ಸುರಪುರ: ಡಿಸೆಂಬರ್ ೬ರ ಸಂವಿಧಾನ ಶಿಲ್ಪಿ ಡಾ:ಬಾಬ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಸುರಪುರ ತಾಲೂಕು ಆಡಳಿತದಿಂದ ನಗರದ ಡಾ:ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಸ್ಮರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರರ ಮೂರ್ತಿಗೆ ತಹಸೀಲ್ದಾರ್ ಸುಬ್ಬಣ ಜಮಖಂಡಿ ಹಾಗು ಇತರೆ ಅಧಿಕಾರಿಗಳು ಮತ್ತು ಮುಖಂಡರು ಮಾಲಾರ್ಪಣೆ ಮಾಡಿದರು.ನಂತರ ಮೇಣದ ಬತ್ತಿ ಬೆಳಗಿ ೨ ನಿಮಿಷಗಳ ಮೌನಾಚರಣೆಯೊಂದಿಗೆ ಡಾ:ಬಿ.ಆರ್.ಅಂಬೇಡ್ಕರರಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ,ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ,ಮಾಳಪ್ಪ ಕಿರದಹಳ್ಳಿ,ರಮೇಶ ಅರಕೇರಿ,ಶೇಖರ ಜೀವಣಗಿ,ರಾಜು ಕಟ್ಟಿಮನಿ,ಮಲ್ಲು ಕೆಸಿಪಿ,ಶರಣು ತಳವಾರಗೇರಾ, ಮಹಾದೇವಪ್ಪ ಬೊಮ್ಮನಹಳ್ಳಿ,ಚಾಣಕ್ಕನವರ್,ಶಿವುಗೌಡ ಬಿರಾದಾರ್,ರಮೇಶ ಮುಂಡರಗಿ,ಸುನೀಲಕುಮಾರ ಪಂಚಾಂಗಮಠ,ಸೀತಾರಾಮ ನಾಯಕ ಸೇರಿದಂತೆ ಅನೇಕರಿದ್ದರು.