ಕಲಬುರಗಿ: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಕ್ರೀಡಾ ಪಟ್ಟುಗಳಿಗೆ ಯುವ ಜಾಗೃತಿ ವೇದಿಕೆ ವತಿಯಿಂದ ಕ್ರೀಡಾ ಸಮಾಗ್ರಿ ವಿತರಿಸಲಾಯಿತು. ಯುವ ಜಾಗೃತಿ ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ ಅವರ ನೇತೃತ್ವದಲ್ಲಿ ಕ್ರೀಡಾ ಸಮಾಗ್ರಿಗಳಾದ ಕ್ರಿಕೆಟ್ ಸ್ಟಾಂಪ್, ಕ್ರಿಕೆಟ್ ಚಂಡು, ವಾಲಿಬಾಲ್, ನೇಟ್, ಥ್ರೋಬಾಲ್, ನೇಟ್ ಸೇರಿದಂತೆ ಕ್ರೀಡಾ ಕಿಟ್ ಹಸ್ತಾಂತರಿಸಿದರು.
ಗ್ರಾಮೀಣ ಭಾಗದ ಕ್ರೀಡಾ ಪಟ್ಟಿಗಳನ್ನು ಮುಖ್ಯವಾಹಿನಿಗೆ ತರುವ ಅಗತ್ಯವಿದ್ದು, ಸರಕಾರ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಚುರುಕಾಗಿ ಕಾರ್ಯಾನಿರ್ವಹಿಸಬೇಕಾಗಿದೆ ಎಂದು ಒತ್ತಾಯಿಸಿದರು. ಅದೇ ಗ್ರಾಮೀಣ ಭಾಗದ ಕ್ರೀಡಾ ಪಟ್ಟುಗಳು ತನ್ನ ಪ್ರತಿಭೆಗಳ ಮೂಲಕ ದೇಶದಲ್ಲಿ ತನ್ನ ಛಾಪು ಮುಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಗಮೇಶ್ ಎಂ.ಕೆ, ಸತೀಶ್, ಅಲ್ತಾಫ್, ಶಬ್ಬಿರ್ ಅಲಿ, ಶ್ರೀಕಾಂತ, ಪ್ರಭಾಕರ್, ತಯ್ಯಬ್ ಅಲಿ, ಆಕಾಶ್ ಆರ್.ಕೆ, ಸಚೀನ್, ಜಗನ್ನಾಥ್, ಸಿದ್ದು, ಪ್ರವೀಣ್, ಮಶಾಕ್, ಆಕಾಶ್ ಎಂ.ಎಚ್, ವಿಶಾಲ್, ಸಂಜುಕುಮಾರ್, ನೂರ್, ಅಭಿಶೇಖ್, ವಿನೋದ್, ಸಂಗಮೇಶ್, ನವೀನ್, ಪ್ರದೀಪ್, ವಿಕಾಸ್, ವಿಶೇಶ್, ಮಹೇಬೂಬ್, ಅಭಿಶೇಕ್, ಮೋಹಿನ್, ಅಣ್ಣಪ್ಪ, ರೇವಣಸಿದ್ದ ಹಾಗೂ ಆಸೀಫ್ ಸೇರಿದಂತೆ ಹಲವರು ಇದ್ದರು.