ಭಾರತ ದೇಶದ ೨೦ ನೇ ಶತಮಾನದಲ್ಲಿ ನಡೆದ ಎರಡು ಮಹಾನ್ ಕ್ರಾಂತಿಗಳಲ್ಲಿ ಸಂವಿಧಾನ ಪಿತಾಮಹ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆಸಿದ ಕ್ರಾಂತಿಯು ಅತ್ಯಂತ ಮಹತ್ವದ ಕ್ರಾಂತಿ.
ಅಂದು (೧೯೧೫) ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕಾಗಿ ಮಹಾತ್ಮ ಗಾಂಧಿ ಜೀ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದರೆ, ದೇಶದಲ್ಲಿ ಸಮಾನತೆಯ ಹಕ್ಕುಗಳಿಂದ ವಂಚಿತರಾಗಿದ್ದ ಬಡವರ, ಶೋಷಿತರ, ಅಸ್ಪೃಶ್ಯರ ಮತ್ತು ಮಹಿಳೆಯರ ಪರವಾಗಿ ಹೋರಾಡಲು ಉನ್ನತ ವ್ಯಾಸಂಗಕ್ಕಾಗಿ ಬಾಬಾಸಾಹೇಬ್ ಅಂಬೇಡ್ಕರ್ (೧೯೧೩) ಅವರು ವಿದೇಶಕ್ಕೆ ತೆರಳುತ್ತಾರೆ.
ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ತಾಯಿ ನಾಡಿಗೆ ಹಿಂತಿರುಗುವ ಹೊತ್ತಿಗೆ ದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಗಳು ಆರಂಭವಾಗಿ ದೇಶ ಸ್ವಾತಂತ್ರ್ಯಕ್ಕಾಗಿ ಎದುರುನೋಡುತ್ತಿದ್ದರೆ, ದೇಶದಲ್ಲಿನ ಶೋಷಿತವರ್ಗಗಳು, ಮಹಿಳೆಯರು ಸಮಾನತೆಯ ಸ್ವಾತಂತ್ರ್ಯಕ್ಕಾಗಿ ಎದುರುನೋಡುತ್ತಿದ್ದ ಕಾಲದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿಕಾರಿ ನಾಯಕ ಕೆಳ ಸಮುದಾಯಗಳ ಗಟ್ಟಿಯಾಗಿ ನಿಂತು ಹೋರಾಟಕ್ಕೆ ಧುಮುಕುತ್ತಾರೆ.
ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕೆ ಬಂದ ಬ್ರಿಟಿಷ್ ಆಯೋಗಗಳ ಎದುರು ಅಂಬೇಡ್ಕರ್ ರವರು ಈ ಎಲ್ಲಾ ವರ್ಗಗಳ ಜನರ ಸಮಾನತೆ ಹಕ್ಕುಗಳಿಗಾಗಿ ಸಮರ್ಥವಾದ ವಾದವನ್ನು ಮಂಡಿಸುತ್ತಾರೆ. ಭಾರತ ಸ್ವಾತಂತ್ರ್ಯದ ನಂತರ ಪಂಡಿತ್ ಜವಾಹರ್ ಲಾಲ್ ನೆಹರು ಅವರ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿ ಸರ್ಕಾರದಲ್ಲಿ ಸಚಿವರಾಗಿ ಭಾರತದಲ್ಲಿನ ದುಡಿಯುವ ವರ್ಗಗಳ ಪರವಾಗಿ ಅನೇಕ ಕಾನೂನುಗಳನ್ನು ತಂದರು.
ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಸತತ ಎರಡು ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿನ ಎಲ್ಲ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಹೊಸ ಸಂವಿಧಾನವನ್ನು ನೀಡುವ ಸಂದರ್ಭದಲ್ಲಿ ಎಲ್ಲ ವರ್ಗದ ಜನರಿಗೆ ಸಂವಿಧಾನದ ಮುಖಾಂತರ ಸರಿಸಮಾನವಾದ ನ್ಯಾಯ ಒದಗಿಸಿದ ಮಹಾನ್ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್.
1951 ರಲ್ಲಿ ಮಹಿಳೆಯರಿಗೆ ಸರಿಸಮಾನವಾದ ಹಕ್ಕನ್ನು ಒದಗಿಸುವ ಹಿಂದೂ ಕೋಡ್ ಬಿಲ್ ಜಾರಿಗೆ ತರಲು ಲೋಕಸಭೆಯಲ್ಲಿ ಏಕಾಂಗಿ ಹೋರಾಟ ನಡೆಸಿದವರು ಆದರೆ ಹಿಂದೂ ಕೋಡ್ ಬಿಲ್ ಗೆ ಅನೇಕ ಅನೇಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ಬಂದರು.
1952 ಮತ್ತು 54 ರಲ್ಲಿ ಲೋಕಸಭಾ ಉಪ ಚುನಾವಣೆಗೆ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ ಅವರನ್ನು ಅಂದಿನ ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಹತ್ತಿಕ್ಕುವ ಸಲುವಾಗಿ ಸ್ವತಃ ನೆಹರು ಅವರ ಪ್ರಚಾರ ಮಾಡಿ ಸೋಲಿಸುತ್ತಾರೆ, ನಂತರ ಇತರ ಪಕ್ಷಗಳು ಸೇರಿ ಅವರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡುತ್ತಾರೆ.
ಈ ಮೊದಲೇ ಅಂಬೇಡ್ಕರ್ ರವರು ಹೇಳಿದಂತೆ 14ನೇ ಅಕ್ಟೋಬರ್ 1956 ರಲ್ಲಿ ತಮ್ಮ ಲಕ್ಷಾಂತರ ಅನ್ವಯಗಳೊಂದಿಗೆ ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಬೌದ್ಧ ಧರ್ಮದ ಪ್ರಚಾರ ಕಾರ್ಯಗಳಲ್ಲಿ ತೊಡಗಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ತಮ್ಮ ಅತ್ಯಂತ ಮೇರು ಕೃತಿ ಬುದ್ಧ ಮತ್ತು ಆತನ ಧಮ್ಮ ಕೊನೆಯ ಕೆಲಸ ಮುಗಿಸಿ ದೆಹಲಿಯ ತಮ್ಮ ನಿವಾಸದಲ್ಲಿ ಡಿಸೆಂಬರ್ 6, 1956 ರಲ್ಲಿ ಮಹಾಪರಿನಿರ್ವಾಣ ವನ್ನು ಹೊಂದಿ ಇಂದಿಗೆ ೬೫ ವರ್ಷಗಳು ಸಂದಿವೆ ಅವರ ಕೋಟ್ಯಾಂತರ ಅನ್ವಯಗಳ ಆಸೆಯಂತೆ ಅವರು ಬದುಕಿದ್ದಾಗ ಅವರಿಗೆ ಹತ್ತಿರವಾದ ಪಂಚ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಪಡಿಸಿ ದೇಶಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ಪ್ರೇರಣೆಯ ಪ್ರತೀಕವಾದ ಪಂಚ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಅವರಿಗೆ ನಿಜವಾದ ಗೌರವ ಸಮರ್ಪಿಸಿದ್ದಾರೆ.