ಕರ್ನಾಟಕ ಪೊಲೀಸ್ ಮಹಾ ಸಂಘದ ಕಲಬುರಗಿ ಜಿಲ್ಲೆಯ ಪದಾಧಿಕಾರಿಗಳ ನೇಮಕ

0
16

ಕಲಬುರಗಿ: ಕರ್ನಾಟಕ ಪೊಲೀಸ್ ಮಹಾ ಸಂಘ ರಿ ಕಲ್ಬುರ್ಗಿ ವತಿಯಿಂದ ಸಂಸ್ಥಾಪಕರಾದ ವಿ.ಶಶಿಧರ್ ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ರವಿ.ಎನ್ ದೇಗಾಂವ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕರ್ನಾಟಕ ಪೊಲೀಸ್ ಮಹಾ ಸಂಘ ಜಿಲ್ಲಾ ವರದಿಗಾರರ ಶಿವಕುಮಾರ ಬಿ. ಬಿರಾದರ ನಗರದ ಜಿಲ್ಲಾ ಕಾರ್ಯಾಲಯದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಕರ್ನಾಟಕ ಪೊಲೀಸ್ ಸುಧಾರಣೆಗಾಗಿ ಕಾನೂನು ಸುವ್ಯವಸ್ಥೆ ಶಿಸ್ತು ದೇಶಪ್ರೇಮದ ಬದಲಿಗೆ ಸ್ವಾರ್ಥ ಸ್ವಜನ ಪಕ್ಷಪಾತದ ಸಂಘರ್ಷದ ವಿರುದ್ಧ ಹೋರಾಡಲು ಕಲಬುರಗಿ ಜಿಲ್ಲೆಯ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.

ದಿಲೀಪ ಕಿರಸಾವಳಗಿ, ಪ್ರಶಾಂತ ಮಠಪತಿ (ಜಿಲ್ಲಾ ಉಪಾಧ್ಯಕ್ಷರು), ಸಂದೀಪ ಭರಣಿ (ಜಿಲ್ಲಾ ಕಾರ್ಯಧ್ಯಕ್ಷ), ನಿರ್ಮಲ ಎಸ್ ಬರಗಾಲಿ (ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ), ಋಷಿ ಬೆನಕನಹಳ್ಳಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಶ್ರೀಕಾಂತ ರೆಡ್ಡಿ (ನಗರ ಅಧ್ಯಕ್ಷ), ಮಹಾಂತೇಶ ಹರವಾಳ (ಯುವ ಘಟಕದ ಉಪಾಧ್ಯಕ್ಷ), ಆಕಾಶ ತಳವಾರ (ಜಿಲ್ಲಾ ಸಂಘಟನಾ ಕಾರ್ಯದರ್ಶಿ), ಶ್ರೀಶೈಲ ಕನ್ನಡಗಿ (ಯುವ ಘಟಕದ ಅಧ್ಯಕ್ಷ), ಸಂತೋಷ ಪಾಟೀಲ್ (ಜಿಲ್ಲಾ ಕಾರ್ಯಾಧ್ಯಕ್ಷ), ಪ್ರಶಾಂತ ದೇಗಾಂವ (ಉತ್ತರ ವಲಯದ ಅಧ್ಯಕ್ಷ), ಅರುಣ ದಮ್ಮೂರ್ಕರ (ಕಮಲಾಪುರ ತಾಲೂಕ ಅಧ್ಯಕ್ಷ), ವಿವೇಕಾನಂದ ನಾಯಕ (ಚಿತಾಪುರ ತಾಲೂಕ ಅಧ್ಯಕ್ಷ), ಶಿವಕುಮಾರ ಎನ್. ಬಿರಾದರ (ಸದಸ್ಯ) ಶಿವಕುಮಾರ ಬಿ ಬಿರಾದಾರ (ಕರ್ನಾಟಕ ಪೊಲೀಸ್ ಮಹಾ ಸಂಘ ಜಿಲ್ಲಾ ವರದಿಗಾರರು) ನೇಮಕ ಮಾಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಎಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡುವುದರ ಜೊತೆಗೆ ಹಾಗೂ ಕರ್ನಾಟಕ ಪೊಲೀಸ್ ಮಹಾ ಸಂಘದ ಗುರುತಿನ ಚೀಟಿಯನ್ನು ಜಿಲ್ಲಾಧ್ಯಕ್ಷರಾದ ರವಿ.ಎನ್ ದೇಗಾಂವ ಅವರು ವಿತರಿಸಿ ಮಾತನಾಡುತ್ತಾ ಎಲ್ಲಾ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸದಸ್ಯರ ಸಂಖ್ಯಾಬಲ ದೊಂದಿಗೆ ಸಂಘಟನೆಯನ್ನು ಮುಂದುವರಿಸಿಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಸಂಘಟನೆಯನ್ನು ಬಲಪಡಿಸುವುದರ ದೊಂದಿಗೆ ಒಳ್ಳೆಯ ರೀತಿಯಲ್ಲಿ ಹೋಗಬೇಕು.

