ಇಂದಿನ ಸಂಯುಕ್ತ ಕಿಸಾನ್ ಮೊರ್ಚಾ ಪತ್ರಿಕಾ ಹೇಳಿಕೆ ನವೆಂಬರ್

0
26

ಜೂನ್ 2020 ರಲ್ಲಿ ಮೊದಲಿಗೆ ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದ ಕಾರ್ಪೊರೇಟ್ ಪರ ಎಲ್ಲಾ ಮೂರು ರೈತ ವಿರೋಧಿ ಕರಾಳ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಘೋಷಿಸಿದ್ದಾರೆ. ಗುರು ನಾನಕ್ ಜಯಂತಿಯನ್ನು ಈ ಘೋಷಣೆಗೆ ಆಯ್ಕೆ ಮಾಡಿಕೊಂಡಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾವು ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಹಾಗೂ ಸಂಸದೀಯ ಪ್ರಕ್ರಿಯೆಗಳ ಮೂಲಕ ಈ ನಿರ್ಧಾರ ಕಾರ್ಯಗತವಾಗುವುದನ್ನು ನಿರೀಕ್ಷಿಸುತ್ತದೆ. ಹೀಗೆ ಇದು ಕಾರ್ಯಗತಗೊಂಡರೆ ಒಂದು ವರ್ಷದ ಸುದೀರ್ಘ ಭಾರತದ ರೈತರ ಹೋರಾಟಕ್ಕೆ ಸಂದ ಬಹುದೊಡ್ಡ ಐತಿಹಾಸಿಕ ವಿಜಯವಾಗಲಿದೆ. ಸುಮಾರು 700 ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ.ಲಖೀಂಪುರ್ ಖೇರಿ ಹತ್ಯಾಕಾಂಡ ಸೇರಿದಂತೆ ಈ ಎಲ್ಲಾ ತಡೆಯಬಹುದಾಗಿದ್ದ ಸಾವುಗಳಿಗೆ ಕೇಂದ್ರದ ಮೊಂಡು ಹಠಮಾರಿತನ ವೇ ಕಾರಣ.

Contact Your\'s Advertisement; 9902492681

ಈ ರೈತರ ಹೋರಾಟ ಕೇವಲ ಮೂರು ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ ಮಾತ್ರವೇ ಅಲ್ಲದೇ ಎಲ್ಲಾ ರೈತರ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಯನ್ನು ಖಾತರಿಪಡಿಸುವ ಶಾಸನದ ಈಡೇರಿಕೆಗಾಗಿ ಕೂಡ ಎಂಬುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಮಂತ್ರಿ ಗಳಿಗೆ ನೆನಪಿಸಲು ಬಯಸುತ್ತದೆ. ರೈತರ ಈ ಬಹು ಮುಖ್ಯ ಬೇಡಿಕೆ ಈಗಲೂ ಇತ್ಯರ್ಥ ಆಗಿಲ್ಲ.ಹಾಗೇಯೇ ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ಸಾತಿಯ ಆಗ್ರಹವೂ ಹಾಗೇ ಇದೆ. ಈ ಎಲ್ಲಾ ಬೆಳವಣಿಗೆಗೆಗಳನ್ನು ಎಸ್ ಕೆ ಎಂ ಗಮನಕ್ಕೆ ತಂದುಕೊಂಡು ತಕ್ಷಣದಲ್ಲೇ ಸಭೆ ನಡೆಸಿ ತನ್ನ ತೀರ್ಮಾನವನ್ನು ಪ್ರಕಟಿಸಲಿದೆ.

(-ಬಲ್ ಬೀರ್ ಸಿಂಗ್ ರಾಜೇವಾಲ್ ,ಡಾ.ದರ್ಶನ್ ಪಾಲ್,ಗುರ್ ನಾಮ್ ಸಿಂಗ್ ಚುರಾನಿ,ಹನನ್ನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೇವಾಲ್ ,ಜೋಗಿಂದರ್ ಸಿಂಗ್ ಉಗ್ರಾಹನ್ ,ಶಿವಕುಮಾರ್ ಶರ್ಮಾ ‘ಕಕ್ಕಾಜಿ’ ,ಯಧುವೀರ್ ಸಿಂಗ್.)ಮಹೇಶ್ ಎಸ್. ಬಿ.

ಸಂಯುಕ್ತ ಕಿಸಾನ್ ಮೋರ್ಚಾ ಇಮೇಲ್ samyuktkisanmorcha@gmail.com

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here