ಪ್ರವಚನ ಭಾಗ-೯

0
12
ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ
ಇದಕಾರಂಜುವರು ಇದಕಾರಳುಕರು
ಜಾತಸ್ಯ ಮರಣಂ ಧ್ರುವಂ ಎಂಬುದಾಗಿ
ನಮ್ಮ ಕೂಡಲಸಂಗಮದೇವರ ಬರೆದ ಬರೆಹವ
ತಪ್ಪಿಸುವಡೆ ಹರಿಬ್ರಹ್ಮಾದಿಗಳಲ್ಲ
-ಬಸವಣ್ಣ

ನಾವು ಏನನ್ನು ಪಡೆಯಬೇಕು ಅಥವಾ ಸಾಧಿಸಬೇಕು ಎಂಬುದು ಸ್ಪಷ್ಟವಾಗಿರಬೇಕು. ಬಳ್ಳಿ ಕಷ್ಟಪಟ್ಟು ಬೆಳೆಯುತ್ತವೆ. ಭೂಮಿಯಿಂದ ನೀರನ್ನು ಹರಿಯುತ್ತದೆ. ಆ ಬಳ್ಳಿ ಸಾರ್ಥಕತೆ ಮತ್ತು ಉದ್ದೇಶ ಈ ಜಗತ್ತನ್ನು ಒಂದಿಷ್ಟು ನೋಡಬೇಕು. ಸೌಂದರ್ಯಗೊಳಿಸಬೇಕು. ಸುವಾಸಿತಗೊಳಿಸಬೇಕು ಎಂಬುದಾಗಿದೆ. ಒಂದು ಹೂ ಕೊಟ್ಟರೆ ಬಳ್ಳಿಯ ಬದುಕು ಸಾರ್ಥಕವಾದಂತೆಯೇ. ಹೇ ದೇವನೆ ನಿನ್ನ ನೀರು ನಿನ್ನ ನೆಲೆದ ಆಸರೆ ನಿನ್ನ ಗಾಳಿ, ಬಿಸಿಲ ಶಾಖ ಪಡೆದೆ ಇದಕ್ಕಾಗಿ ನನ್ನ ಕೃತಜ್ಞತೆಗಳು ಅದಕ್ಕಾಗಿ ಪ್ರತಿಯಾಗಿ ನನ್ನಲ್ಲಿರುವ ಹೂ ಕೊಡುವೆ ಎನ್ನುತ್ತದೆ ಬಳ್ಳಿ. ನಾನು ಸಣ್ಣವ. ನೀನು ಘನ ಅತ್ಯದ್ಭುತ. ನಿನ್ನ ನೀರು, ನೆಲೆ, ಗಾಳಿ, ಬೆಳಕು ಪಡೆದು ಬಣ್ಣ ಬಣ್ಣದ ಸುವಾಸಿತ ಹೂವು ಕೊಟ್ಟು ಇನ್ನಷ್ಟು ಸುಂದರಗೊಳಿಸುವುದು ನನ್ನ ಸಾರ್ಥಕತೆ ಎನ್ನುತ್ತದೆ ಆ ಬಳ್ಳಿ.

ನಾವು ಕೂಡ ಒಂದು ಬಳ್ಳಿ ಇದ್ದಂತೆ ಬರುವಾಗ ನಾವೇನೂ ತಂದಿಲ್ಲ. ನಮ್ಮ ಬದುಕಿಗೆ ಏನು ಬೇಕೊ ಎಲ್ಲವೂ ಇಲ್ಲಿದೆ. ಇಲ್ಲಿಂದಲೇ ಎಲ್ಲವೂ ಪಡೆದ ನಾವು ಒಂದಿಷ್ಟು ಕೊಡುವುದನ್ನು ಕಲಿಯಬೇಕು. ಇದು ನೀತಿ, ಧರ್ಮ, ಸದ್ಭಾವ ಪಡೆದ ಮೇಲೆ ಕೊಡುವ ಬುದ್ಧಿ ಬೇಕು. ಹರಿದಾಸ ಒಬ್ಬ ಸಂತ ದೊಡ್ಡ ಗಾಯಕ. ಅಕ್ಬರನ ಆಸ್ಥಾನದಲ್ಲಿದ್ದ ತಾನಸೇನನ ಗುರು ಆತ ಯಮುನಾ ನದಿ ದಂಡೆಯ ಮೇಲೆ ಹಾಡಿದರೆ ಆ ನದಿಯ ಮೇಲೆ ಕೃಷ್ಣ ಕುಣಿಯುತ್ತಿದ್ದ. ಹರಿದಾಸ ಸುಂದರ ನಿಸರ್ಗಕ್ಕೆ ಒಂದಿಷ್ಟು ಹಾಡು ಮಧುರತೆ ಕೊಡುತ್ತಿದ್ದ. ಹೀಗೆ ಒಬ್ಬರೆ ಹಾಡುತ್ತಿದ್ದರೆ ಕೇಳುವರಾರು ಇರಲಿಲ್ಲ. ಆದರೆ ಇಂದು ಕೇಳುವವರು, ಹಣಕೊಡುವವರು, ಸತ್ಕಾರ ಮಾಡುವವರು ಇದ್ದಾಗ ಹಾಡುವ ಜನ ಇದ್ದದ್ದು ಕಾಣುತ್ತೇವೆ.

