ಕಲಬುರಗಿ: ನಗರದ ಶಹಾ ಬಜಾರ ಹತ್ತಿರವಿರುವ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ಕೋವಿಡ್-೧೯ ತಪಾಸಣಾ ಶಿಬಿರ ಹಾಗೂ ೨ನೇ ಹಂತದ ಲಸಿಕೆ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್ ರಹೀಮ್ ಅವರು ಚಾಲನೇ ನೀಡಿ, ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಬೇಕು. ಸರ್ಕಾರದ ನಿಯಮಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಕೊರೊನಾ ಮುಕ್ತ ಸಮಾಜ ನಿರ್ಮಿಸಲು ಮುಂದಾಗಬೇಕು. ಮಕ್ಕಳು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಇದಕ್ಕೆ ಜಾಗೃತಿ ಮುಖ್ಯ ಎಂದರು.
ಸಂಸ್ಥೆಯ ಅಧ್ಯಕ್ಷೆ ಡಾ, ಭಾಗೀರಥಿ ಗುಡ್ಡೇವಾಡಿ ಅವರು ಅಧ್ಯಕ್ಷತೆ ವಹಿಸಿ, ಕೊರೊನಾ ಬಗ್ಗೆ ಭಯ ಬೇಡ, ಓಮಿಕ್ರಾನ್ ಕುರಿತು ಎಲ್ಲರು ಎಚ್ಚರದಿಂದಿರಬೇಕು. ಕೋವಿಡ್ ಲಸಿಕೆಯನ್ನು ತಪ್ಪದೇ ಹಾಕಿಸಿ ಕೊಳ್ಳುವಂತೆ ಮನವಿ ಮಾಡಿದರು.
ಶಾಹ ಬಜಾರಿನ ವೈದ್ಯಾಧಿಕಾರಿ ಡಾ, ಅನುಪಮಾ, ಶುಶ್ರೂಷಕಿ ಆಶಾ, ಸಂಗೀತಾ, ಗುರುರಾಜ, ಬಸಮ್ಮಾ, ಅನೀಲ ಮತ್ತು ಶರಣು ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಉಮಾ, ಹಣಮಂತರಾಯ ಗುಡ್ಡೇವಾಡಿ, ವಿವೇಕಾನಂದ ಪಾಟೀಲ, ಅಶ್ವೀನಿ ಅಣ್ಣಪ್ಪನವರ್, ಪೂಜಾ ಪಾಟಿಲ, ವನಜಾಕ್ಷೀ ಪಾಟೀಲ, ಸಿದ್ದರಾಮ ಕಲಬುರಗಿ, ಚೆನ್ನವೀರಯ್ಯ ಸ್ವಾಮಿ, ಸತೀಶ ತುಮಕೂರ ಭಾಗವಹಿಸಿದರು. ಒಟ್ಟು ೬೫ ವಿದ್ಯಾರ್ಥಿನಿಯರಿಗೆ ಕೋವಿಡ್-೧೯ ಲಸಿಕೆ ನೀಡಲಾಯಿತು. ಕೆಲ ಮಕ್ಕಳ ಆರೋಗ್ಯ ತಪಾಸಣೆ ನೆರವೇರಿತು.