ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ್ದಾರೆ. ಇದು ರೈತ ಚಳುವಳಿಯಲ್ಲೇ ಚಾರಿತ್ರಿಕ ವಿಜಯ. ಇದು ಆರ್ ಕೆ ಎಸ್ (ಎ ಐ ಕೆ ಕೆ ಎಂಎಸ್) ಕೂಡ ಮುಖ್ಯ ಭಾಗವಾಗಿರುವ ಎಸ್ ಕೆ ಎಂ ಪತಾಕೆಯಡಿ ನಡೆದ ರೈತ ಚಳುವಳಿ ಈ ವಿಜಯಕ್ಕೆ ವಿಶ್ವವ್ಯಾಪಿ ಮಹತ್ವವಿದೆ. ಇದು 700 ಹುತಾತ್ಮ ರೈತರ ಜೀವ ಕೊಟ್ಟು ರೈತರು ಗಳಿಸಿದ ವಿಜಯ; ಅವರ ಪರಿಶ್ರಮದಾಯಕ ಹೋರಾಟಗಳಿಂದ, ಬಲಿದಾನಗಳಿಂದ ಗಳಿಸಿದ ವಿಜಯ. ಹುತಾತ್ಮ ರೈತರಿಗೆ ಹೃದಯದಾಳದ ಶ್ರದ್ದಾಂಜಲಿಗಳು!
ಇತಿಹಾಸವನ್ನು ಬರೆಯುವವರು ಜನರೇ ಎಂದು ಮತ್ತೊಮ್ಮೆ ಸಾಬೀತಾಗಿದೆ. ಹೋರಾಟ ನಡೆಯುತ್ತಿದೆ. ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಂಡಿಲ್ಲ. ಉತ್ಪಾದನಾ ವೆಚ್ಚದ ಮೇಲೆ ಶೇ. 50ರಷ್ಟು ಹೆಚ್ಚಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸುವುದನ್ನು ಖಚಿತಪಡಿಸುತ್ತವೆ ಎಂದು ಘೋಷಿಸಿಲ್ಲ.
ದೇಶದ ಎಲ್ಲೆಡೆ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ರೈತರ ಚಳುವಳಿಯ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆಯಾಗಿಲ್ಲ. ಮತ್ತೊಂದು ವಿಷಯವೆಂದರೆ, ಹುತಾತ್ಮ ರೈತರ ಕುಟುಂಬಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು.
ಎಲ್ಲಾ ಹೋರಾಟ ನಿರತ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ಸುಚಿಂತಕರು ಹಾಗೂ ಎಲ್ಲಾ ನಾಗರಿಕರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಹುತಾತ್ಮ ರೈತರು ಅಮರವಾಗಲಿ! ಚಳುವಳಿ ಅಮರವಾಗಲಿ!
ಕ್ರಾಂತಿ ಚಿರಾಯುವಾಗಲಿ!
ರೈತ ಕಾರ್ಮಿಕರ ಒಗ್ಗಟ್ಟು ಚಿರಾಯುವಾಗಲಿ!
ಆರ್ ಕೆ ಎಸ್ (ಎ ಐ ಕೆ ಕೆ ಎಂ ಎಸ್) ಜಿಂದಾಬಾದ್!
ಎಸ್ ಕೆ ಎಂ ಜಿಂದಾಬಾದ್!
ಕಾಮ್ರೇಡ್ ಸತ್ಯವಾನ್
ಅಧ್ಯಕ್ಷರು
ಕಾಮ್ರೇಡ್ ಶಂಕರ್ ಘೋಷ್
ಪ್ರಧಾನ ಕಾರ್ಯದರ್ಶಿ
ಸುದ್ದಿ ಇವರಿಂದ,
ಮಹೇಶ್ ಎಸ್. ಬಿ.
(ಜಿಲ್ಲಾ ಕಾರ್ಯದರ್ಶಿ, RKS, ಕಲಬುರಗಿ)