ವಿಧಾನ ಪರಿಷತ್ ಚುನಾವಣೆ ಶೇ ೯೯.೭೨೧ ಮತದಾನ

0
20

ಆಳಂದ: ಯಾದಗಿರಿ ಹಾಗೂ ಕಲಬುರಗಿಯ ಜಿಲ್ಲೆಗೆ ಚುನಾಯಿತ ಪ್ರತಿನಿಧಿಗಳ ಕ್ಷೇತ್ರಕ್ಕೆ ಸಂಬಂಧಿತ ವಿಧಾನ ಪರಿಷತ್ ಸದಸ್ಯರ ಆಯ್ಕೆ ಶುಕ್ರವಾರ ತಾಲೂಕಿನ ಗ್ರಾಮ ಪಂಚಾಯತ್ ಹಾಗೂ ಪಟ್ಟಣದ ಪುರಸಭೆಯಲ್ಲಿ ನಡೆದ ಚುನಾವಣೆ ಮತದಾನದಲ್ಲಿ ಶಾಸಕರು ಸೇರಿದಂತೆ ಆಯಾ ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮತದಾನ ಕೈಗೊಂಡಿದ್ದು, ಶೇ ೯೯.೭೨೧ರಷ್ಟು ಮತದಾನ ನಡೆದಿದೆ.

ನಿರಗುಡಿ ಗ್ರಾಪಂನಲ್ಲಿ ಓರ್ವ ಸದಸ್ಯ ಮೃತಪಟ್ಟಿದ್ದು ಇನ್ನೂರ್ವ ಅನಾರೋಗ್ಯ ಮತ್ತು ಮತ್ತೊಬ್ಬರು ಗೈರು ಸೇರಿ ಮೂವರು ಹಾಗೂ ಸಂಸದರ ಒಂದು ಮತ ಸೇರಿ ನಾಲ್ಕು ಮತಗಳು ಹೊರತು ಪಡಿಸಿದರೆ ಒಟ್ಟು ೭೨೦ ಮತದಾರರಲ್ಲಿ ೭೧೬ ಮಂದಿ ಮತಚಲಾಯಿಸಿದರು.
ಪಟ್ಟಣದ ಪುರಸಭೆ ಹಾಗೂ ಆಯಾ ಗ್ರಾಪಂಗಳಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರಿಂದ ೩೩೩ ಪುರುಷ ಹಾಗೂ ೩೮೩ ಮಹಿಳೆಯರು ಒಟ್ಟು ೭೧೬ ಮಂದಿ ಮತಚಲಾಯಿಸಿ ಶೇ. ೯೯.೭೨೧ ಮತದಾನವಾಗಿದೆ.

Contact Your\'s Advertisement; 9902492681

ಬೆಳಗಿನ ೮:೦೦ರಿಂದ ಮಧ್ಯಾಹ್ನ ೪:೦೦ಗಂಟೆಯವರೆಗೆ ೪೧ ಗ್ರಾಪಂ ಹಾಗೂ ೧ ಪುರಸಭೆ ಸೇರಿ ೪೨ ಮತಗಟ್ಟೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.

ಪುರಸಭೆ ಮತಗಟ್ಟೆಯಲ್ಲಿ ಶಾಸಕ ಸುಭಾಷ ಗುತ್ತೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ ಸೇರಿ ಇನ್ನಿತರ ಸದಸ್ಯರು ಮತ ಚಲಾಯಿಸಿದರು.

ಕೊಡಲಂಗರಗಾ ಗ್ರಾಪಂನಲ್ಲಿ ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ರುಕ್ಮಯ್ಯಾ ಗುತ್ತೇದಾರ, ಉಪಾಧ್ಯಕ್ಷ ಅನಂತರೆಡ್ಡಿ ಶರಣಗೌಡ ಸೇರಿ ಐವರು ಮಹಿಳಾ ಹಾಗೂ ಐವರು ಪುರುಷರು ಸೇರಿ ಇರುವ ೧೨ ಮಂದಿ ಸದಸ್ಯರು ಮತದಾನ ಕೈಗೊಂಡರು, ಶಾಂತಿಯುತವಾಗಿ ಮತದಾನ ನಡೆಯಿತು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುರ್ ಪಟೇಲ ಅವರು ತಿಳಿಸಿದ್ದಾರೆ.

ಜಿಡಗಾ ಗ್ರಾಪಂ ಮತಗಟ್ಟೆಯಲ್ಲಿ ೧೯ ಮತದಾರರಲ್ಲಿ ಅಧ್ಯಕ್ಷ ಸಿದ್ಧರಾಮ ಯಾದವಾಡ, ಉಪಾಧ್ಯಕ್ಷೆ ಜ್ಯೋತಿ ವಿ. ಪಾಟೀಲ ಸೇರಿ ಇನ್ನೂಳಿದವರು ಮತದಾನ ಕೈಗೊಂಡು ಶಾಂತಿಯುತವಾಗಿ ಮತದಾನ ನಡೆಯಿತು ಎಂದು ಅಭಿವೃದ್ಧಿ ಅಧಿಕಾರಿ ರಾಮದಾಸ್ ಅವರು ಹೇಳಿಕೊಂಡಿದ್ದಾರೆ.

ಹೊದಲೂರು ಗ್ರಾಪಂ ಮತಗಟ್ಟೆಯಲ್ಲಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ವೀರಭದ್ರಪ್ಪ ಖೋನೆ ಮತ್ತು ಉಪಾಧ್ಯಕ್ಷ ಗೈನಿನಾಥ ಡಿ. ಬಿರಾದಾರ ಸೇರಿ ಒಟ್ಟು ೨೧ ಮಂದಿ ಮತದಾನ ಕೈಗೊಂಡು ಶೇ ೧೦೦ ರಷ್ಟು ಮತದಾನ ನಡೆದಿದೆ. ಖಜೂರಿಯಲ್ಲಿ ಅಧ್ಯಕ್ಷ ಮಂಜುನಾಥ ಬಂಗರಗಿ, ಉಪಾಧ್ಯಕ್ಷೆ ಸೋನಾಯಿ ಗುರುಬಸಪ್ಪ ಹುಲ್ಲೆ ಸೇರಿ ಇರುವ ೧೭ ಮಂದಿ ಸದಸ್ಯರು ಮತಚಲಾಯಿಸಿ ಇಲ್ಲೂ ಸಹ ಶೇ. ೧೦೦ರಷ್ಟು ಮತದಾನವಾಗಿದೆ ಎಂದು ಪಿಡಿಒ ನಾಗೇಶ ಮೂರ್ತಿ ಅವರು ತಿಳಿಸಿದ್ದಾರೆ.

ಕೊರಳ್ಳಿ ಗ್ರಾಪಂನಲ್ಲಿ ಅಧ್ಯಕ್ಷ ಸುಭಾಷ ಸೇವು ರಾಠೋಡ ಮತ್ತು ಉಪಾಧ್ಯಕ್ಷ ಬಸಮ್ಮಾ ಬರಮಣೆ ಸೇರಿ ಒಟ್ಟು ೧೯ ಮಂದಿ ಮತದಾನ ಕೈಗೊಂಡಿದ್ದಾರೆ. ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಅಭಿವೃದ್ಧಿ ಅಧಿಕಾರಿ ಸಿದ್ಧರಾಮ ಬಿ. ಚಿಂಚೋಳಿ ತಿಳಿಸಿದ್ದಾರೆ.
ಬಹುತೇಕ ನಿರಗುಡಿ ಗ್ರಾಪಂ ಹೊರತು ಪಡಿಸಿ ಉಳಿದೆಯಲ್ಲ ೩೯ ಗ್ರಾಪಂ ಒಂದು ಪುರಸಭೆಯಲ್ಲಿ ಶೇ ೧೦೦ರಷ್ಟು ಮತದಾನ ನಡೆದಿದೆ ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here