ಕಲಬುರಗಿ; ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವಾರ್ಡ ನಂ.೫೪ರ ತಾರಫೈಲ್ ಬಡಾವಣೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಂಕ ಕಾಂಗ್ರೆಸ್ ದಕ್ಷಿಣ ಅಧ್ಯಕ್ಷ ನೀಲಕಂಠರಾವ ಮೂಲಗೆ, ಮುಖಂಡರಾದ ಲಿಂಗರಾಜ ತಾರಫೈಲ, ವೆಂಕಟ ರೇಡ್ಡಿ, ಈರಣ್ಣ ಝಳಕಿ, ದೀಲಿಪ ಪಾಟೀಲ, ಲಿಂಗರಾಜ ಕಣ್ಣಿ, ಲಾಲಅಹಮದ್ ಬಾಂಬೆ ಸೇಠ, ದಿಗಂಬರ ತ್ರೀಮೂತ್ರಿ, ಸುರೇಶ ಇಟ್ಟಗಿ, ಶಾಂತು, ರಂಗಪ್ಪ, ಕೇಂಚಪ್ಪ ಗುತ್ತೇದಾರ ಇದ್ದರು.