Contact Your\'s Advertisement; 9902492681

ಧ್ವನಿ ದೇವರದು. ಸ್ವರ ದೇವರದು. ಇದನ್ನು ಬಳಸಿ ದೇವನ ಆನಂದಕ್ಕಾಗಿ ಹಾಡಬೇಕು. ಯಾರಿಗೂ ಒಲಿಸಲು ಅಲ್ಲ. ತನ್ನೊಳಗೆ ಇರುವ ಹಾಡು ದೇವನದು. ದೇವನಿಗೆ ಅರ್ಪಣೆ ಮಾಡಿ ನಿಸರ್ಗ ಸುಂದರಗೊಳಿಸಬೇಕು. ಯಮುನಾ ನದಿ ಅಲ್ಲಿ ಕಷ್ಣ ಆಗಸದ ಚಂದ್ರ ತಂಪಾದ ಬೆಳದಿಂಗಳು ಸುಂದರಗೊಳಿಸುವುದು ಅದೇ ನೀತಿ ಧರ್ಮ ಎಲ್ಲವು. ಏನು ಮಾಡಬೇಕಾಗಿದೆಯೋ ಅದು ಧರ್ಮ. ಇಲ್ಲೊಂದು ಸುಂದರ ತೋಟ ನಿರ್ಮಿಸಬೇಕಿದೆ. ಕೈ ಬಳಸಬೇಕು. ಧ್ವನಿ ಬಸವಬೇಕು. ಬುದ್ಧಿ ಬಳಸಬೇಕು. ಇವೆಲ್ಲ ಕೊಟ್ಟ ದೇವನಿಗೆ ಆ ಮೂಲಕ ಸಮರ್ಪಣೆ ಮಾಡಬೇಕು.

ಹೊನ್ನಿ ಹುಳದ ಬೆಳಕು ದೀಪದ ಬೆಳಕಿನಂತೆ ಇರುತ್ತದೆ. ಅದು ಆಕರ್ಷಕ ಎಲ್ಲಿಯ ಸೂರ್ಯ, ಎಲ್ಲಿಯ ಚಂದ್ರ ಆದರೆ ಸಣ್ಣ ಹೊನ್ನಿ ಹುಳ ತಾನು ಸಣ್ಣದಿದ್ದರೂ ತನ್ನಲ್ಲಿಯ ಒಂದಿಷ್ಟು ಬೆಳಕು ಚೆಲ್ಲಿ ನಿಸರ್ಗಕ್ಕೆ ಕೃತಜ್ಞತೆ ಸಲ್ಲಿಸುತ್ತದೆ. ದೊಡ್ಡವರು ದೊಡ್ಡ ಕೆಲಸ ಮಾಡಿದರೆ ಸಣ್ಣವರು ಸಣ್ಣ ಕೆಲಸ ಮಾಡಬೇಕು. ತನಗೆ ಎಷ್ಟು ಸಾಧ್ಯವಿದೆಯೋ ಅಷ್ಟು ಸೇವೆ ಮಾಡಬೇಕು. ಸೂರ್ಯ-ಚಂದ್ರ ಅವರು ದೊಡ್ಡವರು. ಹೊನ್ನಿ ಹುಳು ಸಣ್ಣದಾದರೂ ಬೆಳಕು ನೀಡುತ್ತದೆ ಇದೇ ಧರ್ಮ.

