ಕಾಂಗ್ರೇಸ್ ಅಭ್ಯರ್ಥಿಯ ಮತ ಭೆಟೆ

0
24

ಚಿಂಚೋಳಿ: ಚಿಂಚೋಳಿ ತಾಲೂಕಿನ ಪೋಲಕಪಳ್ಳಿ, ಶಾದಿಪುರ್ ಕುುಂಚಾವರಂ, ಕಲ್ಲೂರ್ ಗ್ರಾಮಗಳಲ್ಲಿ ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಶಿವಾನಂದ ಪಾಟೀಲ ಅವರು ಮತಯಾಚನೆ ಮಾಡಿದರು.

ತಾಲೂಕಿನ ಮೀರಿಯಾಣ ಪಂಚಾಯತ್ ವ್ಯಾಪ್ತಿಯ ಕೊಲ್ಲೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯವರು ಯಾವ ಆಧಾರದ ಮೇಲೆ ಅಭ್ಯರ್ಥಿಗೆ ಟಿಕೆಟ್ ನೀಡಿ ದಿಯೋ ಗೊತ್ತಿಲ್ಲ, ಆರು ವರ್ಷದಲ್ಲಿ ಬಿ. ಜಿ. ಪಾಟೀಲ್ ಅವರ ಸಾಧನೆಗಳೇನು, ಕೊಡುಗೆಗಳೇನು ಯಾವ ಯಾವ ಯೋಜನೆಗಳು ಯಾವ ಯಾವ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಶಿವಾನಂದ ಪಾಟೀಲ್ ಅವರು ಸವಾಲುಗಳನ್ನು ಹಾಕಿ ಪ್ರಶ್ನಿಸಿದರು.

Contact Your\'s Advertisement; 9902492681

ನಾನು ತಳಮಟ್ಟದಿಂದ ಬಂದಿದ್ದೇನೆ ಗ್ರಾಮ ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ನಾನು ಕೆಲಸ ಮಾಡುತ್ತಾ ಬಂದಿದ್ದೇನೆ ಕಾಂಗ್ರೆಸ್ ಪಕ್ಷವು ನನ್ನ ಕೆಲಸವನ್ನು ನೋಡಿ ನನಗೆ ಟಿಕೆಟ್ ನೀಡಿದೆ. ನನಗೆ ಒಂದು ಅವಕಾಶ ನೀಡಿ,ಗ್ರಾಮಪಂಚಾಯಿತಿಗಳ ಸಮಸ್ಯೆಗಳನ್ನು ಹಾಗೂ ಗ್ರಾಮ ಪಂಚಾಯತಿ ಸದಸ್ಯರು 24 ಗಂಟೆ ನಾನು ಸಹಾಯಕ್ಕಾಗಿ ಇರುತ್ತೇನೆ. ಯಾವುದೇ ವಿಷಯ ಆಗಲಿ ನಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಸುಭಾಷ್ ರಾಠೋಡ ಮಾತನಾಡಿದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರ ಪರ ಮತಯಾಚನೆ ಮಾಡಿದರು.

ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಲೀಡರ್ಷಿಪ್ ಕೊರತೆಯಿಲ್ಲ.ಶಿವಾನಂದ ಪಾಟೀಲ್ ಅವರು ಗ್ರಾಮ ಪಂಚಾಯತ್ ಇಂದ ಬಂದಂತಹ ವ್ಯಕ್ತಿ, ಪಂಚಾಯಿತಿ ಕ್ಷೇತ್ರದ ಸಂಪೂರ್ಣ ಅರಿವು ಹೊಂದಿರುವವರು,ಹಣ ಗೋಸ್ಕರ ತಮ್ಮ ಮತವನ್ನು ಮಾರಿಕೊಳ್ಳಬೇಡಿ. ದುಡ್ಡು ಶಾಶ್ವತವಲ್ಲ , ಪಕ್ಷ ಅಂದರೆ ತಾಯಿ ಸಮಾನ. ನಮ್ಮ ಅಭ್ಯರ್ಥಿಯನ್ನು ಬಹುಮತದಿಂದ ಗೆದ್ದಿಸಿ ತರೋಣ, ಚಿಂಚೋಳಿ ಕ್ಷೇತ್ರದಿಂದ ಬಹುಮತ ನೀಡಿ ಆರಿಸಿ ತರೂಣಾ ಎಂದು ಪಂಚಾಯತ್ ಸದಸ್ಯರಲ್ಲಿ ಮತಯಾಚನೆ ಮಾಡಿ ಹೇಳಿದರು.

ಈ ಸಂಧರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಮಲಿ, ಭೀಮರಾವ್ ತೆಗಲತಿಪ್ಪಿ,
ಗೋಪಾಲರಾವ್ ಕಟ್ಟಿಮನಿ ಪುರಸಭೆ ಉಪಾಧ್ಯಕ್ಷರಾದ ಸಯ್ಯದ ಶಬ್ಬೀರ್,ಅಬ್ದುಲ್ ಬಾಶೀದ್,ಅನ್ವರ್ ಖತಿಬ್,ಬಸವರಾಜ ಕಡಬೂರ,ಖಲಿಲ್ ಪಟೇಲ್, ಆರ್.ಗಣಪತರಾವ್, ಮಹಮದ್ ಹಾದಿಸಾಬ್, ಹಣಮಂತ ಕೊಡದೂರ, ರೇವಣಸಿದ್ಧ ಪೂಜಾರಿ, ನಾಗೇಶ್ ಗುಣಾಜಿ,ವಕ್ತಾರರಾದ ಶರಣ ಪಾಟೀಲ,ಮಧುಸೂದನ ರೆಡ್ಡಿ, ರವಿರಾಜ್ ಕೊರವಿ, ಸುರೇಶ ಭಂಟ್ಟಾ, ಮಹಮದ್ ಹಾದಿ, ರೇವಣಸಿದ್ದ ಪೂಜಾರಿ, ಬಸವರಾಜ್ ಕಡಬೂರ, ಜಗನಾಥ್ ಗುತ್ತೇದಾರ, ಜಗನಾಥ್ ಕಟ್ಟಿ, ಸಂತೋಷ ಗುತ್ತೇದಾರ, ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here