ಜೇವರ್ಗಿಯಲ್ಲಿ ಮನೆಯವರಿಗೆ ಕಟ್ಟಿಹಾಕಿ ನಗ, ನಾಣ್ಯ ದೋಚಿ ಪರಾರಿ

0
188

ಕಲಬುರಗಿ: ಐವರು ಮುಸುಕುಧಾರಿಗಳು ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ನಗ, ನಾಣ್ಯ ಹಾಗೂ ಕಿರಾಣಿ ಸಾಮಾನುಗಳನ್ನು ದೋಚಿ ಪರಾರಿಯಾದ ಘಟನೆ ಜಿಲ್ಲೆಯ ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ವರದಿಯಾಗಿದೆ.

ಜೇವರ್ಗಿ ಪಟ್ಟಣದ ಶಹಾಪೂರ್ ರಸ್ತೆಯಲ್ಲಿರುವ ನಮಾಜಿ ಲೇಔಟ್‌ನ ನಿವಾಸಿ ರಾಜೇಂದ್ರ ತಂದೆ ಚಂದ್ರಪ್ಪ ಶಿರಸ್ಯಾಡ್ ಅವರ ಮನೆಯಲ್ಲಿಯೇ ದರೋಡೆಯಾಗಿದೆ.

Contact Your\'s Advertisement; 9902492681

ಬೆಳಗಿನ ಜಾವ ಒಂದು ಗಂಟೆಯ ಸುಮಾರಿಗೆ ಐವರು ಮುಸುಕುಧಾರಿಗಳು ಮನೆಗೆ ನುಗ್ಗಿದರು. ಮನೆಯಲ್ಲಿ ಮಲಗಿದ್ದ ರಾಜೇಂದ್ರ ಹಾಗೂ ಪತ್ನಿ ರಾಜೇಶ್ವರಿ ಮತ್ತು ಪುತ್ರರಾದ ಪ್ರಜ್ವಲ್ ಮತ್ತು ಪ್ರಫುಲ್ ಅವರ ಮೇಲೆ ಹಲ್ಲೆ ಮಾಡಿ ಹಗ್ಗದಿಂದ ಅವರೆಲ್ಲರನ್ನೂ ಕಟ್ಟಿಹಾಕಿ ಮನೆಯಲ್ಲಿದ್ದ 80 ಗ್ರಾಮ್ ಚಿನ್ನ, 10,000 ರೂ.ಗಳ ನಗದು, ಕಿರಾಣಿ ಸಾಮಾನುಗಳನ್ನು ದೋಚಿಕೊಂಡು ಹೋದರು.

ದರೋಡೆಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಮನೆಯವರು ಹೇಳಿದ್ದಾರೆ. ದರೋಡೆ ಪ್ರಕರಣದಿಂದ ಜೇವರ್ಗಿಯ ಪಟ್ಟಣದ ಸಾರ್ವಜನಿಕರಲ್ಲಿ ತೀವ್ರ ಭಯ ಹುಟ್ಟಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜೇವರ್ಗಿ ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here