ಮತ್ತು ಕರ್ನಾಟಕ ಪೊಲೀಸ್ ಸುಧಾರಣೆಗಾಗಿ ಕಾನೂನು ಸುವ್ಯವಸ್ಥೆ ಶಿಸ್ತು ದೇಶಪ್ರೇಮದ ಬದಲಿಗೆ ಸ್ವಾರ್ಥ ಸ್ವಜನ ಪಕ್ಷಪಾತ ಸಂಘರ್ಷದ ವಾತಾವರಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಎಲ್ಲರಿಗೂ ಹೆಚ್ಚಿನ ರೀತಿಯಲ್ಲಿ ಹತ್ತಿ ಉತ್ಸಾಹ ದಿಂದ ಸಂಘಟನೆಯನ್ನು ಬಲಪಡಿಸುವುದು. ಇಂತಹ ಸಂದಿಗ್ಧ ಸಮಯದಲ್ಲಿ ದೇಶಪ್ರೇಮ ತ್ಯಾಗ ಬಲಿದಾನಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಕರ್ನಾಟಕ ಪೊಲೀಸ್ ಮಹಾ ಸಂಘ ವನ್ನು ಹೊಸ ಕನಸು ಮತ್ತು ಅಸೀಮ ಆತ್ಮವಿಶ್ವಾಸದೊಂದಿಗೆ ಈ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಸಮಾಜದಲ್ಲಿನ ಅನಿಷ್ಟಗಳನ್ನು ತೊಲಗಿಸಿ ಬಲಿಷ್ಠ ಭಾರತ ನಿರ್ಮಾಣದೆಡೆಗೆ ನಮ್ಮೆಲ್ಲರ ಲಕ್ಷ ಹರಿಯಲಿದೆ.

ಅದಲ್ಲದೆ ಉದ್ದೇಶಿತ ಸಂಘಟನೆಗೆ ಗ್ರಾಮ ಹೋಬಳಿ ತಾಲ್ಲೂಕು ಜಿಲ್ಲಾ ಕೇಂದ್ರಗಳು ಹೀಗೆ ರಾಜ್ಯದ ದಶಕಗಳಿಂದ ಜನತೆ ತಮ್ಮ ಸದಸ್ಯತ್ವವನ್ನು ಪಡೆಯಬಹುದಾಗಿದೆ ಹಾಗೂ ಸಂಘಟನೆಯ ಮುಂಚೂಣಿಯಲ್ಲಿ ನಿಲ್ಲಬಹುದಾಗಿದೆ ಹಾಗೂ ಸರ್ಕಾರಿ ಸೌಲತ್ತು ಮತ್ತು ಸ್ಥಾನಮಾನಗಳು ಕೇವಲ ಉಳ್ಳವರ ಪಾಲಾಗದೆ ಆರ್ಯ ಮತ್ತು ಸಮರ್ಥ ಬಡಜನತೆಗು ತಲುಪುವಂತಾಗಬೇಕೆಂಬ ಹಂಬಲದೊಂದಿಗೆ ಆ ದಿಸೆಯಲ್ಲಿ ನಮ್ಮ ಹೋರಾಟ ಸಾಗಲಿದೆ ಎಂದು ದೇಗಾಂವ ಅವರು ಹೇಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here