ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಅಬಕಾರಿ ಅಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

0
42

ಕಲಬುರಗಿ: ಬಸ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸುಲೇಪೇಟ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಸವೇಶ್ವರ ವೃತ್ತದಲ್ಲಿ ಸೇರಿದ ಭಾರತೀಯ ವಿದ್ಯಾರ್ಥಿ ಮೊರ್ಚಾ ಸಂಘಟನೆ ತಾಲೂಕಾ ಘಟಕದ ನೂರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿದರು.

ರುಮ್ಮನಗೂಡ, ಮೊಘಾ, ಪಸ್ತಾಪೂರದಿಂದ ಬರುವ ಮುಂಜಾನೆ ಮತ್ತು ಸಾಯಂಕಾಲ ಗಂಜಗಿರಿ ತಾಡಪಳ್ಳಿ ವಾಯ ಮಾಡಿಕೊಂಡು  ರುಸ್ತಂಪೂರ ಹೂವಿನಬಾವಿ ಮಾರ್ಗವಾಗಿ ಬರುವ ಬಸ್ಸುಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳ ತರಗತಿಗಳಿಗೆ ಅನುಕೂಲವಾಗುತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಚೆನ್ನೂರ ಗಡಿಲಿಂಗದಳ್ಳಿ ಶಿವರಾಮ ನಾಯಕ ತಾಂಡಾ ಐನಾಪೂರ ಸುತ್ತಮುತ್ತಲಿನ ಗ್ರಾಮಗಳಿಂದ ಸಮಾರು 80 ರಿಂದ 90 ವಿದ್ಯಾರ್ಥಿಗಳು ಚಿಡಗುಪ್ಪ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತರಗತಿಗೆ ಅನುಕೂಲವಾಗುವಂಥೆ ಬಸ್ ಓಡಿಸಬೇಕು. ಕೆರೊಳ್ಳಿ ಭಂಟನಳ್ಳಿ ಗಡಿಕೇಶ್ವಾರ ನಿಡಗುಂದಾ ಮಾರ್ಗವಾಗಿ ಬರುವ ಬಸ್ಸುಗಳು ಶಾಲಾ-ಕಾಲೇಜುಗಳು ತರಗತಿಗೆ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.

ಸುಲೇಪೇಟ ಗ್ರಾಮದಲ್ಲಿರುವ MSIL ಹಾಗೂ ಇನ್ನೂಳಿದ ಎರಡು ವೈನ್ ಶಾಪ್ ಅಂಗಡಿಗಳಲ್ಲಿ ಗ್ರಾಹಕರಿಗೆ ಪಾರ್ಸಲ್ ಕೊಡಬೇಕೆಂಬ ನಿಯಮವಿದ್ದರುಕೂಡ ನಿಯಮ ಉಲ್ಲಂಘಸಿ ಕುಳಿತು ಕುಡಿಯಲು ಅವಕಾಶ ಮಾಡಿಕೊಟ್ಟ ವೈನಶಾಪಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಚಿಂಚೋಳಿ ಅಬಕಾರಿ ಸರ್ಕಲ್ ಇನ್ಸಪೇಕ್ಟರ್ ಮೇಲೆ ಸೂಕ್ತ ಕ್ರಮ ಜರುಗಿಸುಬೇಕು ಎಂದು ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಾಕರ್ತರು ಆಗ್ರಹಿಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here