ಮಕ್ಕಳಿಗೆ ಮೊಟ್ಟೆ ಕೊಡಲು ವಿರೋಧಿಸುವುದು ಜೀವ-ವಿಜ್ಞಾನಕ್ಕೆ ವಿರೋಧಿಗಳು: ಶಿವಾನಂದ ಆರ್ ಕಿಳ್ಳಿ.

0
15

ಕಲಬುರಗಿ: ಹೈದ್ರಾಬಾದ್ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 01ನೆಯ ತರಗತಿಯಿಂದ 08 ತರಗತಿವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಸರ್ಕಾರವು ಇಂದಿನಿಂದ ವಾರದಲ್ಲಿ 03 ದಿನ ಕೋಳಿ ಮೊಟ್ಟೆ ನೀಡುತ್ತಿದೆ.ಇದನ್ನು ಕೆಲವರು ವಿರೋಧಿಸುತ್ತಿದ್ದಾರೆ ಎಂದು ಗ್ರಾಮೀಣ ಯುವ ಕಾಂಗ್ರೆಸ್ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ಅಭಿಮತ ವ್ಯಕ್ತಪಡಿಸಿದ್ದಾರೆ.

“ಆಹಾರ ಅವರವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ನಮ್ಮಲ್ಲಿ ಸಸ್ಯಹಾರಿಗಳು ಇರುವಂತೆ ಮಾಂಸಹಾರಿಗಳೂ ಇದ್ದಾರೆ. ಒಬ್ಬರ ಆಹಾರ ಪದ್ಧತಿಯನ್ನು ಇನ್ನೊಬ್ಬರ ಮೇಲೆ ಯಾವುದೇ ಕಾರಣಕ್ಕೂ ಹೇರಬಾರದು! ಮೊಟ್ಟೆ ಬಯಸುವ ಮಕ್ಕಳಿಗೆ ಅದನ್ನು ಸರ್ಕಾರ ಕೊಡುವಲ್ಲಿ ತಪ್ಪಿಲ್ಲ. ಮೊಟ್ಟೆ ಬೇಡ ಎನ್ನುವವರಿಗೆ ಹಣ್ಣುಗಳನ್ನು ಕೊಡಬಹುದು. ಇದು ನಮ್ಮ ಸ್ಪಷ್ಟ ಅಭಿಪ್ರಾಯ/ನಿಲುವಾಗಿದೆ!” – ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

Contact Your\'s Advertisement; 9902492681

ಹಿಂದಿನ ಅಂಕಿ-ಅಂಶಗಳ ಪ್ರಕಾರ ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳ ಶೇಕಡಾವಾರು ಪ್ರಮಾಣ ಕರ್ನಾಟಕದಲ್ಲಿ ತೀವ್ರತರನಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 74ರಷ್ಟು ಅಪೌಷ್ಟಿಕತೆ ಇದೆ. ಕಲಬುರಗಿಯಲ್ಲಿ ಶೇ. 72.4, ಬಳ್ಳಾರಿಯಲ್ಲಿ ಶೇ. 72.3, ಕೊಪ್ಪಳದಲ್ಲಿ ಶೇ. 70.7, ರಾಯಚೂರಿನಲ್ಲಿ ಶೇ. 70.6, ಬೀದರ್‌ನಲ್ಲಿ ಶೇ. 69.1 ಮತ್ತು ವಿಜಯಪುರದಲ್ಲಿ ಶೇ 68 ರಷ್ಟು ಅಪೌಷ್ಟಿಕತೆ ವರದಿಯಾಗಿದೆ.

“ಕೇರಳ  ಮತ್ತು ತಮಿಳುನಾಡಿನಲ್ಲಿ ವಾರಕ್ಕೆ ಐದು ದಿನ ಮೊಟ್ಟೆ ಕೊಡುತ್ತಿದ್ದಾರೆ ಅಲ್ಲಿ ಮಕ್ಕಳ ಕುಪೋಷಣೆ ಇಡೀ ದೇಶದಲ್ಲಿ ಕನಿಷ್ಠ ಮಟ್ಟದಲ್ಲಿದೆ  ಕರ್ನಾಟಕದಲ್ಲಿ 2007-2008ರಲ್ಲಿ ಈ ಪ್ರಸ್ತಾಪ ಬಂದ ದಿನದಿಂದ ಈ ಕಾಟವನ್ನು ಸ್ವಾಮೀಜಿಗಳು ಕೊಡುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮಕ್ಕಳಲ್ಲಿ ಕುಪೋಷಣೆ ಶೇ. 38 ಇದೆ. ಹಿಂದುಳಿದ ಜಿಲ್ಲೆಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ವೈಜ್ಞಾನಿಕ ಕಾರಣದಿಂದ ಈ ಹಿಂದುಳಿದ ಜಿಲ್ಲೆಗಳಲ್ಲಿ ಮೊಟ್ಟೆಯನ್ನು ಕೊಡಲು ಸರ್ಕಾರ ಮುಂದಾಗಿದೆ. ಇದಕ್ಕೆ ವಿರೋಧ ಸಲ್ಲದು” ಎಂದರು.

