ರೈತರ ಐತಿಹಾಸಿಕ ಪ್ರತಿರೋಧಕ್ಕೆ ಮಣಿದ ಮೋದಿ ಸರಕಾರ – ಕೆಪಿಆರ್ ಎಸ್

0
25

ದೇಶದ ಕೃಷಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ವಹಿಸಿಕೊಡುವ ನರೇಂದ್ರ ಮೋದಿಯವರ ಒಕ್ಕೂಟ ಸರಕಾರದ ದೇಶ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಪ್ರತಿರೋಧಿಸಿ, ಕಳೆದೆರಡು ವರ್ಷಗಳಿಂದ ದೇಶವ್ಯಾಪ್ತಿಯಾಗಿ ಕೋಟ್ಯಾಂತರ ಜನ ಮತ್ತು ಮುಖ್ಯವಾಗಿ ದೆಹಲಿ ಸುತ್ತಲಿನ ಐದು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಕಳೆದ 360 ದಿನಗಳಿಂದ ನಿರಂತರವಾಗಿ ನಡೆಸುತ್ತಿದ್ದ ಐತಿಹಾಸಿಕ ಮತ್ತು ಜಾಗತಿಕ ಗಮನ ಸೆಳೆದ ಸಮರ ಶೀಲ ಪ್ರತಿರೋಧಕ್ಕೆ ಮಣಿದ ಒಕ್ಕೂಟ ಸರಕಾರ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದಿರುವುದಾಗಿ ಪ್ರಕಟಿಸಿರುವುದು ದೇಶದ ರೈತರು, ಕಾರ್ಮಿಕರು ಹಾಗೂ ನಾಗರೀಕರ ಸಮರ ಶೀಲ ಹೋರಾಟಕ್ಕೆ ಸಂದ ಜಯವಾಗಿದೆ.

ಇದರಿಂದ ದೇಶದ ಕೃಷಿಯನ್ನು ಹಾಗೂ ಸ್ವಾವಲಂಬನೆಯನ್ನು ಕಬಳಿಸುವ ಕಾರ್ಪೋರೇಟ್ ಕಂಪನಿಗಳ ಹುನ್ನಾರಕ್ಕೆ ತೀವ್ರ ಹಿನ್ನಡೆಯಾದಂತಾಗಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಹರ್ಷ ವ್ಯಕ್ತ ಪಡಿಸುತ್ತದೆ. ಹೋರಾಟದಲ್ಲಿ ತೊಡಗಿದ ಎಲ್ಲರನ್ನು ಹರತ್ಪೂರ್ವಕವಾಗಿ ಅಭಿನಂದಿಸಿದೆ.

Contact Your\'s Advertisement; 9902492681

ಆದರೇ, ಇದು ಶ್ರೀ ನರೇಂದ್ರ ಮೋದಿಯವರು ಈ ಕುರಿತು ಸಂಸತ್ತಿನಲ್ಲಿ ಕ್ರಮವಹಿಸಿ ಖಾತರಿ ಪಡಿಸುವ ಮೂಲಕ ಮಾತ್ರವೇ ನಿಜವಾಗಲಿದೆ.

ಒಕ್ಕೂಟ ಸರಕಾರ ಈ ಕಾರ್ಪೊರೇಟ್ ಕೃಷಿಯನ್ನು ದೇಶದ ಮೇಲೆ ಬಲವಂತವಾಗಿ ಹೇರಲು ಹಟಮಾರಿ ನಿಲುವನ್ನು ತಾಳಿದ್ದರಿಂದ, ಹೋರಾಟ ನಿರತರು, ಸಾವಿರಾರು ರೈತರು ಹೋರಾಟದ ಕಣದಲ್ಲಿಯೇ ಸಾವಿಗೀಡಾಗುವಂತಾಯಿತು. ಲಾಠಿ ಚಾರ್ಜ, ಟಿಯರ್ ಗ್ಯಾಸ್ ಹಾಗೂ ವಾಟರ್ ಕೆನಾನ್ , ಲಖಿಂಪುರದಲ್ಲಿ ವಾಹನಗಳನ್ನು ಹಾಯಿಸಿ ಕೊಲ್ಲುವ ದಾಳಿಗಳನ್ನು, ಗುಂಡಾ ದಾಳಿಗಳನ್ನು ಪೋಲೀಸರ ಹಿಂಸೆಗಳು, ಕೇಸುಗಳನ್ನು ಎದುರಿಸುವಂತಾಯಿತು.

ಹೋರಾಟ ನಿರತರನ್ನು ನಕಲಿ ರೈತರೆಂದು ಅವಾಚ್ಯವಾಗಿ ನಿಂದಿಸಲಾಯಿತು. ಇದಕ್ಕೆಲ್ಲಾ ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರವೇ ನೇರ ಹೊಣೆಗಾರನಾಗಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ.

