ಶಹಾಬಾದ: ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹ

0
90

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಗುರುವಾರ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಬಸ್ ನಿಲ್ದಾಣದ ನಿಯಂತ್ರಕರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ಹೊನಗುಂಟ ಗ್ರಾಮದಿಂದ ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಾiನ್ಯ ಜನರು ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಬರುವುದು ಶಹಾಬಾದ ನಗರಕ್ಕೆ ಬರುತ್ತಾರೆ. ಲಾಕ್ ಡೌನ್ ಮುಗಿದ ನಂತರ ಶಾಲಾ-ಕಾಲೇಜುಗಳು ಪ್ರಾರಂಭವಾಗಿರುವುದು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇದೆ.

Contact Your\'s Advertisement; 9902492681

ಇಂತಹ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರದ ಬಹುತೇಕ ವಿದ್ಯಾರ್ಥಿಗಳು ಬಸ್ ಮೂಲಕ ಪ್ರಯಣಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಸರಿಯಾಗಿ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಬೇಕಾದರೇ ಅವರಿಗೆ ಸಾರಿಗೆ ಅನುಕೂಲ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮದ ವಿದ್ಯಾರ್ಥಿಗಳು ಅಲ್ಲಿಯೇ ಪ್ರೌಢ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಜೇವರ್ಗಿ,ಚಿತ್ತಾಪೂರ, ಕಲಬುರಗಿ ನಗರಕ್ಕೆ ಹಲವಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರ ಬಳಿ ಬಸ್ ಪಾಸ್ ಇದ್ದರು ಕೂಡ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಅವರು ಖಾಸಗಿ ವಾಹನಗಳಿಗೆ ದಿನಾಲೂ ಹಣ ಕೊಟ್ಟು ಬರುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗುತ್ತಿದೆಯಲ್ಲದೇ ವಿದ್ಯಾಭ್ಯಾಸಕ್ಕೂ ಹೊಡೆತ ಬೀಳುತ್ತಿದೆ.

ಹೊನಗಂಟಾ ಗ್ರಾಮದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊನಗುಂಟದಿಂದ ಶಹಾಬಾದ ಗೆ ಬೆಳಗ್ಗೆ ೬:೦೦ ಕ್ಕೆ, ೯:೦೦ಕ್ಕೆ ಹಾಗೂ ಶಹಾಬಾದಿಂದ ಹೊನಗುಂಟಕ್ಕೆ ಮಧ್ಯಾನ ೧:೩೦ಕ್ಕೆ, ೪:೩೦ ಕ್ಕೆ ಬಸ್ ಸೌಲಭ್ಯ ಕಲ್ಪಿಸಲು ನಗರದ ಬಸ್ ನಿಲ್ದಾಣದ ನಿಯಂತ್ರಕರಿಗೆ ಮನವಿ ಪತ್ರ ಸಲ್ಲಿಸಿದರು. ರಾಘವೇಂದ್ರ ಗುಡೂರ್, ಶರಣಬಸಪ್ಪ.ಎಮ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here