“ಮಾಂಸಾಹಾರಕ್ಕೆ ಪರ್ಯಾಯ ಇಲ್ಲ. ಮಕ್ಕಳಿಗೆ ಬೇಕಾದಷ್ಟು ಪ್ರೋಟೀನ್‌‌ ಯಾವುದೇ ಸಸ್ಯಾಹಾರದಲ್ಲಿ ಸಿಗುವುದಿಲ್ಲ. ರಾಜ್ಯದಲ್ಲಿ ಶೇ. 80ರಿಂದ 88ರಷ್ಟು ಜನರು ಮಾಂಸಾಹಾರವನ್ನು ಸೇವಿಸುತ್ತಾರೆ. ಅಪೌಷ್ಟಿಕತೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಐದನೇ ಸ್ಥಾನ ಭಾರತದಲ್ಲಿ 33 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ, ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಅಪೌಷ್ಟಿಕ ಮಕ್ಕಳಿದ್ದಾರೆ” ಎಂದು ಪಿಟಿಐ ವರದಿ ಮಾಡಿತ್ತು. ಪಿಟಿಐ ಸುದ್ದಿಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಮಾಹಿತಿಯನ್ನು ಪಡೆದುಕೊಂಡಿತ್ತು.

ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವಾಲಯದ ಅಕ್ಟೋಬರ್‌ 14ರವರೆಗಿನ ಮಾಹಿತಿ ಪ್ರಕಾರ, ಅಪೌಷ್ಟಿಕತೆಯನ್ನು ಹೊಂದಿರುವ ಅರ್ಧದಷ್ಟು ಮಕ್ಕಳು ತೀವ್ರತರನಾದ ಅಪೌಷ್ಟಿಕತೆಯನ್ನು ಹೊಂದಿವೆ. 17,76,902 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇದ್ದು, 15,46,420 ಮಕ್ಕಳಲ್ಲಿ ಮಧ್ಯಮ ತೀವ್ರ ಅಪೌಷ್ಟಿಕತೆ ಇದೆ.

ವರದಿಯ ಪ್ರಕಾರ, 6,16,772 ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯ ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ 4,75,824, ಗುಜರಾತ್‌ನಲ್ಲಿ 3,20,465, ಆಂಧ್ರಪ್ರದೇಶದಲ್ಲಿ 2,67,228, ಕರ್ನಾಟಕದಲ್ಲಿ 2,49,463, ಉತ್ತರ ಪ್ರದೇಶದಲ್ಲಿ 1,86,640 ಅಪೌಷ್ಟಿಕ ಮಕ್ಕಳಿದ್ದಾರೆ.

