ಕಲಬುರಗಿ: ಆರೋಗ್ಯವಂತ ಶಿಶು ದೇಶದ ಸಂಪತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಬಳೆ ಕರೆ,. ಬಂದರವಾಡ ಅಂಗನವಾಡಿ ಕೇಂದ್ರ ೩ ರಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ತಾಯಿಯಂದಿರು 6 ತಿಂಗಳಿಂದ 1 ವರ್ಷದ ಮಕ್ಕಳನ್ನು ಕರೆತಂದಿದ್ದರು. ಅಲ್ಲದೆ ಗರ್ಭಿಣಿಯರು ಬಾಣಂತಿಯರು ಭಾಗವಹಿಸಿದ್ದರು.
ಬಂದಂತಹ ಮಕ್ಕಳಿಗೆ ತೂಕ ಎತ್ತರ ಮತ್ತು ತಾಯಂದಿರು ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಂಡ ಮಾಹಿತಿ ಪಡೆದು ಬಂದ ಮಕ್ಕಳಲ್ಲಿ ಸ್ವಚ್ಛತೆ ಕಡೆ ಗಮನವಿರಿಸಿ ಪ್ರಥಮ ಮನಿಷ್ ತಂದೆ ಮಹಾಂತೇಶ್ 300 ರೂಗಳು, ದ್ವಿತೀಯ ಶ್ರಾವಣ್ಯ ತಂದೆ ಶ್ರೀಶೈಲ ರೂಪಾಯಿ 200, ತೃತಿಯ ಯಲ್ಲಾಲಿಂಗ ಪ್ರಭಾಕರ ಇವರುಗಳು ವಿಜೇತರಾದರು ಸದರಿ ಮಕ್ಕಳಿಗೆ ನಗದು ಬಹುಮಾನವನ್ನು ನೀಡಲಾಯಿತು. ತದನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಗೊಬ್ಬುರ್ ಬಿ ಮಾತನಾಡುತ್ತಾ ಕಾರ್ಯಕ್ರಮದ ಉದ್ದೇಶವನ್ನು ವಿವರಿಸುತ್ತಾ ಇಲ್ಲಿ ಬಹುಮಾನ ಮುಖ್ಯವಲ್ಲ ಮಕ್ಕಳ ವಯಸ್ಸಿಗೆ ತಕ್ಕಂತೆ ತೂಕ ಬೆಳವಣಿಗೆ ಹಾಗೂ ಅವರ ಸ್ವಚ್ಛತೆಗೆ ಮಹತ್ವವನ್ನು ನೀಡಿದ್ದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಯಾವ ತಾಯಿಯು ಮರಣವನ್ನು ಸಂಭವಿಸದೆ ಹಾಗೂ ಹುಟ್ಟುಹಬ್ಬವನ್ನು ಆಚರಿಸುವ ಮುಂಚೆಯೇ ಶಿಶು ಮರಣವನ್ನು ಆಗದಂತೆ ಎಚ್ಚರಿಕೆ ವಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಅದಕ್ಕಾಗಿ ಯಾವತ್ತು ಬಹುಮಾನ ಬಂದಿಲ್ಲ ಎಂದು ಬೇಜಾರಾಗಿದೆ.
ತಾವೆಲ್ಲರೂ ಆರೋಗ್ಯವಂತ ತಾಯಿ ಹಾಗೂ ಮಗು ಆಗಲಿ ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ವಿವರಿಸುತ್ತಾ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳಾದ ವಿತರಣೆ ಸೌಲಭ್ಯ ಅದರ ಉಪಯೋಗ, ಪ್ರತಿ ತಿಂಗಳು ಒಂಬತ್ತು ನೇ ತಾರೀಖಿನಂದು ನಡೆಯುವ ಪ್ರಧಾನಮಂತ್ರಿ ಮಾತೃತ್ವ ಸಂರಕ್ಷಣಾ ಅಭಿಯಾನ ಅದರಲ್ಲಿ ಗರ್ಭಿಣಿ ತಾಯಂದಿರು ತಪಾಸಣೆ ಉಚಿತವಾಗ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ಏಳು ಗ್ರಾಮ ಗಿಂತ ಕಡಿಮೆ ಇರುವ ತಾಯಂದಿರಿಗೆ ಉಚಿತವಾಗಿ ರಕ್ತವನ್ನು ನೀಡುವ ಹಾಗೂ ಉಚಿತ ಪ್ರಯೋಗಾಲಯ ಮುಂತಾದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ನಂತರ 10 ಮಾರಕ ಗಳ ವಿರುದ್ಧ ಒಂದು ವರ್ಷ ತುಂಬುವುದರೊಳಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ಸೌಲಭ್ಯಗಳನ್ನು ಕೂಡ ಪಡೆಯುವಂತೆ ತಿಳಿಸಿದರು ನಂತರ ಕೋವಿಡ್ 19 ಸೋಂಕಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಹಾಗೂ ಗರ್ಭಿಣಿಯರು ಬಾಣಂತಿಯರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳುವಂತೆ ಇದೇ ಸಂದರ್ಭದಲ್ಲಿ ತಾಯಂದಿರಿಗೆ ಮಾಹಿತಿ ನೀಡಿದರು. ತದನಂತರ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಕುಮಾರಿ ಭುವನೇಶ್ವರಿ ಅವರು ತಾಯಿಯ ಎದೆ ಹಾಲಿನ ಮಹತ್ವ, ಕಾಂಗ್ರೋ ಮದರ್ ಕೇರ್, ನವಜಾತ ಶಿಶುವಿನ ಆರೈಕೆ, ಬಾಣತಿ ಆರೈಕೆ ಕುರಿತು ಮಾಹಿತಿ ನೀಡಿದರು.
ನಂತರ ಶ್ರೀಮತಿ ರಾಜೇಶ್ವರಿ ಸಮುದಾಯ ಆರೋಗ್ಯ ಕಾಳಜಿ ಅಧಿಕಾರಿಗಳು ಪೌಷ್ಟಿಕ ಆಹಾರ ಹೆಣ್ಣು ಮಗುವಿನ ಮಹತ್ವ, ವೈಯಕ್ತಿಕ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಯಂದಿರು ಗರ್ಭಿಣಿಯರು , ಆಶಾ ಕಾರ್ಯಕರ್ತರು, ಅಜಿಮ್ ಪ್ರೇಮ್ಜಿ ಸ್ವಯಂಸೇವಕರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಅಂಗನವಾಡಿ ಕೇಂದ್ರದ ಕಾರ್ಯಕರ್ತರಾದ ಸುನಂದಾ ಅವರು ನಡೆಸಿಕೊಟ್ಟರು, ನಂತರ ನಿರಾಮಯೆ ಸಂಸ್ಥೆಯ ಸಂಜೀವ್ ಹಾಗೂ ಅಶ್ವಿನಿ ಅವರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಗರ್ಭಿಣಿಯರಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ ಅದರ ತಪಾಸಣೆಯ ಮಹತ್ವವನ್ನು ತಾಯಂದಿರಿಗೆ ತಿಳಿಸಿದರು ಅದರಲ್ಲಿ ವಿಶೇಷವಾಗಿ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ನಂತರ ಕಾರ್ಯಕ್ರಮ ಮರಿಯಮ್ಮ ಆಶಾ ಕಾರ್ಯಕರ್ತೆಯ ವಂದನೆಯೊಂದಿಗೆ ಮುಕ್ತಾಯಗೊಂಡಿತು