ತೊರ‍್ನಹಳ್ಳಿ: ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಅಂಗವಾಗಿ ತೊರ‍್ನಹಳ್ಳಿ ಗ್ರಾಮದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವೇ ಕಂಡ ಅತ್ಯಂತ ಮೇಧಾವಿ ವ್ಯಕ್ತಿಯಾಗಿದ್ದು, ಅವರ ಪರಿಶ್ರಮದ ಫಲವಾಗಿ ಈ ರಾಷ್ಟ್ರದ ಸುವ್ಯವಸ್ಥಿತ ಆಡಳಿತಕ್ಕಾಗಿ ಸಂವಿಧಾನ ರೂಪಿತಗೊಂಡಿದೆ. ಎಲ್ಲಾ ಸಮುದಾಯಗಳಿಗೂ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಕಾರ್ಯನಿರ್ವಹಿಸಿದರು, ನಾವೆಲ್ಲರೂ ಅವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.
ಮಹಾಮಾನವತಾವಾದಿ ಭಾರತ ಕಂಡ ಅದ್ವೀತಿಯ ನಾಯಕ, ಅಪ್ರತಿಮ ಹೋರಾಟಗಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ನವ ಭಾರತ ಕಂಡ ಅಗ್ರಗಣ್ಯ ನಾಯಕ, ಭಾರತರತ್ನ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್ ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ನಾವು ಅನುಸರಿಸಬೇಕು ಎಂದು ಆಂಜಿ ಕನ್ನಡಿಗ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುನಿಯಪ್ಪ, ಸದಸ್ಯರಾದ ತಿಮ್ಮರಾಯಪ್ಪ ,ಸಿ.ವಿ.ವೆಂಕಟರಮಣಪ್ಪ, ಬಿ.ಎಮ್.ಎನ್. ನಾಗರಾಜ್, ನಾಗರತ್ನಮ್ಮ ಚಿಕ್ಕಣ್ಣ , ಬಿಲ್ ಕಲೆಕ್ಟರ್ ಎಂ.ನಾಗರಾಜ, ಆನಂದ್, ಗಣೇಶ್ (ವಕೀಲರು) ನಾರಾಯಣಸ್ವಾಮಿ, ವೆಂಕಟರಮಣಪ್ಪ, ಆಂಜಿನಪ್ಪ, ರಾಜಪ್ಪ, ಕಣ್ಣಪ್ಪ, ವೆಂಕಟೇಶ್, ರಾಮಾಂಜಿನಪ್ಪ, ವೆಂಕಟೇಶಮ್ಮ, ರತ್ನಮ್ಮ, ಪವಿತ್ರ, ಚಂದ್ರಮ್ಮ , ಮೀನಾಕ್ಷಿ , ಮುನಿಲಕ್ಷಮ್ಮ ಹಾಗೂ ಊರಿನ ಹಿರಿಯರು, ಗ್ರಾಮಸ್ಥರು ಇದ್ದರು.