ಆಳಂದ: ತಾಲೂಕಿನ ನಿಂಗದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕು ಕರ್ನಾಡು ವಿಜಯ ಸೇನೆಯಿಂದ ೮೦ ಊಟದ ತಟ್ಟೆ ಹಾಗೂ ರಸಪ್ರಶ್ನೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ರಸ ಪ್ರಶ್ನೆಯಲ್ಲಿ ಪಾಲ್ಗೊಂಡ ೨೦ ತಂಡಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನವಾಗಿ ನೋಬುಕ್ ಮತ್ತು ಪೇನು ನೀಡಿ ವಿದ್ಯಾರ್ಥಿಗಳಿಗೆ ಪ್ರೇರಿಸಲಾಯಿತು.
ಊಟದ ತಟ್ಟೆ ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸದ ಸೇನೆಯ ತಾಲೂಕು ಅಧ್ಯಕ್ಷ ಗುರು ಬಂಗರಗಿ ಅವರು ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಜಯ ಸೇನೆಯಿಂದ ತಟ್ಟೆಗಳನ್ನು ನೀಡಿದ್ದು, ಅಲ್ಲದೆ, ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ರಸಪ್ರಶ್ನೆ ಕೈಗೊಂಡು ವಿಜೇತರಿಗೆ ಬಹುಮಾನ ನೀಡಿದ್ದು, ಈ ಮಾದರಿಯಲ್ಲಿ ಸಂಘಟನೆಗಳು ಮತ್ತು ಸಮುದಾಯಗಳು ಮುಂದೆ ಬಂದು ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣದ ಉನ್ನತಿಗೆ ಶ್ರಮಿಸಬೇಕಾಗಿದೆ ಎಂದರು.
ಮುಖ್ಯ ಶಿಕ್ಷಕ ವೀರಭದ್ರಯ್ಯ ಸ್ವಾಮಿ ಅವರು ಸೇನೆಯ ಕಾರ್ಯಕರ್ತರನ್ನು ಸ್ವಾಗತಿಸಿಕೊಂಡು ನೀಡಿದ ತಟ್ಟೆ ದೇಣಿಗೆಯನ್ನು ಪಡೆದು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ರಾಂಪುರೆ, ಗ್ರಾಮದ ಮಹೇಶ ನಿಂಬಾಳೆ, ಸಂತೋಷ ಹಂಚನಾಳೆ, ಮಲ್ಲು ಜಕಾಪೂರೆ, ಅನಿಲ ಮತ್ತು ಪ್ರಕಾಶ, ವಲಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಾಗರ ಪಾಟೀಲ, ನಿಂಗದಳಿ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ಸೇರಿ ಸೇನೆಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.