ಚೀನಾದಲ್ಲಿ ಭಿಕ್ಷುಕರು ಡಿಜಿಟಲ್ ಸೇವೆ ಬಳಕೆ.!!

0
105

ಬೀಜಿಂಗ್‌: ಭಾರತೀಯರಿಗೆ ಈ ಸುದ್ದಿ ಚೂರು ಅಚ್ಚರಿ ಅನಿಸಿದರು ಅನಿಸಬಹುದು ಆದರೆ ಚೀನಾದಲ್ಲಿ ಇದು ವಾಸ್ತವ ಸುದ್ದಿ. ಎಲ್ಲಾ ರೀತಿಯ ತಾನು ಮುಂದೆ ಎಂದು ತೋರಿಸಿಕೊಳ್ಳುವ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಮುಂದುವರೆಯುತ್ತಿರುವ ದೇಶ ಚೀನಾದಲ್ಲಿ ಈಗ ಭಿಕ್ಷುಕರು ಕೂಡ ಡಿಜಿಟಲ್ ಸೇವೆಯನ್ನು ಬಳಸುವ ಮೂಲಕ ಭಿಕ್ಷಾಟನೆ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ದಾರಿಯಲ್ಲಿ ಹೋಗುವಾಗ ಭಿಕ್ಷುಕರು ಎದುರು ಬಂದರೆ ಚಿಲ್ಲರೆ ಇಲ್ಲ, ಮುಂದೆ ಹೊಗಪ್ಪ ಎಂದು ಕಳಿಸುವ ಜನರಿಗೆ ಈ ವರದಿ ಅಚ್ಚರಿ ಉಂಟು ಮಾಡಬಹುದು, ಆದರೆ ಚೀನಾದಲ್ಲಿ ಹೀಗೆ ನೆಪ ಹೇಳಿ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಏಕೆಂದರೆ ಚೀನಾದಲ್ಲಿ ಭಿಕ್ಷುಕರು ಕೂಡಾ ಡಿಜಿಟಲ್‌ ಸೇವಿಯೊಂದಿಗೆ. ಇ- ವ್ಯಾಲೆಟ್‌, ಕ್ಯೂಆರ್‌ ಕೋಡ್‌ನಂತಹ ಆಧುನಿಕ ಹಣ ವರ್ಗಾವಣೆ ತಂತ್ರಂಶವನ್ನು ಅಳವಡಿಸಿಕೊಂಡಿದ್ದಾರೆ.

Contact Your\'s Advertisement; 9902492681

ಪ್ರವಾಸಿ ತಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷುಕರು ಕೊರಳಿಗೆ ಕ್ಯೂಆರ್‌ ಕೋಡ್‌ ಹಾಗೂ ಇ ವ್ಯಾಲೆಟ್‌ಗಳನ್ನು ಕೊರಳಿಗೆ ತೂಗುಹಾಕಿಕೊಂಡು ಭಿಕ್ಷೆ ಬೇಡುತ್ತಿರುವ ದೃಶ್ಯಗಳು ಚೀನಾದೆಲ್ಲೆಡೆ ಸಾಮಾನ್ಯವಾಗಿವೆ ಕಾಣುತ್ತಿವೆ.

ಭಿಕ್ಷಾ ಪಾತ್ರೆ ಕೈಯಲ್ಲಿ ಹಿಡಿದು ಜನರ ಬಳಿ ಹೋಗಿ ಹಣ ಬೇಡ್ಡುವುದಕ್ಕಿಂತ ಇ ವಾಲೆಟ್‌ಗಳ ಬಳಕೆಯಿಂದ ಭಿಕ್ಷುಕರಿಗೆ ಬರುತ್ತಿರುವ ದೇಣಿಗೆಯ ಪ್ರಮಾಣ ಹೆಚ್ಚಾಗಿದೆಯಂತೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here