ಶಹಾಬಾದ:ಕಲಬುರಗಿ ವಿಧಾನ ಪರಿ?ತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಮುಖಂಡೆ ಜಯಶ್ರೀ ಮತ್ತಿಮಡು ನೇತೃತ್ವದಲ್ಲಿ ನೆಹರು ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ನೆಹರು ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ಮಾಡಿ ಹ? ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡೆ ಜಯಶ್ರೀ ಮತ್ತಿಮಡು, ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಇಂದು ಬಿಜೆಪಿ ಅಭ್ಯರ್ಥಿಗಳು ಹಲವೆಡೆ ಗೆಲುವು ಸಾಧಿಸಿದ್ದಾರೆ. ಕಲಬುರಗಿ ವಿಧಾನಪರಿಷತ್ ಚುನಾವಣೆಯಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಬಿ.ಜಿ.ಪಾಟೀಲರ ಗುಣಕ್ಕೆ ಮತದಾರರು ಮತ ನೀಡುವ ಮೂಲಕ ಗೆಲ್ಲಿಸಿದ್ದಾರೆ.ಮುಂಬರುವ ದಿನಗಳಲ್ಲಿ ಅವರು ಜನಪರವಾದ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ.
ಮಹಾಮಾರಿ ಕೊರೋನಾ ಸಂಕ?ದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೇವೆ ಮಾಡಿದ್ದಾರೆ. ಬಿ.ಜಿ.ಪಾಟೀಲ ಗೆಲ್ಲಿಸುವ ಮೂಲಕ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ.ಅಲ್ಲದೇ ಬಿಜೆಪಿ ಕಡೆ ಮತದಾರರ ಒಲವು ಇದೆ ಎಂದು ಸಾಬೀತಾಗಿದೆ ಎಂದರು.
ಬಿಎಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪುರ್, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಜಯಶ್ರೀ ಸೂಡಿ, ಚಂದ್ರಕಾಂತ ಗೊಬ್ಬುರಕರ್, ಕನಕಪ್ಪ ಡಂಡುಲಕರ್, ನಿಂಗಣ್ಣ ಹುಳಗೋಳಕರ್, ವಿರೇಶ.ಎಸ್.ಬಂದಳ್ಳಿ ಭೀಮಯ್ಯ ಗುತ್ತೆದಾರ, ನಾಗರಾಜ ಮೇಲಗಿರಿ, ಸದಾನಂದ ಕುಂಬಾರ, ದಿನೇಶ ಗೌಳಿ, ಯಲ್ಲಪ್ಪ ದಂಡಗುಲಕರ್, ದೇವಿಂದ್ರಪ್ಪ ಯಲಗೋಡಕರ್,ಸಂಜು ಕೋರೆ, ರಾಜು ಕುಂಬಾರ,ಸತೀಶ, ಆಶಿಶ ಮಂತ್ರಿ, ಬಸ್ಸು ದೇವಣಿ, ವಿಜಯಕುಮಾರ ಮಾಣಿಕ್, ಶಾಂತಕುಮಾರ ಮಾಣಿಕ್, ಮರಲಿಂಗ ಗಂಗಭೋ, ರವಿ ಸಣತಮ ಗೋಳಾ, ಶರಣು ಹಲಕರ್ಟಿ,ಶಾಂತಪ್ಪ ಪೂಜಾರಿ ಸೇರಿದಂತೆ ಮಹಿಳಾ ಕಾರ್ಯಕರ್ತರು ಇದ್ದರು.