ನಾವು ಮಾಡುವುದು ವಿಶ್ವಧರ್ಮ. ನೀತಿಧರ್ಮ. ಜೀವನದ ಧರ್ಮ. ಪಡೆದುಕೊಳ್ಳುವುದು ಎಷ್ಟು ಮಹತ್ವವೊ ಕೊಡುವುದು ಕೂಡ ಅಷ್ಟೇ ಮಹತ್ವ. ಒಳ್ಳೆಯ ಮಾತು. ಕೃತಿ, ಭಾವನೆ ಹರಡುವುದೇ ಪವಿತ್ರ ಜೀವನ. ಸಾಧ್ಯವಿದ್ದಷ್ಟು ಒಳ್ಳೆಯದು ಮಾಡುವುದು. ಸುಂದರ ಮಾತು, ಮಧುರ ಮಾತು ಒಳ್ಳೆಯ ಕೆಲಸ ಕೈ ಭೂಷಣ. ಮಾತು ನಾಲಿಗೆಗೆ ಭೂಷಣ. ರವೀಂದ್ರನಾಥ ಠಾಗೂರ ರಚಿಸಿದ ಗೀತಾಂಜಲಿ ಒಂದು ಸಣ್ಣ ಗ್ರಂಥ. ಅಲ್ಲಿ ಅವರು ನಾನು ಈ ಜಗತ್ತಿಗೆ ಬಂದಿದ್ದೇನೆ. ಈ ಜಗತ್ತು ಅದ್ಭುತ. ನದಿ, ಸಾಗರ, ನಿಸರ್ಗ, ಹಸಿರು, ಹೂ, ಹಣ್ಣು ಇದು ನೋಡಿ ನನಗೆ ಸಂತೋಷವಾಗಿದೆ.

ಇಲ್ಲಿ ಬರಲು ನನಗೆ ಅವಕಾಶ ನೀಡಿದ್ದಕ್ಕೆ ನಾನು ಹಾಡುತ್ತೇನೆ. ಮಾತಾಡುತ್ತೇನೆ. ನಿಸರ್ಗ ಕೇಡಿಸುವುದಿಲ್ಲ. ಇನ್ನಷ್ಟು ಚಂದ ಮಾಡುವೆ. ಹೀಗೆ ಬರೆದು ಗೀತಾಂಜಲಿ ನಿಸರ್ಗಕ್ಕೆ ಅವರು ಅರ್ಪಿಸಿದರು. ಬಳ್ಳಿಯೂ ಹೂಗಳು ಅರ್ಪಿಸಿದಂತೆ ನಾವು ಕೂಡ ನಿಸರ್ಗಕ್ಕೆ ಏನಾದರೂ ಅರ್ಪಿಸಬೇಕು. ನೋಡುವ ದೃಷ್ಟಿ, ಶಾಂತಹೃದಯ, ಹಾಡುವ ಧ್ವನಿ ಕೊಟ್ಟ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ರವೀಂದ್ರನಾಥ ಠಾಗೂರ ಒಬ್ಬ ಋಷಿಯಂತೆ ಬದುಕಿದರು. ಅವರು ಗೀತಾಂಜಲಿ ಎಂಬ ಸಣ್ಣ ಗ್ರಂಥ ಜಗತ್ತಿಗೆ ಅರ್ಪಣೆ ಮಾಡಿದರು. ಅದನ್ನು ನಾವು ಓದಬೇಕು.

ಸುಂದರ ಮನೆ ಕಟ್ಟುವುದು ಎಷ್ಟು ಮುಖ್ಯವೊ ಸುಂದರವಾಗಿಡುವುದು ಅಷ್ಟೇ ಮುಖ್ಯ. ವಸ್ತುಗಳಿಂದ ಅಲ್ಲ. ಒಳಗಿರುವವರ ಮನ ಶಾಂತಗೊಳಿಸಿ ಸುಂದರವಾಗಿರುವುದು. ಮುಚ್ಚಿದ ಬಾಗಿಲು ಒಳಗೆ ಅಶಾಂತಿ, ಜಗಳ ಇದ್ದರೆ ಆ ಮನೆ ಸುಂದರ ಆಗುವುದಿಲ್ಲ. ಗುಡಿಸಲು ಮತ್ತು ಅರಮನೆ ಮುಖ್ಯವಲ್ಲ. ಕಲ್ಲು-ಮಣ್ಣುಗಳಿಂದ ಮನೆ ಕಟ್ಟಿದರೆ ಅದು ಒಂದು ದಿನ ಬೀಳಬಹುದು. ಆದರೆ ಆ ಮನೆ ಇರುವವರೆಗೆ ಅಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಇರುವುದೇ ಮುಖ್ಯ. ಮನೆ ನೋಡಬಾರದು.

