ಮೌನ ಸಾಕು ಮಾತಾಡು ಭಾರತ: ಬಯಲು ಕವಿಗೋಷ್ಠಿ ಹೋರಾಟದ ದನಿ ಹೂತಿದೆ ಪ್ರಜಾತಂತ್ರ: ಹಿಂದಿನಕೇರಿ

0
51

ವಾಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ಅಧಿಕಾರಕ್ಕೇರಿದ್ದು ಪ್ರಜೆಗಳ ಹೋರಾಟದ ದನಿಯೇ ಹೂತು ಹೋಗಿದೆ. ಅನ್ಯಾಯದ ವಿರುದ್ಧ ಯಾರು ಏನೇ ಪ್ರಶ್ನೆ ಮಾಡಿದರೂ ನಗಣ್ಯವಾಗುತ್ತಿದೆ ಎಂದು ಬರಹಗಾರ, ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ಕಳವಳ ವ್ಯಕ್ತಪಡಿಸಿದರು.

ಕೊಲ್ಲೂರು ಗ್ರಾಮದ ಐತಿಹಾಸಿಕ ಕೋಟೆ ಪರಿಸರದ ಭೀಮಾನದಿ ದಡದಲ್ಲಿ ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ “ಮೌನ ಸಾಕು ಮಾತಾಡು ಭಾರತ” ಶಿರ್ಷಿಕೆಯಡಿಯ ಬಯಲು ಕವಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜನಪರ ಮುಖವಾಡದ ಕೋಮುವಾದಿ ಸರ್ಕಾರ ದೇಶದಲ್ಲಿ ಪ್ರಗತಿಪರ ಲೇಖಕರ ಹತ್ಯೆಗಳಾಗುತ್ತಿವೆ. ಜಾತಿ, ಧರ್ಮ, ಭಾಷೆಗಳ ವಿಷ ಬೀಜವನ್ನು ಬಿತ್ತಿ ಜನರ ಐಕ್ಯತೆಯನ್ನು ಮುರಿಯಲಾಗುತ್ತಿದೆ. ಚಳುವಳಿಗಳನ್ನೇ ಸಹಿಸದ ಈ ವ್ಯವಸ್ಥೆ ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಜನ ವಿರೋಧಿ ನೀತಿಗಳ ವಿರುದ್ಧ ಮಾತನಾಡುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗುತ್ತಿದೆ.

ಆಂತರಿಕ ಧಾರ್ಮಿಕ ಭಯೋತ್ಪಾದನೆ ಚೈತನ್ಯ ಪಡೆದುಕೊಂಡಿದೆ ಎಂದು ಆಪಾದಿಸಿದ ಹಿಂದಿನಕೇರಿ, ಮುಂದಿನ ಪೀಳಿಗೆಯ ನೆಮ್ಮದಿಗಾಗಿ ಹೋರಾಟಗಾರರು ತಮ್ಮ ದನಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಬರಹಗಾರರು ಸತ್ಯವನ್ನು ಬಯಲಿಗೆಳೆಯಲು ಹಿಂದೇಟು ಹಾಕಬಾರದು. ಸಾಹಿತ್ಯ ಆಳುವ ವರ್ಗದ ವರ್ಣನೆಗೆ ನಿಲ್ಲಬಾರದು. ಬಂಡಾಯದ ಸಾಹಿತ್ಯ ಮತ್ತಷ್ಟು ಪ್ರಬಲವಾಗಿ ಜನರ ಎದೆತಾಕಬೇಕು ಎಂದರು.

ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಮಾತನಾಡಿ, ಜನಸಾಮನ್ಯರ ಬದುಕು ಬೀದಿಗೆ ತರುವ ಕಾಯ್ದೆಗಳು ಜಾರಿಗೆ ಬರುತ್ತಿದ್ದರೂ ಮಾತನಾಡದಂತಹ ಸ್ಥಿತಿಗೆ ಭಾರತೀಯರು ತಲುಪಿರುವುದು ವಿಷದನಿಯ. ಈ ಕುರಿತು ಸಾಹಿತಿಗಳು ಬಹಿರಂಗವಾಗಿ ಮಾತನಡುವ ಧೈರ್ಯ ಬೆಳೆಸಿಕೊಳ್ಳಬೇಕು. ಅಮೂಲಕ ಜನತೆಯಲ್ಲಿ ಹೋರಾಟದ ಮನೋಭಾವ ಸೃಷ್ಠಿಸಬೇಕು ಎಂದು ಹೇಳಿದರು.

ಸಂಚಲನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ದಯಾನಂದ ಖಜೂರಿ, ಕನ್ನಡ ಸಾಹಿತ್ಯ ಪರಿಷತ್ ವಾಡಿ ವಲಯ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಬರಹಗಾರರಾದ ಸಿದ್ದಯ್ಯಶಾಸ್ತ್ರೀ ನಂದೂರಮಠ, ಮಲ್ಲೇಶ ನಾಟೀಕಾರ, ರವಿಕುಮಾರ ಕೋಳಕೂರ, ರವಿಕುಮಾರ ಮುತ್ತಗಿ, ವಿಕ್ರಮ ನಿಂಬರ್ಗಾ, ಮಲಿಕ್‍ಪಾಶಾ ಮೌಜನ್, ತುಕಾರಾಮ ರಾಠೋಡ ಸೇರಿದಂತೆ ಇತರರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here