ನವೆಂಬರ್ 2020 ಮತ್ತು ಈ ವರ್ಷದ ಅಕ್ಟೋಬರ್ 14ರ ನಡುವೆ ತೀವ್ರತರವಾದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯಲ್ಲಿ 91% ಏರಿಕೆಯಾಗಿದೆ. ನವೆಂಬರ್ 2020ರಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ 9,27,606 ಆಗಿತ್ತು. ಪಿಟಿಐ ವರದಿ ಪ್ರಕಾರ, ಎರಡು ವಿಧದಲ್ಲಿ ಅಪೌಷ್ಟಿಕ ಮಕ್ಕಳ ಅಂಕಿ-ಅಂಶಗಳನ್ನು ಸರ್ಕಾರ ದಾಖಲಿಸಿದೆ. ಕಳೆದ ವರ್ಷದ ಅಂಕಿಅಂಶಗಳನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸಿ ಕೇಂದ್ರಕ್ಕೆ ರವಾನಿಸಿದ್ದರೆ, ಈ ವರ್ಷದ ಅಂಕಿಅಂಶಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನೇರವಾಗಿ ಪೋಷಣ್‌ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ನಮೂದಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಸಸ್ಯಾಹಾರ, ಮಾಂಸಾಹಾರ ಭಿನ್ನತೆ ಸಲ್ಲದು ಎಂದಿದ್ದರು ಬಸವಣ್ಣ ಮೊಟ್ಟೆ ಮಾಂಸಾಹಾರವಾಗಿದ್ದು, ಅದನ್ನು ಮಕ್ಕಳಿಗೆ ಕೊಡಬೇಡಿ ಎಂದು ಇಂದು ದನಿ ಎತ್ತಿರುವವರು ಬಸವಣ್ಣನವರ ಅನುಯಾಯಿಗಳು ಎಂದು ಬಿಂಬಿಸಿಕೊಂಡಿದ್ದಾರೆ. ಆಹಾರ ಸಂಸ್ಕೃತಿಯ ಕುರಿತು ಬಸವಣ್ಣ ಇಂತಹ ಯಾವುದೇ ತಾತ್ಸರವನ್ನು ಹೊಂದಿರಲಿಲ್ಲ. ಬಸವಣ್ಣನವರ ಒಂದು ವಚನ ನಮ್ಮನ್ನು ಚಿಂತನೆಗೆ ಹಚ್ಚಬೇಕು.

  • “ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
  • ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
  • ಇನ್ಯಾವುದು ವಿಧಿಯಯ್ಯಾ
  • ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
  • ಜೀವಜಾಲದಲ್ಲಿದೆ ಚರಾಚರವೆಲ್ಲ
  • ಅದು ಕಾರಣ,

ಕೂಡಲ ಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು. ನಾವು ಮರ, ಗಿಡ, ಬಳ್ಳಿಗಳನ್ನೆಲ್ಲ ಕತ್ತರಿಸಿ ತಿನ್ನುತ್ತೇವೆ, ಪ್ರಾಣಿಗಳನ್ನು ಕೊಂದು ತಿನ್ನುತ್ತೇವೆ. ಈ ಇವುಗಳಿಂದ ಶರೀರವನ್ನು ಹೊರೆಯುತ್ತೇವೆ. ಇವೆಲ್ಲವೂ ಆಹಾರವೇ. ಇದು ದೋಷ. ಇದಕ್ಕೆ ಉತ್ತರ ಏನು? ಬಸವಣ್ಣ ಹೇಳುತ್ತಾರೆ- ಒಂದಿದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರ ಅಚರವೆಲ್ಲ; ಅದು ಕಾರಣ ಕೂಡಲ ಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋರ್ಷಿಗಳಾಗಿ ಬದುಕಿದರು- ಎಂದು ಅಂದರೆ ಮಾಂಸಾಹಾರ ತಿಂದರೂ, ಸಸ್ಯಾಹಾರ ತಿಂದರೂ ಜೀವಹಾನಿಯನ್ನು ಮಾಡಿದ ಹಾಗೆಯೇ. ನಾವು ಬದುಕಬೇಕಾದರೆ ನಾವು ಜೀವಿಗಳನ್ನೇ ತಿನ್ನಬೇಕಾಗುತ್ತದೆ. ಎಲ್ಲ ಜೀವಿಗಳಿಗೂ ಸಂವೇದನೆ ಇದೆ. ಅದು ಒಂದಿದ್ರಿಯ ಜೀವಿಯಾಗಲೀ, ಐದಿಂದ್ರಿಯ ಜೀವಿಯಾಗಿರಲಿ. ಹೀಗಾಗಿ ಪ್ರಕೃತಿ ಕೊಟ್ಟಿದ್ದನ್ನು ಲಿಂಗಕ್ಕೆ ಅರ್ಪಿಸಿ, ನೀವು ಇದನ್ನು ಸ್ವೀಕರಿಸಿದರೆ ಇದು ದೋಷ ಅನಿಸುವುದಿಲ್ಲ ಎಂದು ಹನ್ನೆರಡನೇ ಶತನಮಾನದಲ್ಲೇ ಹೇಳಿದ ಬಹುದೊಡ್ಡ ದಾರ್ಶನಿಕ ಬಸವಣ್ಣ ಎನ್ನುತ್ತಾರೆ.

