ಕಲಬುರಗಿ: ಹೀರಾಪುರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ, ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಪ್ರಗತಿ ಅಭಿವೃದ್ಧಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಬೃಹತ್ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರಕ್ಕೆ ಮಹಾನಗರ ಪಾಲಿಕೆ ಸದಸ್ಯ ಅಲಿಮೋದ್ದಿನ್ ಪಟೇಲ್ ಅವರು ಚಾಲನೆ ನೀಡಿದರು.
ಈ ಶಿಬಿರದಲ್ಲಿ ವೈದ್ಯಾಧಿಕಾರಿಗಳಾದ ಡಾ. ಅನಿತಾ ಜಾಧವ, ಕ.ಸಾ.ಪ ತಾಲೂಕು ನಿಕಟ ಪೂರ್ವ ಉಪಾಧ್ಯಕ್ಷರಾದ ಭೀಮಾಶಂಕರ. ಎನ್.ಯಳಮೇಲಿ, ಬಡಾವಣೆಯ ಹಿರಿಯ ಮುಖಂಡರಾದ ಪ್ರಕಾಶ ಮಾಲಿಪಾಟೀಲ್, ಶಿವಯೋಗಿ ದೊಡ್ಮನಿ, ಶಿವಕುಮಾರ ಮದ್ರಿ, ಪ್ರಕಾಶ ಔರಾದಕರ, ಬಸವರಾಜ ಸಾಮ್ರಾಟ್, ರಾಣೋಜಿ ಡಿಪ್ಟಿ, ಜಗನ್ನಾಥ ದಿಕ್ಸಂಗಿ, ಕಾರ್ಯಕ್ರಮ ಸಂಯೋಜಕ ಅಲ್ಲಮಪ್ರಭು ನಿಂಬರ್ಗಾ, ನವರತ್ನ ನಿಂಬಾಳ್ಕರ, ಸಂತೋಷ ದಾಡಿ, ಬ್ರಹ್ಮಾನಂದ ಮಿಂಚಾ, ಆನಂದ ಹತ್ತರಗಾ, ಭೀಮಾಶಂಕರ ದುದನಿ, ಪಂಡಿತ ಶರ್ಮಾ, ರಾಹುಲ ಹದನೂರ, ಶಶಿಧರ ಡಿಪ್ಟಿ, ಹಣಮಂತ ನಿಂಬರ್ಗಾ, ಜಟ್ಟಪ್ಪ ನೂಲಾ, ಕೀರಣ ತೇಲ್ಲೂರ, ಮಹೇಶ ತೇಲ್ಲೂರ, ಜಗನ್ನಾಥ ಪೂಜಾರಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಾದ ಬಸವರಾಜ, ಜಾನ್ಸನ ಮುಂತಾದವರು ಹಾಜರಿದ್ದರು.
ಈ ಶಿಬಿರದಲ್ಲಿ ಸುಮಾರು ೨೦೦ಕ್ಕು ಹೆಚ್ಚು ಜನರು ಕಣ್ಣುಗಳ ತಪಾಸಣೆಯನ್ನು ಮಾಡಿಕೊಂಡರು ಇದರಲ್ಲಿ ೧೦೦ಕ್ಕು ಹೆಚ್ಚು ಜನರು ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.