ಗ್ರಾಮೀಣ ಭಾಗದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆಗೆ ಆಗ್ರಹ

0
10

ಹಾವೇರಿ: ಆಟೋರಿಕ್ಷಾಗಳಿಗೆ ಹಣ ಹೊಂದಿಸಲಾಗದ ಬಡ ವಿದ್ಯಾರ್ಥಿಗಳು ಕಲ್ಲುಕಡಿ ತುಂಬಿರುವ ಟ್ರ್ಯಾಕ್ಟರ್‌ಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕುಳಿತು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಇತ್ತೀಚೆಗೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಾಲಕಿಯೊಬ್ಬರು ಟ್ರ್ಯಾಕ್ಟರ್‌ ನಲ್ಲಿ ಶಾಲೆಗೆ ಪ್ರಯಾಣಿಸುತ್ತಿದ್ದಾಗ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಟ್ಟಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಗ್ರಾಮೀಣ ಭಾಗದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವುದೇ ದುರ್ಘ‌ಟನೆಗೆ ಕಾರಣ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಶಿರಹಟ್ಟಿ ತಾಲೂಕಿನ ಕಡಕೋಳ ಸೇರಿದಂತೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಶಾಲಾ, ಕಾಲೇಜುಗಳ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್‌ ಸೇವೆ ಕಲ್ಪಿಸಬೇಕು. ಕಡಕೋಳ ಗ್ರಾಮದ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಈ ಕುರಿತು ಸರಕಾರ ಅಲಕ್ಷ್ಯ ಮಾಡಿದರೆ ಎಬಿವಿಪಿಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಡಾ|ಪುನೀತಕುಮಾರ ಬೆನಕನವಾರಿ, ಜಿಲ್ಲಾ ಸಂಚಾಲಕ ರವಿ ಮಾನ್ವಿ, ಗಿರೀಶ ನರಗುಂದಕರ, ಹನುಂಮತ ಬಗಲಿ, ರವಿ ನರೇಗಲ್‌, ವೆಂಕಟೇಶ ವಾಲ್ಮೀಕಿ, ಅಭಿಷೇಕ, ಮಹೇಶ್‌ ಲಮಾಣಿ, ಗುರು ಶಿರಹಟ್ಟಿ, ರುದ್ರಗೌಡ ಕಳಸದ, ತ್ರಿಭುವನ್‌ ಕುಮಾರ್‌, ವೆಂಕಟೇಶ್‌, ಅಭಿಷೇಕ್‌, ಸಂತೋಷ್‌, ರಾಜಶೇಖರ, ವೀರೇಶ್‌, ಮಹೇಶ್‌, ಸತೀಶ್‌, ನಾಗರಾಜ್‌, ವೀರೇಂದ್ರ, ಸಿದ್ದಲಿಂಗೇಶ್ವರ ಅಕ್ಕಿ, ಮಂಜುನಾಥ್‌, ಜನಾರ್ದನ್‌, ಹನುಮಂತ ಹಳ್ಳೂರ, ಪೂಜಾ ಪೂಜಾರ, ಸ್ನೇಹಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here