ಡಾ ಅಂಬೇಡ್ಕರರ ವಿಚಾರಧಾರೆ ಯುವಕರಿಗೆ ಅರ್ಥೈಸಿ: ತೇಗಲತಿಪ್ಪಿ

1
435

ಕಲಬುರಗಿ: ಸಮಾಜದಲ್ಲಿ ಇನ್ನು ಜೀವಂತವಾಗಿರುವ ಜಾತೀಯತೆ, ಮೂಡ ನಂಬಿಕೆಗಳನ್ನು ಬೇರು ಸಮೇತ ಕಿತ್ತು ಹಾಕಬೇಕಾದರೆ ಡಾ ಅಂಬೇಡ್ಕರವರ ವಿಚಾರಧಾರೆಗಳು ಇಂದಿನ ಯುವಕರಿಗೆ ತಲುಪಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯ ಪಟ್ಟರು.

ನಗರದ ಕಾಂತಾ ಕಾಲೋನಿಯ ಶ್ರಾವಸ್ತಿ ನಗರದಲ್ಲಿ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರವರ ಮಹಾಪರಿ ನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬುದ್ಧ ಬಸವ ಡಾ ಅಂಬೇಡ್ಕರರು ಎಲ್ಲಾ ಸಮುದಾಯಗಳಿಗೂ ಆದರ್ಶ ವ್ಯಕ್ತಿಗಳು. ಅವರೆಲ್ಲ ಆದರ್ಶಗಳು ಸಂವಿಧಾನದಲ್ಲಿ ಸೇರಿಸಿದ್ದಾರೆ. ಸಮ ಸಮಾಜವನ್ನು ನಿರ್ಮಾಣ ಮಾಡಲು ಸಂವಿಧಾನದ ಮೌಲ್ಯಗಳನ್ನು ಯುವ ಪೀಳಿಗೆಗೆ ಅರ್ಥೈಸಿ ಕೊಡಬೇಕು. ಈ ದಿಸೆಯಲ್ಲಿ ಡಾ ಅಂಬೇಡ್ಕರವರ ಕುರಿತಾದ ಕಾರ್ಯಕ್ರಮಗಳು ಬರುಲಿರುವ ದಿನಗಳಲ್ಲಿ ಕಸಾಪ ವತಿಯಿಂದ ಆಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

ಸಾಹಿತ್ಯ ಕಲಾವಿದ ಎಂ ಎನ್ ಸುಗಂಧಿ ಅವರು ಬುದ್ಧ ವಂದನೆ ಕಾರ್ಯಕ್ರಮ ನಡೆಸಿ ಕೊಟ್ಟರು. ನಿವೃತ್ತ ಮುಖ್ಯಗುರು ಗುರುಶಾಂತಪ್ಪ ಜೋಗಾ ಅವರು ಅಧ್ಯಕ್ಷತೆ ವಹಿಸಿದರು. ಸಾಹಿತಿ ಧರ್ಮಣ್ಣ ಎಚ್ ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಕೇದಾರನಾಥ ಕುಲಕರ್ಣಿ ಅವರು ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಕ್ಷಕ ಮಹಾದೇವ ಕೊಥಲಿ, ಬಡಾವಣೆಯ ಮುಖಂಡರಾದ ಲಕ್ಮಣ ಮದರಕಿ, ವಿಠ್ಠಲ ಅರ್ಜುಣಗಿ, ಪೀರಪ್ಪ ಬಂದರವಾಡ, ರಾಮಣ್ಣ ನಾವದಗಿ, ದಶರಥ ಭರಣಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ನವ್ಯ, ವಿಜಯಲಕ್ಮೀ ಹಾಗೂ ಅರ್ಪಿತಾ ಶಾಲಾ ಮಕ್ಕಳಿಂದ ಭೀಮ ಗೀತೆಗಳು ಜರುಗಿದವು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here