ಎಸ್.ಬಿ. ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ ಜು.18ರಂದು

0
82

ಕಲಬುರಗಿ: ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಪೋಷಕರಾಗಿದ್ದ ದಿ. ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜು.18ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ರಂಗ ಸಂಗಮ ಕಲಾ ವೇದಿಕೆಯ ಕಾರ್ಯದರ್ಶಿ ಡಾ.‌ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

ಈ ಬಾರಿ ಹವ್ಯಾಸಿ ರಂಗಭೂಮಿ ಯ ಪ್ರತಿಭಾವಂತ ನಿರ್ದೇಶಕ ಡಾ. ಶ್ರೀಪಾದ ಭಟ್ ಧಾರೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಗುಲ್ಬರ್ಗ ವಿವಿ ಕುಲಸಚಿವ ಡಾ. ಸಿ. ಸೋಮಶೇಖರ, ಉಡುಪಿಯ ವಿದ್ವಾನ್ ಸುಧೀರ್ ರಾವ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ದಿ. ಎಸ್.ಬಿ. ಜಂಗಮಶೆಟ್ಟಿ ಕುರಿತು ವಾಣಿಜ್ಯ ತೆರಿಗೆಗಳ ನಿವೃತ್ತ ಉಪ ಆಯುಕ್ತ ಹಾಗೂ ರಂಗಕರ್ಮಿ ಎಚ್.ಎಸ್. ಬಸವಪ್ರಭು ಮಾತನಾಡಲಿದ್ದು, ಪ್ರಶಸ್ತಿ ಪುರಸ್ಕತರ ಕುರಿತು ಪತ್ರಕರ್ತ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಲಿದ್ದಾರೆ. ಸುಭಧ್ರಾದೇವಿ ಜಂಗಮಶೆಟ್ಟಿ, ರಂಗ ಸಂಗಮ ಕಲಾ ವೇದಿಕೆಯ ನಂದಾ ಕೊಲ್ಲೂರ ಉಪಸ್ಥಿತರಿರಲಿದ್ದಾರೆ. ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಹಾಗೂ ತಂಡಸವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

ಅಂದು ಸಂಜೆ 6.30ಕ್ಕೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶ್ರೀಪಾದ ಭಟ್ ನಿರ್ದೇಶನದ, ಸುಧಾ ಅಡುಕಳ ರಚನೆಯ, ವಿಧೂಷಿ ಅನಘಶ್ರೀ ಅಭಿನಯದ ಏಕವ್ಯಕ್ತಿ ರಂಗಪ್ರಯೋಗ-ನೃತ್ಯ ಗಾಥಾ ಕಾರ್ಯಕ್ರಮ ಜರುಗಲಿದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಕೋರಿದ್ದಾರೆ.

ಸುಭಧ್ರಾದೇವಿ ಜಂಗಮಶೆಟ್ಟಿ, ರಂಗ ಸಂಗಮ ಕಲಾ ವೇದಿಕೆಯ ನಂದಾ ಕೊಲ್ಲೂರ ಉಪಸ್ಥಿತರಿರಲಿದ್ದಾರೆ. ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಹಾಗೂ ತಂಡಸವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here