ಸುರಪುರ: ರೈತರ ವಿವಿಧ ಬೇಡಿಕೆಗಳಿಗಾಗಿ ರಾಷ್ಟ್ರೀಯ ಸಂಯುಕ್ತ ಹೋರಾಟ ಸಮಿತಿಯಿಂದ ಕರೆ ನೀಡಿರುವ ಹೋರಾಟಕ್ಕೆ ಬೆಂಬಲಿಸಿ ವಿವಿಧ ರೈತ ಸಂಘಟನೆಗಳು ನಗರದ ಹಸನಾಪುರ ಪೆಟ್ರೋಲ್ ಬಂಕ್ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ಪಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ದೇಶದಲ್ಲಿ ಜಾರಿಗೆ ತರಲು ಮುಂದಾಗಿದ್ದ ಮೂರು ಕೃಷಿ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿರುವ ಪ್ರಧಾನ ಮಂತ್ರಿಯವರು ಕೂಡಲೇ ಕಾನೂನು ಹಿಂಪಡೆದ ಬಗ್ಗೆ ಸಂಸತ್ತಿನಲ್ಲಿ ಘೋಷಣೆ ಮಾಡಬೇಕು.
ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವುದನ್ನು ಕಾನೂನು ಬದ್ಧಗೊಳಿಸಬೇಕು.ಕಳೆದ ಒಂದು ವರ್ಷದಿಂದ ಹೋರಾಟದಲ್ಲಿ ಮೃತರಾದ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.ಹಿಂಗಾರು ಬೆಳೆಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು.ರೈತರ ಭೂಮಿ ಸರ್ವೇ ಕಾರ್ಯ ನಿಧಾನಗತಿಯಾಗಿದ್ದು ಸರ್ವೇಯರ್‌ಗಳ ಸಮಸ್ಯೆ ದೂರಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,ಮಹೇಶಗೌಡ ಸುಬೇದಾರ,ಬಸವರಾಜಪ್ಪಗೌಡ ಹೆಮ್ಮಡಗಿ,ಡಾ:ಹನೀಫ್ ಖುರೇಶಿ,ದೇವರಾಜ ಗೌಡಗೇರಾ,ಶಿವು ಸಾಹುಕಾರ ರುಕ್ಮಾಪುರ, ಚನ್ನಬಸವ ವಾಲಿ,ದೇವಿಂದ್ರಪ್ಪಗೌಡ ಮಾಲಗತ್ತಿ,ಮಲ್ಲನಗೌಡ ಹಗರಟಗಿ,ಅಮರೇಶ ಬಿರಾದಾರ್,ದ್ಯಾವಣ್ಣ ಗುಜ್ಜಲ್,ಮಲ್ಲಿಕರಡ್ಡಿ ಬಿಳವಾಟ,ನಾಗರಾಜ ಬಡಿಗೇರ,ಚಂದ್ರಶೇಖರ ಡೊಣೂರ,ಮಲ್ಲಣ್ಣ ಹುಬ್ಬಳ್ಳಿ ಸೇರಿದಂತೆ ಅನೇಕರಿದ್ದರು.ಸುಮಾರು ಒಂಟೆಗಳ ಕಾಲ ರಸ್ತೆ ತಡೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.ಪಿಎಸ್‌ಐ ಕೃಷ್ಣಾ ಸುಬೇಬಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.