ಕಲಬುರಗಿ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಜಿ. ಸಂಗಾರವರ ವಿರುದ್ಧ ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ಸಲ್ಲಿಸಿದ್ದ ಖಾಸಗಿ ದೂರು ನ್ಯಾಯಾಲಯ ವಜಾಗೊಳಿಸಿದೆ.
ಸತ್ಯಾಂಶವುಳ್ಳ ವರದಿಗಳನ್ನು ಮುಚ್ಚಿಟ್ಟು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರ ದುರುಪಯೋಗದಿಂದ ಸರ್ಕಾರಕ್ಕೆ ವಂಚಿಸಿ ಬೃಹತ ಭ್ರಷ್ಟಾಚಾರವೆಸಗಿದ್ದಾರೆಂದು ತಪ್ಪು ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೆ (PCR ಸಂಖ್ಯೆ:430/2021) ದೂರಿನನ್ವಯ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 11ˌ 2021ರಂದು FIR ಅನ್ನು ದಾಖಲಿಸಿದ್ದರು.
ಡಿಸೆಂಬರ್ 2, 2021ರಂದು ಕರ್ನಾಟಕ ಘನ ಉಚ್ಛ ನ್ಯಾಯಾಲಯವು ಸತ್ಯಾಸತ್ಯತೆಯನ್ನು ಆಲಿಸಿ ಸದರಿ ಖಾಸಗಿ ದೂರಿನ ಆದೇಶವನ್ನು ಹಾಗೂ FIRನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.
ಶ್ರೀರಾಮಸೇನೆಯ ರಾಜ್ಯಾಧ್ಯಕ್ಷರಾದ ನಂತರ ಅಧಿಕಾರಿಗಳ ವಿರುದ್ಧ ಹೀಗೆ ಖಾಸಗಿ ದೂರನ್ನು ಸಲ್ಲಿಸುವುದು. ಶ್ರೀರಾಮಸೇನೆಯ ಬೈಲಾದಲ್ಲಿ ಇಲ್ಲದ ವಿಷಯಗಳು ಲಾಭದ ಉದ್ದೇಶಕ್ಕಾಗಿ ಕೇಳುವುದು. ಅಧಿಕಾರಿಗಳಿಗೆ ವಿನಾಕಾರಣ ತೊಂದರೆ ಕೊಡುವುದುˌ ಅಕ್ರಮ ಮರಳುಗಾರಿಕೆಯ ವಿರುದ್ಧ ದೂರು ನೀಡುವುದು ಅಲ್ಲದೆ ಹಣ ನೀಡಿದರೆ ದೂರು ವಾಪಸ್ ತೆಗೆದುಕೊಳ್ಳುವುದು ಸೇರಿದಂತೆ ಹಲವು ಆರೋಪ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಅವರ ಮೇಲಿವೆ.
ಈಗ ಉಚ್ಛ ನ್ಯಾಯಾಲಯ ಸಂಗಾ ಅವರ ವಿರುದ್ಧ ಸಲ್ಲಿಸಿದ್ದ ದೂರು ವಜಾ ಮಾಡಿರುವುದರಿಂದ ಸಿದ್ಧಲಿಂಗ ಸ್ವಾಮೀಜಿಗೆ ಮುಖಭಂಗವಾದಂತಾಗಿದೆ.