ಬಾಳೆಹಣ್ಣು ಒಂದಲ್ಲಾ ಹತ್ತು ಕೊಟ್ಟರೂ ಮೊಟ್ಟೆಗೆ ಪರ್ಯಾಯವಲ್ಲ ಸಸ್ಯ ತರಕಾರಿಗಳಿಗೆ ಮೊಟ್ಟೆಗೆ ತಕ್ಕ ಪರ್ಯಾಯ ಆಹಾರಗಳನ್ನು ಕೊಡತಕ್ಕದ್ದು. ಬಾಳೆಹಣ್ಣು ಒಂದಲ್ಲಾ ಹತ್ತು ಕೊಟ್ಟರೂ ಪರ್ಯಾಯವಲ್ಲ. ಬೇಳೆಕಾಳು, ಎಣ್ಣೆಕಾಳುಗಳನ್ನು ಸರಿದೂಗಿಸಿ ಕೊಡತಕ್ಕದ್ದು. ತಕ್ಷಣ ಕೆಲವರಿಗೆ ಅನ್ನಿಸಬಹುದು, ಇದನ್ನೇ ಅವರಿಗೂ ಕೊಡಬಹುದಲ್ಲಾ ಎಂದು. ಇಲ್ಲಿ ಅವರವರ ಸಾಂಸ್ಕೃತಿಕ ಆಯ್ಕೆ, ಬಯಕೆ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ಮಾಪನ ಗಮನಿಸತಕ್ಕದ್ದು. ಕೊನೆಗೆ ಅಲ್ಲಮನ ವಚನವೊಂದನ್ನು ಅವಲೋಕಿಸುವುದು ಸೂಕ್ತ ಎನಿಸುತ್ತದೆ.

  • ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ, ಕೀವು ಕೇಳಿರೆ.
  • ಮದ್ಯವಲ್ಲವೇನು ಅಷ್ಟಮದಂಗಳು
  • ಮಾಂಸವಲ್ಲವೇನು ಸಂಸಾರಸಂಗ?
  • ಈ ಉಭಯವನತಿಗಳದಾತನೆ
  • ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು||
  • ಬಸವಣ್ಣನವರ ಬ್ಯಾನರ್‌ ಹಿಡಿದು ಮಾಂಸಾಹಾರ, ಸಸ್ಯಾಹಾರದ ವಿವಾದ ಸೃಷ್ಟಿಸುವವರಿಗೆ ಇದು ಅರ್ಥವಾಗುವುದೇ?

ಮಕ್ಕಳಿಗೆ ಮೊಟ್ಟೆಯನ್ನು ಕೊಡಲು ವಿರೋಧಿಸುವವರು ವಾಸ್ತವದಲ್ಲಿ ಜೀವವಿರೋಧಿಗಳಾಗಿದ್ದಾರೆ. ಇದು ಅರ್ಥವಾಗದೇ ವಿರೋಧಿಸುತ್ತಿರುವವರೂ ಇದ್ದಾರೆ, ಅರ್ಥವಾಗಿಯೂ ವಿರೋಧಿಸುತ್ತಿರುವವರು ಇದ್ದಾರೆ. ಇದೇ ದುರಂತ. ಕರ್ನಾಟಕ ರಾಜ್ಯ ಸರಕಾರ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಶಾಲೆ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಕೊಡುವುದರ ಜೊತಗೆ ಅಪೌಷ್ಟಿಕತೆ ಹೋಗಲಾಡಿಸಲು ಮುಂದಾದರೆ, ಮತ್ತೊಂದು ಕಡೆ ಮತಾಂಧರು ಮತ್ತು ಕಾವಿಗಳು ಊಟವನ್ನು ಧರ್ಮದ ಜೊತೆ ಬೆರಸಿ ಮಕ್ಕಳ ಆ ಹಕ್ಕನ್ನು ಕಿತ್ತುಕೊಳ್ಳಲು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ಮಕ್ಕಳಿಗೆ ಶಾಲೆಯಲ್ಲಿ ತತ್ತಿ ವಿತರಣೆ ಬರಿ ಅಪೌಷ್ಟಿಕತೆಗೆ ಅಷ್ಟೇ ಅಲ್ಲ ಅದೊಂದು ಕಲಿಕೆ ವಿಧಾನವನ್ನು ಪ್ರೇರೇಪಿಸುವ ಅಂಶವು ಆಗಿದೆ. ಇಂತಹ ವೈಜ್ಞಾನಿಕ ಸತ್ಯವನ್ನು ಬಿಟ್ಟು ಮೆದುಳು ಸತ್ತ ಮನುಷ್ಯರು ತತ್ತಿ ವಿತರಣೆ ವಿರೋಧಿಸುವುದು ಅಜ್ಞಾನವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here