ಕರ್ನಾಟಕ ಬ್ರಾಹ್ಮಣ ಮಹಾ ಸಂಘದ ಅಧ್ಯಕ್ಷೀಯ ಸ್ಥಾನದ ಚುನಾವಣೆ ಪ್ರಚಾರ ಸಭೆ

0
9

ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಬ್ರಾಹ್ಮಣ ಮಹಾ ಸಂಘದ ಅಧ್ಯಕ್ಷೀಯ ಸ್ಥಾನದ ಚುನಾವಣೆ ಪ್ರಚಾರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಘುನಾಥ ಎಸ್. ಮಾತನಾಡುತ್ತಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದಿಂದ ಅಮೂಲಾಗ್ರ ಬದಲಾವಣೆ ತರಬೇಕೆಂದು ನಿರ್ಧರಿಸಿದ್ದು, ಈ ಬಾರಿ ಹೊಸಬನಾದ ತನಗೆ ತಮ್ಮ ಮತ ನಿಡಿ ಅವಕಾಶ ನೀಡಬೇಕು ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಸಂಘದಲ್ಲಿ ಎಷ್ಟೋ ವರ್ಷಗಳಾದರೂ ಕೇವಲ ೪೫ ಸಾವಿರ ಸದಸ್ಯರು ಇರುವುದನ್ನು ೩ ಲಕ್ಷಕ್ಕೆ ಏರಿಸಬೇಕೆಂದುಕೊಂಡಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಮತದಾನ ಮಾಡುವ ವ್ಯವಸ್ಥೆ ಮಾಡಲಾಗುವುದು. ಪದಾಧಿಕಾರಿಗಳಿಗೆ ಜಿಲ್ಲಾವಾರು ಪ್ರಾತಿನಿಧ್ಯ ಸಿಗು ವಂತಾಗಲು ಕ್ರಮಕೈಗೊಳ್ಳಲಾಗುವುದು ಮಹಾಸಭಾಕ್ಕೆ ೧೦೦ ಕೋಟಿ ರೂ. ಸಂಗ್ರಹಿಸಿ ಬ್ರಾಹ್ಮಣರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಎನ್.ಕುಮಾರ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ, ಬ್ರಾಹ್ಮಣ, ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಜಗದೀಶ ಹುನಗುಂದ, ವಿದ್ಯಾಸಾಗರ ಕುಲಕರ್ಣಿ, ದತ್ತು ಪೂಜಾರಿ, ರಾಮಾಚಾರ ಗಂಟೆ, ಪಿ.ಎಚ್.ಕುಲಕರ್ಣಿ, ವತ್ಸಲಾ ನಾಗೇಶ, ಜಗನ್ನಾಥ ಕುಲಕರ್ಣಿ, ಕೃಷ್ಣಾಜಿ ಕುಲಕರ್ಣಿ ಇತರರಿದ್ದರು. ಅರುಣ ಕುಲಕರ್ಣಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here