ಕರ್ನಾಟಕ ಸರಕಾರ ಒಕ್ಕೂಟ ಸರಕಾರದ ಈ ನೀತಿಗಳನ್ನು ಜಾರಿಗೊಳಿಸುವಲ್ಲಿ ತಾನೇ ಮೊದಲಿಗನೆಂದು ಬೀಗಿ, ಕಾರ್ಪೋರೇಟ್ ಕಂಪನಿಗಳಿಗೆ ರಾಜ್ಯದ ಕೃಷಿಯನ್ನು ವಹಿಸುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಏಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಇವುಗಳನ್ನು ವಾಪಾಸು ಪಡೆಯುವ ಕುರಿತು ರಾಜ್ಯ ಸರಕಾರ ಮಾತನಾಡದೇ ಈಗಲೂ ಮೌನವಾಗಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ. ತಕ್ಷಣವೇ ರಾಜ್ಯ ಸರಕಾರವೂ ಒಕ್ಕೂಟ ಸರಕಾರದಂತೆ ಕ್ರಮವಹಿಸಿ ಈ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಬಲವಾಗಿ ಒತ್ತಾಯಿಸುತ್ತದೆ.

ರಾಜ್ಯ ಸರಕಾರ ಈ ಕಾಯ್ದೆಗಳನ್ನು ವಾಪಾಸು ಪಡೆಯದೇ, ಕೇವಲ ಒಕ್ಕೂಟ ಸರಕಾರ ವಾಪಾಸು ಪಡೆದುದರ ಪ್ರಯೋಜನ ನಮಗಿಲ್ಲವೆಂದು ರಾಜ್ಯದ ಜನತೆಗೆ ಸ್ಪಷ್ಟಪಡಿಸಿದೆ. ಹೀಗಾಗಿ, ರಾಜ್ಯದ ರೈತರು – ನಾಗರೀಕರು ಹೋರಾಟವನ್ನು ತೀವ್ರ ಗೊಳಿಸಲು ಕರೆ ನೀಡುತ್ತದೆ.

ಒಕ್ಕೂಟವಾದಿ ಸರಕಾರವೂ, ನಮ್ಮ ಹಕ್ಕೊತ್ತಾಯ ಗಳ ಹಲವು ಅಂಶಗಳನ್ನು ಪರಿಗಣಿಸಿಲ್ಲ. ಮುಖ್ಯವಾಗಿ ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿ ಪಡಿಸುವ ಕಾಯ್ದೆ ಹಾಗೂ ರೈತರ – ಕೃಷಿಕೂಲಿಕಾರರ ಸಾಲ ಮನ್ನಾ ಮಾಡುವ ಋಣ ಮುಕ್ತ ಕಾಯ್ದೆ ರಚನೆ ಕುರಿತು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ವಾಪಾಸು ಪಡೆಯುವ ಕುರಿತು ಮೌನ ವಹಿಸಿದೆ ಮಾತ್ರವಲ್ಲಾ, ದೇಶದ ಕಾರ್ಮಿಕ ವರ್ಗವನ್ನು ಕಾರ್ಪೋರೆಟ್ ಸುಲಿಗೆಗೊಳಪಡಿಸಿದ ಕಾರ್ಮಿಕ ಸಂಹಿತೆಗಳ ಕುರಿತು ಏನನ್ನು ಮಾತನಾಡಿಲ್ಲ.

ಹೀಗಾಗಿ ಈ ಪ್ರಶ್ನೆಗಳಿಗಾಗಿ ಹೋರಾಟ ಮುಂದುವರೆಯಲಿದೆಯೆಂದು ಸ್ಪಷ್ಢ ಪಡಿಸಿದೆ. ಈ ಎಲ್ಲಾ ಜನಪರ ಹಾಗೂ ದೇಶದ ಸ್ವಾವಲಂಬಿ ಹೋರಾಟವನ್ನು ತೀವ್ರಗೊಳಿಸುವಂತೆ ಜನತೆಗೆ ಕರೆ ನೀಡಿದೆ. ತೀವ್ರ ತೆರನಾದ ಮತ್ತು ದೀರ್ಘಕಾಲದ ನಿರಂತರ ಹೋರಾಟಗಳು ಜನತೆಗೆ ಜಯವನ್ನು ತಂದುಕೊಡಲಿವೆಯೆಂಬುದಕ್ಕೆ ಈ ಚಳುವಳಿ ಸಾಕ್ಷಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ವಿವರಿಸಿದೆ.

ಶರಣಬಸಪ್ಪಾ ಮಮಶೆಟ್ಟಿ
ಜಿಲ್ಲಾ ಅಧ್ಯಕ್ಷರು KPRS

*ಯು.ಬಸವರಾಜ*
ಪ್ರಧಾನ ಕಾರ್ಯದರ್ಶಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here