ಶಹಾಬಾದ:ಕುರುಬ ಸಮುದಾಯದ ಎಲ್ಲಾ ಜನರು ಒಂದಾಗಿ ಸಮಾಜದ ಏಳ್ಗೆಗಾಗಿ ಶ್ರಮಿಸಿ ಎಂದು ಗೊಂಡ ಕುರುಬ ಸಂಘದ ಅಧ್ಯಕ್ಷ ಮಹಾಂತೇಶ ಕೌಲಗಿ ಹೇಳಿದರು.
ಅವರು ಸೋಮವಾರ ನಗರದ ಮರಗೋಳ ಕಾಲೇಜಿನ ಬಳಿಯ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಗೊಂಡ ಕುರುಬ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪದಾಧಿಕಾರಿಗಳು ಆಯ್ಕೆಯಾದ ನಂತರ ಸಮಾಜದ ಏಳ್ಗೆಗೆ ಸದಾಕಾಲ ಶ್ರಮಿಸಬೇಕು.ಸಮಾಜದ ಜನರನ್ನು ಸರಿಯಾದ ದಿಕ್ಕಿಗೆ ಸಾಗಲು ಪ್ರೇರೇಪಿಸಬೇಕು.ಅಲ್ಲದೇ ಸಮುದಾಯದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು.ಶೈಕ್ಷಣಿಕವಾಗಿ,ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ನಡೆಯಬೇಕಾಗಿದೆ.ಅದಕ್ಕಾಗಿ ಸಮುದಾಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ.ಎಲ್ಲರೂ ಒಂದಾಗಿ, ಇತರ ಸಮಾಜದೊಂದಿಗೆ ಒಳ್ಳೆಯ ರೀತಿಯಲ್ಲಿ ಬೆರೆಯೋಣ ಎಂದರು.
ಮಲ್ಲಿಕಾರ್ಜುನ ಪೂಜಾರಿ ಭಂಕೂರ ಮಾತನಾಡಿದರು. ಕುರುಬ ಸಮಾಜದ ಮುಖಂಡ ನಿಂಗಪ್ಪ ಹೇರೂರ್, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಗೌರವ ಅಧ್ಯಕ್ಷ ಡಿ.ಸಿ. ಹೊಸಮನಿ, ರೇವಣಸಿದ್ದಪ್ಪ ಹರಸೂರ, ನಿಂಗಣ್ಣ ಪೂಜಾರಿ ಇವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷ-ಸಾಯಬಣ್ಣ ಕೊಲ್ಲೂರ್, ಗೌರವ ಅಧ್ಯಕ್ಷ-ದಶರಥ ಗಿರಿಣಿ, ಕಾರ್ಯಧ್ಯಕ್ಷರಾದ- ಸುರೇಶ ಕುಂಟನ,ಶಿವಾಜಿ ಧರೆಪಗೋಳ, ಉಪಾಧ್ಯಕ್ಷರಾದ- ಹುಣಚಪ್ಪ ಮರತೂರ, ವಿಜಯಕುಮಾರ್ ಮುಗಳನಾಗಾವ,ಸಂತೋ? ಪೂಜಾರಿ, ಬಸವರಾಜ ಮುಡಬುಳ ಹಾಗೂ ಶಿವಾನಂದ ಹಳೆ ಶಹಾಬಾದ, ಪ್ರಧಾನ ಕಾರ್ಯದರ್ಶಿ- ಸದಾಶಿವ ಮದ್ರಿಕಿ, ಖಂಜಾಚಿ- ಶಿವುಕುಮಾರ ತರನಳ್ಳಿ, ಸಹಕಾರ್ಯದರ್ಶಿ-ಭೂತಳಿ ಪೂಜಾರಿ,ಆಕಾಶ ಹಳೆ ಶಹಾಬಾದ, ಭೀಮಾಶಂಕರ ಕಡಿಹಳ್ಳಿ, ಸಂಘಟನೆ ಕಾರ್ಯದರ್ಶಿಗಳಾದ- ಯಲ್ಲಾಲಿಂಗ ಕರಗಾರ, ಯಲ್ಲಾಲಿಂಗ ನಾಗೂರೆ,ಶಿವುಕುಮಾರ ಶಂಕರವಾಡಿ,ದೇವಿಂದ್ರಪ್ಪ ಭಂಕೂರ,ಮಹೇಶ ಕಡೆಹಳ್ಳಿ, ಸಿದ್ದಪ್ಪ ಮುತ್ತಗಿ, ಮಲಗೊಂಡ ತರನಳ್ಳಿ ನೇಮಕ ಮಾಡಲಾಯಿತು.
ಈ ಸಭೆಯಲ್ಲಿ ಮುಖಂಡರಾದ ಸುನೀಲ ಪೂಜಾರಿ, ಮಂಜುನಾಥ ದೊಡ್ಡಮನಿ, ವಿಜಯಕುಮಾರ ಕಂಟಿಕಾರ, ಸಂಗಪ್ಪ ಕಂಟಿಕಾರ, ಮಲ್ಲು ಜಡಿ ಇತರರು ಇದ್ದರು.