ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭ

0
14

ಕಲಬುರಗಿ: ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ತೀರ್ಮಾನದಂತೆ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತÀ ಖರೀದಿಸಲು ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒಟ್ಟು 08 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಭತ್ತ ಸಾಮಾನ್ಯ ಪ್ರತಿ ಕ್ವಿಂ.ಗೆ 1940 ರೂ. ದರ ಹಾಗೂ ಭತ್ತ ಗ್ರೇಡ್-ಎ ದರ ಪ್ರತಿ ಕ್ವಿಂ.ಗೆ 1960 ರೂ.ಗಳನ್ನು ನಿಗದಿಪಡಿಸಲಾಗಿದ್ದು, ರೈತರು ಬೆಳೆದ ಭತ್ತವನ್ನು ಮಾರಾಟ ಮಾಡಲು ತಮ್ಮ ಸಮೀಪದ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ತಾಲೂಕುವಾರು ಖರೀದಿ ಕೇಂದ್ರಗಳ ಹಾಗೂ ಖರೀದಿ ಅಧಿಕಾರಿಗಳ ಹೆಸರು, ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.

Contact Your\'s Advertisement; 9902492681

ಚಿತ್ತಾಪೂರ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸನ್ನತಿ ಮತ್ತು ಕೆಲ್ಲೂರು ಹಾಗೂ ಖರೀದಿ ಅಧಿಕಾರಿಗಳಾದ ಎಸ್.ಬಿ.ಬಿರಾದಾರ ಇವರ ಮೊಬೈಲ್ ಸಂಖ್ಯೆ 9448880409 ಇರುತ್ತದೆ.

ಸೇಡಂ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಧೋಳ, ಕೊಲಕುಂದಾ, ಮದನಾ, ನಾಡೆಪಲ್ಲಿ ಹಾಗೂ ಖರೀದಿ ಅಧಿಕಾರಿಗಳಾದ ಮಲ್ಲಪ್ಪ ತಾಳಿಕೋಟಿ ಇವರ ಮೊಬೈಲ್ ಸಂಖ್ಯೆ 9743299026 ಇರುತ್ತದೆ.

ಜೇವರ್ಗಿ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಳಬಟ್ಟಿ ಹಾಗೂ ಖರೀದಿ ಅಧಿಕಾರಿಗಳಾದ ಸಿದ್ದಮ್ಮ ಇವರ ಮೊಬೈಲ್ ಸಂಖ್ಯೆ 9740621479 ಇರುತ್ತದೆ.

ಯಡ್ರಾಮಿ ತಾಲೂಕು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಳ್ಳಿ ಹಾಗೂ ಖರೀದಿ ಅಧಿಕಾರಿಗಳಾದ ಸಿದ್ದಮ್ಮ ಇವರ ಮೊಬೈಲ್ ಸಂಖ್ಯೆ 9740621479 ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರನ್ನು (ಮೊಬೈಲ್ ಸಂಖ್ಯೆ 9448496023) ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here