ಮನೆಯೊಳಗಿರುವ ಜನ ಮನಸ್ಸು ನೋಡಬೇಕು. ಹುಡುಗ ಹುಡುಗಿಯ ಸಂಬಂಧ ಬೆಳೆಸುವಾಗ ಪರಸ್ಪರ ಅವರ ಮನಸ್ಸು ನೋಡುವುದೇ ಮುಖ್ಯ. ಮನಸ್ಸು ಶ್ರೀಮಂತ ಇರಬೇಕು ಮನೆ ಅಲ್ಲ. ಮಾತು ಕೃತಿ, ವಿಚಾರ ಎಲ್ಲವೂ ಶಾಂತಿಯುತವಾಗಿ ಇದ್ದಾಗ ಬದುಕು ಶಾಂತವಾಗಿರುತ್ತದೆ. ಸಮಾಧಾನವಾಗಿರುತ್ತದೆ. ಬಸವಣ್ಣನವರು ನಾನೆ ಬಪ್ಪುದು ನಿಮಗಿಂದೇ ಬರಲಿ ಇಂದು ಬರುವುದು ನಮಗೀಗಲೆ ಬರಲಿ. ಇದಕಾರಂಜುವರು ಇದಕಾರಳುವರು ಎಂದಿದ್ದಾರೆ. ಎಷ್ಟು ಕಾಲ ಬದುಕಿರುತ್ತೇವೆ ಎಂಬುದು ಮುಖ್ಯವಲ್ಲ. ಸುಂದರ ಬದುಕು ಬದುಕುವುದೇ ಮುಖ್ಯ. ಅರ್ಚನೆ-ಅರ್ಪಣ-ಅನುಭಾವ ಸಿದ್ಧಾಂತಗಳ ಮೇಲೆ ಬಸವಾದಿ ಶರಣರು ದಿವ್ಯ ಜೀವನ ನಡೆಸಿದರು.

ದೇವರನ್ನು ನೆನೆಸುವುದು ಅರ್ಚನೆ. ಪ್ರಸಾದ ಸೆವಿಸುವುದು ಅರ್ಪಣೆ. ಸಂತೋಷಪಡುವುದು ಅನುಭಾವ ಎನಿಸಿಕೊಳ್ಳುವುದು. ಹೂ ಎಲ್ಲಿ ಅರಳಿದರೇನು ಅದು ಹೂವೇ. ಸುಗಂಧ ಸುಸುವುದೇ ಅದರ ಧ್ಯೇಯ. ಸ್ಥಳ ಮುಖ್ಯವಲ್ಲ. ಸಂತರೆಂದರೆ ಮಲ್ಲಿಗೆ ಹೂವು ಇದ್ದಂತೆ. ಎಲ್ಲಿದ್ದರೂ ಸುಗಂಧ. ಮಹಾನುಭಾವರ ಬದುಕು ನಮಗೆ ಆದರ್ಶವಾಗಬೇಕು. ನಮಗೆ ಗೊತ್ತಿರುವ ಆನಂದ ಸಂಗತಿಗಳು ಎಲ್ಲಾ ಕಡೆ ಹರಡಬೇಕು. ಭಗವಂತನ ನೆನೆಸುವುದು ಭಗವಂತ ಕೊಟ್ಟ ದೇಹದ ಶಕ್ತಿ ಬಳಸುವುದು. ಆನಂದದಿಂದ ಬದುಕುವುದು ಮುಖ್ಯ. ಜಗತ್ತನ್ನು ಮಧುರ ಮಧುರಗೊಳಿಸಬೇಕು.

ಮನೆಯ ಮುಂದೆ ಒಂದಿಷ್ಟು ಹೂತೋಟ ಇರಬೇಕು ತಿಪ್ಪೆ ಇರಬಾರದು. ಮನೆಯೊಳಗೆ ಸ್ವಚ್ಛ ಇದ್ದರನಂತೆ ಹೊರಗೂ ಸ್ವಚ್ಛ ಇರಬೇಕು ಪ್ರಸನ್ನತೆ ತುಂಬಿದ ಮುಖ ಇರಬೇಕು. ಮುಗುಳ್ನಗೆ ಇರಬೇಕು ಕೆಟ್ಟ ದೃಷ್ಟಿ ಇರಬಾರದು. ನಮ್ಮ ಬದುಕು ನೈತಿಕ ನೆಲೆಗಟ್ಟಿನ ಮೇಲೆ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಬೇರೆಯವರನ್ನು ಹೊಲಿಸಿಕೊಂಡು ಬದುಕುಬಾರದು. ನಮ್ಮ ಆದರ್ಶವೇ ನಮಗೆ ದಾರಿದೀಪವಾಗಿರಬೇಕು. ನೀತಿಶಾಸ್ತ್ರ ಎಲ್ಲರಿಗೂ ಬೇಕು. ಆ ಧರ್ಮ, ಈ ಧರ್ಮ ಬೇಕಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here