ಶಹಾಬಾದ: ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತಿಗೂ ನಿಷ್ಪ್ರಯೋಜಕವಾಗುದಿಲ್ಲ.ಆದ್ದರಿಂದ ಮಕ್ಕಳು ಹೆಚ್ಚು ಹೆಚ್ಚು ಕಲಿತು ಜ್ಞಾನಿಗಳಾಗಬೇಕೆಂದು ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.
ಅವರು ನಗರದ ಲಕ್ಷ್ಮಿ ಗಂಜ್‌ನಲ್ಲಿ ಆಯೋಜಿಸಲಾದ ನೂತನ ಪ್ರಜ್ಞಾ ನವೋದಯ ಕೋಚಿಂಗ್ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ. ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು.ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ.ಈ ಭಾಗದ ಮಕ್ಕಳು ನವೋದಯ ಪರೀಕ್ಷಾ ಸಿದ್ಧತೆಗೆ ತಾಲೂಕಿನಲ್ಲಿ ಕೋಚಿಂಗ್ ಕೇಂದ್ರ ಪ್ರಾರಂಭವಾಗಿದ್ದು ಅದರ ಲಾಭವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಪಡೆದಕೊಳ್ಳಬೇಕೆಂದು ಹೇಳಿದರು.
ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಮಾತನಾಡಿ, ಹಿಂದುಳಿದ ಕಲ್ಲಿನ ಗಣಿಗಾರಿಕೆಯ ಪ್ರದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಎಲ್ಲರನ್ನು ಹುಬ್ಬರಿಸವಂತೆ ಮಾಡಬೇಕಾಗಿರುವುದು ವಿದ್ಯಾರ್ಥಿಗಳ ಕರ್ತವ್ಯ. ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಠಿಸುವ ನಿಟ್ಟಿನಲ್ಲಿ ಕೋಚಿಂಗ್ ಕೇಂದ್ರವನ್ನು ತೆರೆಯಲಾಗಿದೆ. ಅದರ ಲಾಭವನ್ನು ಪಡೆದುಕೊಂಡು ಶ್ರದ್ಧೆಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನಗರದಲ್ಲಿ ಕೋಚಿಂಗ್ ಕೇಂದ್ರಗಳು ಇದರುವುದೇ ಅಪರೂಪ.ಇಲ್ಲಿ ಪ್ರಜ್ಞಾ ಕೋಚಿಂಗ್ ಕೇಂದ್ರವನ್ನು ತೆರೆದು ಕಲಿಕಾ ವಾತಾವರಣ ನಿರ್ಮಿಸಲು ಹೊರಟಿದೆ.ಆಸಕ್ತರು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಶಿಕ್ಷಕ ಅಖಿಲೇಶ ಕುಕರ್ಣಿಹಾಗೂ ಉಪನ್ಯಾಸಕ ಮರೆಪ್ಪ ಮೇತ್ರೆ ಮಾತನಾಡಿ,ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ , ಕಲಿಸಿದವರ ಹೆಸರನ್ನು ತರುವಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು. ಸುರೇಖಾ.ಪಿ.ಮೇತ್ರೆ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ಪ್ರವೀಣ ರಾಜನ್,ಪಿ.ಎಸ್.ಮೇತ್ರೆ,ರಸಿಕಾ.ಎಸ್, ದೇವೆಂದ್ರಪ್ಪ ಕಾರೊಳ್ಳಿ, ಲೋಹಿತ ಕಟ್ಟಿ, ಶಂಕರಜಾನಾ, ಮಹ್ಮದ್ ಖದೀರ್,ಶಿವಶಾಲಕುಮಾರ ಪಟ್ಟಣಕರ್,ಜೈಭೀಮ ರಸ್ತಾಪೂರ,ಸಿದ್ದು ವಾರಕರ್,ಮಲ್ಲಣ್ಣ ಕಾರೊಳ್ಳಿ, ಅಲ್ಲಮ ಪ್ರಭು, ರವಿ ಬೆಳಮಗಿ ಇತರರು ಇದ್ದರು.