ಸೇಡಂನಲ್ಲಿ ೨೬ ರಂದು ‘ಅಮ್ಮ ಪ್ರಶಸ್ತಿ’ ಪ್ರದಾನ

0
12

ಸೇಡಂ: ಇಲ್ಲಿಯ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಪ್ರತಿಷ್ಠಾನ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ‘ಅಮ್ಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನ.೨೬ ರಂದು ಶುಕ್ರವಾರ ಸಂಜೆ ೫.೩೦ ಕ್ಕೆ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಜಿ ಸಾನಿಧ್ಯ ವಹಿಸುವರು. ಶಾಸಕರು ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ರಾಜಕುಮಾರ ಪಾಟೀಲ ತೆಲಕೂರ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ಗುಲಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ದಯಾನಂದ ಅಗಸರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ಕೇಂದ್ರೀಯ ವಿವಿ ಕುಲಸಚಿವರಾದ ಡಾ.ಬಸವರಾಜ ಡೋಣುರ ಮುಖ್ಯ ಅತಿಥಿಗಳಾಗಿರುವರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಸಂಗಯ್ಯ ಕೊಂತನಪಲ್ಲಿ ಉಪಸ್ಥಿತರಿರುವರು.

ಅಮ್ಮ ಪ್ರಶಸ್ತಿ ಪುರಸ್ಕೃತರು : ೨೧ ನೇ ವರ್ಷದ ಅಮ್ಮ ಪ್ರಶಸ್ತಿಗೆ ಭಾಜನರಾದ, ಡಾ.ಭೈರಮಂಗಲ ರಾಮೇಗೌಡ, ಕಾವ್ಯಶ್ರೀ ಮಹಾಗಾಂವಕರ್, ಡಾ.ಆನಂದ ಋಗ್ವೇದಿ, ಸುನೀತಾ ಕುಶಾಲನಗರ, ಭಾರತಿ ಬಿ ವಿ., ಡಾ.ಅಶೋಕ ನರೋಡೆ, ಚೇತನ ಸೋಮೇಶ್ವರ, ಡಾ.ಲಕ್ಷ್ಮೀ ಶಂಕರ ಜೋಶಿ, ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಡಾ.ಶ್ರುತಿ ಬಿ ಆರ್., ನಂದಿನಿ ಹೆದ್ದುರ್ಗ, ನಿರ್ಮಲಾ ಶೆಟ್ಟರ್, ಶ್ರೀದೇವಿ ಕೆರೆಮನೆ, ಸಹದೇವ ಯರಗೊಪ್ಪ ಅವರಿಗೆ ಸತ್ಕಾರ, ಪ್ರಮಾಣಪತ್ರ ಮತ್ತು ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತದೆ.

ಅಮ್ಮ ಗೌರವ ಪುರಸ್ಕೃತರು : ೧೪ ನೇ ವರ್ಷದ ಅಮ್ಮ ಗೌರವ ಪುರಸ್ಕಾರಕ್ಕೆ ಭಾಜನರಾದ ಹಿರಿಯ ವಿದ್ವಾಂಸದರಾದ ಡಾ.ಬಸವರಾಜ ಸಬರದ, ಹಿರಿಯ ರಂಗತಜ್ಞರಾದ ಮಂಡ್ಯ ರಮೇಶ, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ, ವೈದ್ಯಕೀಯ ಕ್ಷೇತ್ರದ ಡಾ.ನಿiಲಾ ವಿಜಯಕುಮಾರ ಪಾಟೀಲ, ಸಮಾಜ ಸೇವೆಯಲ್ಲಿ ಜಯಶ್ರೀ ಐನಾಪುರ ಅವರನ್ನು ಗೌರವಿಸಲಾಗುವುದು.

ಉಡಿ ತುಂಬಲಿರುವ ‘ತೊಗರಿ ಬೇಳೆ’ ಕಳೆದ ಅನೇಕ ವರ್ಷಗಳಂತೆ ಮುಂದುವರಿಸಿಕೊಂಡು ಬಂದಿರುವ ಅಮ್ಮ ಪ್ರಶಸ್ತಿ ಹಾಗೂ ಅಮ್ಮ ಗೌರವ ಪುರಸ್ಕೃತರಿಗೆ ಸನ್ಮಾನದ ಸಂದರ್ಭದವೀ ಬಾರಿಯೂ ‘ತೊಗರಿ ಬೇಳೆ’ಯ ಮೂಲಕ ಗೌರವಿಸಲಾಗುತ್ತದೆ.

ಪ್ರಶಸ್ತಿ ನೀಡುವಾಗ ಸತ್ಕಾರ, ಪ್ರಮಾಣ ಪತ್ರ, ನಗದು ಪುರಸ್ಕಾರದ ಜೊತೆಗೆ ನಮ್ಮ ನೆಲದ ಕಣಜವಾದ ತೊಗರಿ ಬೇಳೆಯನ್ನು ಉಡಿ ತುಂಬುವ ರೀತಿಯಲ್ಲಿ ಗೌರವಿಸುವುದನ್ನು ಈ ವರ್ಷವೂ ಮುಂದುವರಿಯಲಿದೆ. ಹಾಗೆಯೇ, ಇಬ್ಬರು ಬಡ ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಜೀವನಕ್ಕಾಗಿ ಎರಡು ಹೊಲಿಗೆ ಮಷಿನ್ ಗಳನ್ನು ಸಹ ನಿವೃತ್ತ ಮೇಷ್ಟ್ರು ನಾಗಪ್ಪ ಮಾಸ್ಟರ್ ಮುನ್ನೂರ್ ಸ್ಮರಣಾರ್ಥವಾಗಿ ನೀಡಲಾಗುವುದು ಎಂದು ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here