ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಗೆ ಡಿಡಿಪಿಐ ಅಶೋಕ ಭಜಂತ್ರಿ ಬೇಟಿ

0
22

ಶಹಾಬಾದ:ನಗರದ ರಾಷ್ಟ್ರ ಭಾಷಾ ಶಿಕ್ಷಣ ಸಮಿತಿಯ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಗೆ ಹಾಗೂಎಸ್.ಎಸ್. ನಂದಿ ಪ್ರೌಢಶಾಲೆಗೆ ಶನಿವಾರ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಶೋಕ ಭಜಂತ್ರಿ ಅವರು ಬೇಟಿ ನೀಡಿ ಪರಿಶೀಲಿಸಿದರು.

ಶಾಲೆಗೆ ಹಠಾತನೇ ಬೇಟಿ ನೀಡಿ, ತರಗತಿ ಕೋಣೆಗೆ ಹೋಗಿ ಹಾಜರಾತಿಯನ್ನು ಪರಿಶೀಲಿಸಿದರಲ್ಲದೇ, ಮಕ್ಕಳೊಂದಿಗೆ ಮಾತನಾಡಿದರು.ಅಲ್ಲದೇ ಸಮಾಜ, ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಕೇಳಿದರು.ಅಲ್ಲದೇ ವಿಷಯಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಮಕ್ಕಳಿಗೆ ನೀಡಿದರು.

Contact Your\'s Advertisement; 9902492681

ಅಲ್ಲದೇ ಪಠ್ಯ ಪುಸ್ತಕಗಳನ್ನು ಸರಿಯಾದ ವಿತರಣೆ ಮಾಡಲಾಗಿದೆಯಾ ಎಂದು ಕೇಳಿದರಲ್ಲದೇ, ಶಾಲೆಯಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.ತರಗತಿ ಕೋಣೆಗಳಲ್ಲಿ ದಾಖಲಾದ ಸಖ್ಯೆಗಿಂತ ಕಡಿಮೆ ಮಕ್ಕಳು ಇದ್ದಾರೆ.ಕೆಲವರು ಮುಂಬಯಿಗೆ ಹೋಗಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.ಅವರನ್ನು ಕರೆಯಿಸಿ, ತರಗತಿ ಬರುವಂತೆ ಪ್ರೇರೇಪಿಸಿ ಎಂದು ತಿಳಿಸಿದರು.ಈಗಾಗಲೇ ಅನೇಕ ಬಾರಿ ಅವರ ಮನೆಗೆ ಹೋಗಿದ್ದೆವೆ ಕೆಲವು ವಿದ್ಯಾರ್ಥಿಗಳು ಮರಳಿ ಶಾಲೆಗೆ ಬಂದಿದ್ದಾರೆ.ಕೆಲವು ವಿದ್ಯಾಥಿಗಳು ಕುಟುಂಬ ಸಮೇತ ಮುಂಬಯಿಗೆ ಹೋದ ಪರಿಣಾಮ ಮರಳಿ ಶಾಳೆಗೆ ಬರುತ್ತಿಲ್ಲ.ಫೋನ್ ಕರೆ ಮಾಡಿ ಪಾಲಕರಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ ಎಂದು ಶೀಕ್ಷಕರು ತಿಳಿಸಿದರು. ಮಕ್ಕಳ ವಿದ್ಯಾಭ್ಯಾಸ ಕಡೆಗೆ ಹೆಚ್ಚಿನ ಗಮನಹರಿಸಿ.ಯಾವುದೇ ಕಾರಣಕ್ಕೂ ಮಕ್ಕಳು ಗೈರಾಗದಂತೆ ನಿಗಾವಹಿಸಿ ಎಂದರಲ್ಲದೇ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಗುರುಮಾತೆ ದಮಯಂತಿ ಸೂರ್ಯವಂಶಿ,ಬಾಬಾ ಸಾಹೇಬ ಶಲೂಮಖೇ, ಚನ್ನಬಸಪ್ಪ ಕೊಲ್ಲೂರ್, ಮಹೇಶ್ವರಿ ಗುಳಿಗಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here