ಜಿಲ್ಲಾ ಕನ್ನಡ‌ ಸಾಹಿತ್ಯ ಪರಿಷತ್ತೂ ಸಾಹಿತ್ಯ ಸಂಘಟಕ ವೀರಭದ್ರ ಸಿಂಪಿಯೂ

0
84
  • ಡಾ. ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಸಾಹಿತ್ಯ ಸಂಘಟಕ, ಕ್ರಿಯಾಶೀಲ ವ್ಯಕ್ತಿಯಾಗಿರುವ ವೀರಭದ್ರ ಸಿಂಪಿಯವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಈ ಬಾರಿ ಮತ್ತೆ ಸ್ಪರ್ಧೆ ಮಾಡಿದ್ದಾರೆ.

ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವಲ್ಲಿ ಹಾಗೂ ಅದನ್ನು ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಿಂಪಿಯವರು ಈ ಬಾರಿ ಮತ್ತೆ ಸತ್ವ ಪರೀಕ್ಷಗೆ ಇಳಿದಿದ್ದಾರೆ.

Contact Your\'s Advertisement; 9902492681

ಉದಯೋನ್ಮುಖ ಯುವ ಬರಹಗಾರರ ಬಳಗದ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಕಾಲಿಟ್ಟ ಇವರು, 2004ರಲ್ಲಿ ಮೊದಲ ಬಾರಿಗೆ ಜಿಲ್ಲಾ ಕಸಾಪದ ಚುಕ್ಕಾಣಿ ಹಿಡಿದರು. ವೈವಿದ್ಯಮಯ ಸಾಹಿತ್ಯಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಸಹೃದಯರ ಮನಸ್ಸು ಸೂರೆಗೊಂಡರು.

ಅದಾದ ಬಳಿಕ 2012ರಲ್ಲಿ ಕೇವಲ 27 ಮತಗಳ ಅಂತರದಲ್ಲಿ ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರಿಂದ ಪರಾಭವಗೊಂಡರು. ಕನ್ನಡದ ಬೌದ್ಧಿಕ ಬೆಳವಣಿಗೆಯ ಜೊತೆಗೆ ಕನ್ನಡ ಭವನದ ಭೌತಿಕ ಬೆಳವಣಿಗೆಗೆ ಕಾರಣರಾಗುವ ಮೂಲಕ 2016ರಲ್ಲಿ ಅತ್ಯಧಿಕ ಮತಗಳಿಂದ ಮತ್ತೆ ಪುನರಾಯ್ಕೆಯಾಗಿದ್ದಾರೆ.

ಕಲಬುರಗಿಯ ಕನ್ನಡ ಭವನವನ್ನು ಎಲ್ಲರೂ ನೋಡುವಂತೆ ಮಾಡಿರುವ ಸಿಂಪಿ ಅವರಿಗೆ ಮತ್ತೊಂದು ಬಾರಿ ಅವಕಾಶ ನೀಡಬೇಕು ಎಂದು ಕೆಲವರು ಅಭಿಮಾನದಿಂದ ಹೇಳಿದರೆ, ಇನ್ನು ಕೆಲವರು ಕನ್ನಡ ಭವನ ಒಬ್ಬರಿಗೆ ಬರೆದು ಕೊಟ್ಟಿಲ್ಲ. ಮತ್ತೊಬ್ಬರಿಗೆ ಅವಕಾಶ ನೀಡಬೇಕು ಎಂಬ ಅಪಸ್ವರಗಳೂ ಕೇಳಿ ಬರುತ್ತಿವೆ.

ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕನ್ನಡ ಭವನದ ಬಾಪೂಗೌಡ ರಂಗ ಮಂದಿರದ ಬಾಕಿಯಿರುವ ಆಂತರಿಕ ಕಾಮಗಾರಿ ಪೂರ್ಣಗೊಳಿಸುವುದು, ‘ಮರೆಯಲಿ ಹ್ಯಾಂಗ ನಿಮ್ಮ’ ಗ್ರಂಥ ಪ್ರಕಟಣೆ, ಮನದ ಮಾತು ಮುಂದುವರಿಕೆ, ‘ನಮ್ಮೂರ ಹಿರಿಯರು’ ವಿಶೇಷ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲ ಗ್ರಾಮಗಳ ಐತಿಹಾಸಿಕ ಚರಿತ್ರೆ ಕಟ್ಟಿಕೊಡುವುದು ಸೇರಿದಂತೆ ಹಲವು ಹತ್ತು ಕಾರ್ಯಕ್ರಮಗಳ ಪ್ರಣಾಳಿಕೆ ಇಟ್ಟುಕೊಂಡು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಆಗಬೇಕಾದ ಕೆಲಸಗಳು ಸಾಕಷ್ಟು ಇರುವುದರಿಂದ ಮತ್ತೆ ಸ್ಪರ್ಧೆ ಮಾಡಿದ್ದು, ಇದು ನನ್ನ ಕೊನೆಯ ಚುನಾವಣೆ. ಕನ್ನಡಮ್ಮನ ಸೇವೆಗೆ ಕಸಾಪ ಮತದಾರರು ಇದೊಂದು ಬಾರಿ ಅವಕಾಶ ಮಾಡಿಕೊಡಿ. – ವೀರಭದ್ರ ಸಿಂಪಿ

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇತರೆ ಹುರಿಯಾಳುಗಳಂತೆ ಸರಾಸರಿ ಮತ ಬಾಚಿಕೊಳ್ಳುವ ಸಿಂಪಿ ಅವರು ನಗರದಲ್ಲಿಯೇ ಹೆಚ್ಚು ಮತಗಳನ್ನು ಪಡೆಯಲಿದ್ದಾರೆ ಎಂದು ಅವರ ಹಿಂಬಾಲಕರು, ಬೆಂಬಲಿಗರು ಹೇಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here