Monday, July 15, 2024
ಮನೆಬಿಸಿ ಬಿಸಿ ಸುದ್ದಿಸದಸ್ಯತ್ವ ಪಡೆದುಕೊಳ್ಳಲು ಅವಕಾಶ : ಬಾಬರ್ ಪಟೇಲ್

ಸದಸ್ಯತ್ವ ಪಡೆದುಕೊಳ್ಳಲು ಅವಕಾಶ : ಬಾಬರ್ ಪಟೇಲ್

ಶಹಾಬಾದ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ವತಿಯಿಂದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮತದಾರರ ಪಟ್ಟಿ ಪರಿ?ರಣೆ ಮತ್ತು ಸದಸ್ಯತ್ವ ಪಡೆದುಕೊಳ್ಳಲು ಮತ್ತೊಮ್ಮೆ ಅವಕಾಶ ನೀಡಲಾಗಿರುತ್ತದೆ.

ಈಗಾಗಲೇ ನವೆಂಬರ್ ೨೯ರ ರಾಜ್ಯ ಕಾರ್ಯಕಾರಿ ಸಭೆ ನಿರ್ಣಯದಂತೆ ಹಾಗೂ ಡಿಸೆಂಬರ್ ೪ರ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಸಂಘದ ಸದಸ್ಯತ್ವ ಅವಧಿ ವಿಸ್ತರಿಸಲು ನಿರ್ಧರಿಸಲಾಗಿದೆ.ಇದುವರೆಗೂ ಸದಸ್ಯತ್ವ ಹೊಂದಿರದ ಚಿತ್ತಾಪೂರ ತಾಲೂಕಿನ ಶಹಾಬಾದ ಹಾಗೂ ಕಾಳಗಿ ವಲಯದ ಪ್ರೌಢಶಾಲಾ ಶಿಕ್ಷಕರು ಸದಸ್ಯತ್ವ ಪಡೆದುಕೊಳ್ಳಲು ದಿನಾಂಕ ೨೦/೧೨/೨೧ ರಂದು ಕೊನೆಯ ದಿನಾಂಕವಾಗಿರುತ್ತದೆ.

ಸದಸ್ಯತ್ವ ಶುಲ್ಕವನ್ನು ಚಿತ್ತಾಪೂರ ತಾಲೂಕಾ ಸಂಘದ ಅಧ್ಯಕ್ಷ/ ಕಾರ್ಯದರ್ಶಿ ಅವರಿಗೆ ನೀಡಿ ಸದಸ್ಯತ್ವ ಪಡೆಯಬಹುದು.ಅಲ್ಲದೇ ಈಚೆಗೆ ಬಡ್ತಿ ಹಾಗೂ ವರ್ಗಾವಣೆ ಹೊಂದಿದ ಶಿಕ್ಷಕರು ಸದಸ್ಯತ್ವ ಪಡೆಯಬಹುದು.ಡಿಸೆಂಬರ್ ೨೦ರಲ್ಲಿರುವ ಅಂತಿಮ ಸದಸ್ಯರು ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಾರೆ.

ಆದ್ದರಿಂದ ಸದಸ್ಯತ್ವ ಹೊಂದಿರದ ಪ್ರೌಢಶಾಲಾ ಶಿಕ್ಷಕರು ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ ಎಂದು ತಾಲೂಕಾ ಅಧ್ಯಕ್ಷ ಬಾಬರ್ ಪಟೇಲ್ ತಿಳಿಸಿದ್ದಾರೆ. ಸಂಪರ್ಕಿಸಿ: ಬಾಬರ್- 9845254465,ಮಾರುತಿ-9686934666

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular