ಕಲಬುರಗಿ; ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವಾರ್ಡ ನಂ.೫೨ರ ಸಂತೋಷ ಕಾಲೋನಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಚಾಲನೆ ನೀಡಿದರು. ಕಾಂಗ್ರೆಸ್ ದಕ್ಷಿಣ ವಲಯ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ ನೇತೃತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟ ರೇಡ್ಡಿ, ಈರಣ್ಣ ಝಳಕಿ, ದೀಲಿಪ ಪಾಟೀಲ, ಲಿಂಗರಾಜ ಕಣ್ಣಿ, ಲಾಲಅಹಮದ್ ಬಾಂಬೆ ಸೇಠ, ಅಭಿಷೇಕ ಪಾಟೀಲ, ಭೀಮರಾಯ ಪೂಜಾರಿ ಮದರಿ, ಶರಣಗೌಡ ಕೊಳಕೂರ, ಅರುಣಕುಮಾರ ವಿಭೂತಿ, ಬಸವರಾಜ ಪಾಟೀಲ, ಮಹಾಂತೇಶ ಪಾಟೀಲ, ಮಂಜುನಾಥ ಬಿರಾದಾರ, ನೀತಿಕುಮಾರ ಪಾಟೀಲ, ಬಂಡೇಪ್ಪ ಗೌಡ, ವಿರೇಶ, ಗೋವಿಂದ, ಮಹೇಂದ್ರ ಗೋಳಾ, ಸುಶೀಲ ಗಾಯಕವಾಡ, ಧನರಾಜ ಪುಜಾರಿ ಇದ್ದರು.