ಶಹಾಬಾದ: ಅನಾದಿ ಕಾಲದಿಂದಲೂ ಪುರೋಹಿತಶಾಹಿ ವರ್ಗದವರು ದಲಿತರಿಗೆ ಮೇಲೆ ಇಲ್ಲಸಲ್ಲದ ಮೂಢ ಆಚರಣೆಗಳ ಮೂಲಕ ಶೋಷಣೆ ಮಾಡುತ್ತ ಬಂದಿದೆ. ಇದನ್ನು ಮನಗಂಡು ಈ ಮೂಢಾಚರಣೆಗಳ ವಿರುದ್ಧ ನಿಲ್ಲುವ ಎದೆಗಾರಿಕೆಯನ್ನು ನಾವು ತೋರಬೇಕಾಗಿದೆ ಎಂದು ಬಿಜೆಪಿ ಎಸ್.ಸಿ.ಮೊರ್ಚಾ ಅಧ್ಯಕ್ಷ ಸಂಜಯ ವಿಟಕರ್ ಹೇಳಿದರು.
ಅವರು ಸೋಮವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಎಸ್.ಸಿ.ಮೊರ್ಚಾ ವತಿಯಿಂದ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿಗೂ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದದೆ ಇರುವುದಕ್ಕೆ ಈ ಪುರೋಹಿಶಾಹಿ ವ್ಯವಸ್ಥೆ ಕಾರಣ. ಆದ್ದರಿಂದ ಮೂಢನಂಬಿಕೆಗಳನ್ನು ಬಿಟ್ಟು ಡಾ|| ಬಿ.ಆರ್.ಅಂಬೇಡ್ಕರ್‌ರವರು ಕಂಡ ಕನಸನ್ನು ನಾವು ಮತ್ತೆ ನಾವು ನನಸು ಮಾಡುವತ್ತ ಸಾಗೋಣ ಎಂದು ಹೇಳಿದರು.
ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿ, ರಾಷ್ಟ್ಟ್ರದ ಸರ್ವಜನಾಂಗದಲ್ಲಿ ಸಮಾನತೆ ಬಯಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಸಂವಿಧಾನ ರಚಿಸಿದ ಡಾ|| ಬಿ.ಆರ್.ಅಂಬೇಡ್ಕರ್‌ರವರ ತತ್ವ ಆದರ್ಶಗಳನ್ನು ಜನಸಾಮಾನ್ಯರು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ ಮಾತನಾಡಿ, ಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲಾ ವರ್ಗದವರ ಸ್ವತ್ತಾಗಿದ್ದು, ಅದನ್ನು ಎಲ್ಲರೂ ಸಮಾನವಾಗಿ ಪಡೆದುಕೊಂಡಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಎಲ್ಲಾ ಸಮುದಾಯದಲ್ಲಿ ಸಾಮರಸ್ಯ, ಸೌಹಾರ್ದತೆ ಮೂಡುತ್ತದೆ ಎಂದರು.
ಎಸ್.ಸಿ.ಮೊರ್ಚಾ ಉಪಾಧ್ಯಕ್ಷರಾದ ಉಮೇಶ ಪೊಚೆಟ್ಟಿ, ಸಂತೋ? ಹುಲಿ,ಬಸವರಾಜ ಬಿರಾದಾರ, ಯಲ್ಲಪ್ಪ ದಂಡಗುಲಕರ, ಅಂಬಣ್ಣ ಕುನ್ನೂರ, ದತ್ತಾತ್ರೇಯ ಘಂಟಿ, ಶ್ರೀನಿವಾಸ ನೆದಲಗಿ, ಮೋಹನ ಘಂಟ್ಲಿ, ಮನೋಹರ ಮೇತ್ರೆ, ಅನೀಲದತ್ತ ನಿಕ್ಕಮ ಮತ್ತಿತರರು ಇದ್ದರು.