ಕಲಬುರಗಿ: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಕ್ರೀಡಾ ಪಟ್ಟುಗಳಿಗೆ ಕ್ರೀಡಾಂಗಣ ನಿರ್ಮಿಸಬೇಕೆಂದು ರಟಕಲ್ ರಾಯಲ್ಸ್ ಕ್ರೀಡಾ ತಂಡದ ನಾಯಕರು ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದ್ದಾರೆ.
ಭಾನುವಾರ ಗ್ರಾಮದ ಪ್ರೌಢ ಶಾಲೆಯಲ್ಲಿ ಯುವ ಜಾಗೃತಿ ವೇದಿಕೆ ವತಿಯಿಂದ ಕ್ರೀಡಾ ಸಮಾಗ್ರಿ ವಿತರಣೆ ಸಭೆಯಲ್ಲಿ ರಟಕಲ್ ರಾಯಲ್ಸ್ ತಂಡದ ನಾಯಕರಾದ ಶಂಗಮೇಶ್ ಎಂ.ಕೆ, ಶ್ರೀಕಾಂತ, ಶಬ್ಬಿರ್ ಹಾಗೂ ಸತೀಶ್ ಒತ್ತಾಯಿಸಿದರು.
ಕ್ರೀಡಾಂಗಣ ಇಲ್ಲದೇ ಪ್ರತಿಭಾವಂತ ಕ್ರೀಡಾ ಪಟ್ಟುಗಳಿಗೆ ಅಭ್ಯಾಸ ಮಾಡಲು ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳು ಇದ್ದು, ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಜಾಗೃತಿ ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ, ಸಂಗಮೇಶ್ ಎಂ.ಕೆ, ಸತೀಶ್, ಅಲ್ತಾಫ್, ಶಬ್ಬಿರ್ ಅಲಿ, ಶ್ರೀಕಾಂತ, ಪ್ರಭಾಕರ್, ತಯ್ಯಬ್ ಅಲಿ, ಆಕಾಶ್ ಆರ್.ಕೆ, ಸಚೀನ್, ಜಗನ್ನಾಥ್, ಸಿದ್ದು, ಪ್ರವೀಣ್, ಮಶಾಕ್, ಆಕಾಶ್ ಎಂ.ಎಚ್, ವಿಶಾಲ್, ಸಂಜುಕುಮಾರ್, ನೂರ್, ಅಭಿಶೇಖ್, ವಿನೋದ್, ಸಂಗಮೇಶ್, ನವೀನ್, ಪ್ರದೀಪ್, ವಿಕಾಸ್, ವಿಶೇಶ್, ಮಹೇಬೂಬ್, ಅಭಿಶೇಕ್, ಮೋಹಿನ್, ಅಣ್ಣಪ್ಪ, ರೇವಣಸಿದ್ದ ಹಾಗೂ ಆಸೀಫ್ ಸೇರಿದಂತೆ ಹಲವರು ಇದ್ದರು.